ತಿಪಟೂರು:ತಾಲ್ಲೋಕಿನಲ್ಲಿ ಕಂದಾಯ ಇಲಾಖೆ ಹಾಗೂ ಪಿಡಿಒಗಳ ಮೇಲೆ ಸಾರ್ವಜನಿಕ ಹಲವಾರು ದೂರುಗಳಿವೆ ನೀವು ರೈತರಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಇಲ್ಲ ಖಾಗಖಾಲಿಮಾಡಿ ಎಂದು ಶಾಸಕ ಕೆ.ಷಡಕ್ಷರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲ್ಲೋಕು ಆಡಳಿತ ಸೌಧದ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿದ ಶಾಸಕರು ಕಂದಾಯ ಇಲಾಖೆ ಅಧಿಕಾರಿಗಳು ಹಳೇ ತಾಲ್ಲೋಕು ಕಚೇರಿ ಸಭಾಂಗಣದಲ್ಲಿ ಬೀಡುಬಿಟ್ಟಿದ್ದೀರ .5 ವರ್ಷ ತಾಲ್ಲೋಕಿನಲ್ಲಿಯೇ ಬೀಡುಬಿಟ್ಟಿರುವ ಅಧಿಕಾರಿಗಳು ಹಾಗೂ 3ವರ್ಷ ಪೂರೈಸಿರುವ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ವರ್ಗಾವಣೆ ಮಾಡಿಸಲಾಗುವುದು. ನೀವೇ ರೈತರ ಬಳಿಹೋಗಿ ಕೆಲಸ ಮಾಡಬೇಕು,ನಿಮ್ಮ ಬಳಿ ರೈತರು ಕೆಲಸ ಮಾಡಬೇಕು ರೈತರಿಂದ ದೂರು ಬಂದರೆ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೋಕಿನಲ್ಲಿ ಬೀದಿನಾಯಿಹಾವಳಿ ಜಾಸ್ತಿಯಾಗಿದೆ.ನಾಯಿ ಹಾವಳಿಗೆ ಕಡಿವಾಣ ಹಾಕಲು ತುರ್ತು ಕ್ರಮವಹಿಸಿ,ಗ್ರಾಮಪಂಚಾಯ್ತಿಗಳು ಹಾಗೂ ನಗರದಲ್ಲಿ ಇಗಾಗಲೇ ಬೀದಿನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಕುವ ಕೆಲಸ ನಡೆಯುತ್ತಿದೆ.ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕ್ರಮಕೈಗೊಳುವುದ್ದಾಗಿ ತಿಳಿಸಿದರು.
ತಾಲ್ಲೋಕಿನಲ್ಲಿ ಕುಡಿಯುವ ನೀರಿನ ಅಭಾವವಿಲ್ಲ,ಗ್ರಾಮೀಣ ಪ್ರದೇಶದ ಮೂರ್ನಾಲ್ಕು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಇದ್ದು,ಸರಿಪಡಿಸಲಾಗಿದೆ ಮುಂದಿನ ವರ್ಷದ ಒಳಗೆ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರನ್ನ ಒದಗಿಸಲಾಗುವುದು.
ಜಲಜೀವನ್ ಮಿಷನ್ ಯೋಜನೆ ಅತ್ಯಂತ ಕಳಪೆಯಾಗಿದೆ,ಯಾವುದೋ ಊರಿನಿಂದ ಟೆಂಡರ್ ಹಾಕಿಕೊಳ್ತಾರೆ,ಕಾಮಗಾರಿ ಮಾರಾಟ ಮಾಡಿಹೋಗ್ತಾರೆ, ಕಳಪೆ ಕಾಮಗಾರಿಯಾದ್ರೆ ನೀವು ಕಂಡು ಕಾಣದಂತೆ ಇರುತ್ತೀರಿ. ಯಾವುದೇ ಕಾರಣಕ್ಕೂಸಹಿಸುವುದಿಲ್ಲ.ಶಾಲೆಗಳು ಆರಂಭವಾದರು ಶಿಕ್ಷಕರು ಟೀ ಕುಡಿಕುಕೊಂಡಿ ತಿಪಟೂರು ಟೌನ್ ನಲ್ಲಿ ಓಡಾಡುತ್ತಿರುತ್ತಾರೆ.ಅಂತವರ ವಿರುದ್ದಕ್ರಮಕ್ಕೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ನೀವು ಕೆಲಸ ಮಾಡದಿದ್ದರೆ ತಾಲ್ಲೋಕಿನಲ್ಲಿ ಕೆಲಸಗಳು ಆಗುವುದಿಲ್ಲ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದರು.
ತಾಲ್ಲೋಕಿನಲ್ಲಿ ರೈತರು ಸಾರ್ವಜನಿಕರಿಗೆ ತೊಂದರೆಯಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಪವನ್ ಕುಮಾರ್.ಇಒ ಸುದರ್ಶನ್.ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ.ಗ್ರೇಡ್ 2ತಹಸೀಲ್ದಾರ್ ಜಗನ್ನಾಥ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




