ಬಹುರೂಪಿ ಬದುಕಿನಲ್ಲಿ ಕನ್ನಡಕ್ಕೆ ತಾಯಿ ಸ್ಥಾನ ನೀಡಲು ಸಮ್ಮೇಳನಾಧ್ಯಕ್ಷ ಆಲೂರು ದೊಡ್ಡನಿಂಗಪ್ಪ ಕರೆ.
ತಿಪಟೂರು: ಬಹುರೂಪಿ ಬದುಕನ್ನು ಅಕ್ಷರಗಳಲ್ಲಿ ಹಿಡಿದಿಟ್ಟುಕೂಳ್ಳುವ ಪ್ರಯತ್ನ ಪ್ರತಿ ಕನ್ನಡಿಗರ ಪ್ರಯತ್ನವಾಗಬೇಕು ವಿದ್ಯಾವಂತರ ಪ್ರಜಾಪ್ರಭುತ್ವದ ತತ್ವದೇಶದಲ್ಲಿ ಜಾತೀಯತೆಯ ಭೂತ ರಾಜ್ಯದಲ್ಲೆಡೆ ಬೆಂಕಿಯಂತೆ ಅರಳುತ್ತಿದ್ದು ಎಲ್ಲಾ ಆಯಾಮಗಳಿಂದ ಸೃಷ್ಟಿಯಾಗಿದೆ ಪ್ರಸ್ತುತವಾಗಿ ಮರ್ಯಾದೆಗೇಡು ಹತ್ಯೆಗಳು ರಾಜಾರೋಷವಾಗಿ ನಡೆಯುತ್ತಿದ್ದು ಅಂತರ್ಜಾತಿ ವಿವಾಹವಾದವರನ್ನು ಬಲಿ ಪಡೆದುಕೊಳ್ಳುತ್ತಿದ್ದಾರೆ ಇಂಥವರಿಗೆ ಕಾನೂನು ಚೌಕಟ್ಟಿನ ಕಠಿಣ ಶಿಕ್ಷೆ ಆಗಬೇಕು, ಅಂತಹ ಜೋಡಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು ಎರಡೇ ಜಾತಿ ಒಂದು ಗಂಡು ಒಂದು ಹೆಣ್ಣು ಎಂಬುದು ಪ್ರತಿಯೊಬ್ಬರ ಮನವೊಕ್ಕಬೇಕು ಎಂದು7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಆಲೂರು ದೊಡ್ಡ ನಿಂಗಪ್ಪ ಹೇಳಿದರು.

ಹೊನ್ನವಳ್ಳಿಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿ, ದೇಶಕ್ಕೆ ಪಿಡುಗಾಗಿರುವ ಜಾತೀಯತೆ ಮಟ್ಟ ಹಾಕಲು ಪ್ರತಿ ವಿದ್ಯಾವಂತರು ಪ್ರತಿ ಗ್ರಾಮಗಳಲ್ಲಿ ಅರಿವು ಮೂಡಿಸಬೇಕು, ಬೆಳೆಯುತ್ತಿರುವ ತಿಪಟೂರು ನಗರಕ್ಕೆ ಪ್ರಮುಖವಾಗಿ ನೀರಾವರಿ ಯೋಜನೆ, ಸಕಾರ ಗೊಳ್ಳಬೇಕು ನೂರಾರು ಕನ್ನಡ ಕವಿಗಳು, ಕಲಾವಿದರನ್ನು, ರಾಜ್ಯಕ್ಕೆ ಕಳುಹಿಸಿದ ತಿಪಟೂರು ತಾಲೂಕಿಗೆ ಹೆಮ್ಮೆಯ ಗರಿಇದೆ, ವಿದ್ಯಾವಂತರು ಮೇಲ್ಜಾತಿಯ ಜನ ಮಾಡಲಾಗದ ಪಂಜು,ಇಡಿಯುವುದು ಚಪ್ಪರ ಹಾಕುವುದು ಕಹಳೆ ವಾದ್ಯ ಇನ್ನಿತರ ಕೆಲಸಗಳನ್ನು ಮಾಡಿದವರನ್ನು ಕೆಳಜಾತಿಗೆ ಸಮಾಜ ಸೇರಿಸಿತು ಈ ಕೆಲಸ ಯಾರು ಮಾಡಬಹುದು ಎಂದು ಪ್ರಶ್ನಿಸಿದರು, ಹತ್ತಾರು ದಶಕಗಳ ಹಿಂದೆ ಗ್ರಾಮಗಳಲ್ಲಿ ಕರೆಂಟು ಇರಲಿಲ್ಲ ಬೀದಿ ಬೀದಿಗಳಲ್ಲಿ ಹಸು,ಕರು, ಆಡು, ಕುರಿ, ಕತ್ತೆಗಳು ಬೀದಿಯಲ್ಲಿ ಮಲಗುತ್ತಿದ್ದವು ಆ ದಿನದಲ್ಲಿ ಆ ಸಗಣಿ ಗಂಜಿನ ವಾಸನೆಯಿಂದ ಸಾಂಕ್ರಾಮಿಕ ರೋಗ ಸುಳಿಯುತ್ತಿರಲಿಲ್ಲ ಬೆಳಕು ಬೇಕೆಂದರೆ ಪೂರ್ಣ ಚಂದಿರನ ದಿನ ಕಂಡು ಸಂತೋಷ ಪಡುತ್ತಿದ್ದೆವು. ಆದರೆ ಇತ್ತೀಚೆಗೆ ಬೀದಿ ಮನೆಗಳಲ್ಲಿ ವಿದ್ಯುತ್ ಕಾಣುತ್ತಿದ್ದೇವೆ ಕುಟುಂಬದ ಸ್ವಾಮರಸ್ಯ ಕಳೆದುಕೊಳ್ಳುತ್ತಿದ್ದೇವೆ ಗ್ರಾಮದ ಗ್ರಾಮೀಣ ಕಲೆಗಳಾದ ಕೋಲಾಟ, ಅನಕ್ಷರಸ್ಥರಿಂದ ರಚಿಸಿ ಹಾಡುತ್ತಿದ್ದ ಜಾನಪದ ಗೀತೆಗಳು ಮರೆಯಾಗಿವೆ, ಜನಜಾನುವಾರುಗಳಿಗೆ ಬಾಯಾರಿಕೆ ನೀಗಿಸಲು ಕೆರೆಗೋಡಿ ರಂಗಾಪುರದ ಶ್ರೀಗಳು ನಿರ್ಮಿಸಿದ ಅಯ್ಯನಬಾವಿ ಇರಬಹುದು ಸಂರಕ್ಷಿಸಬೇಕಿದೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಯಬೇಕಿದೆ, ರೈತರ ಪ್ರಮುಖ ಬೆಳೆಯಾದ ತೆಂಗಿಗೆ ತೆಂಗು ಪಾರ್ಕ್ ಅಗತ್ಯವಿದೆ ಸ್ಥಳೀಯವಾಗಿ ದೊಡ್ಡ ಆಲದ ಮರ ಮುನಿಯಪ್ಪನ ಜಾತ್ರೆ ಇಡೀ ಜಿಲ್ಲೆಗೆ ಪ್ರಸಿದ್ಧಿ ಪಡೆದಿದ್ದು ಸಾವಿರಾರು ರಾಶಿಗಳು ಸೇರುತ್ತಿದ್ದವು ಆದರೆ ಕೃಷಿ ಇಳುಮುಖವಾಗಿದ್ದರಿಂದ ಜಾತ್ರೆಯ ಕಳೆ ಕಡಿಮೆಯಾಗುತ್ತಿದೆ, ಹೊನ್ನವಳ್ಳಿಗೆ ಪ್ರೌಢಶಾಲೆಯ ಕೊರತೆ ಇದೆ ಶಾಲೆ ತೆರೆದು ಉತ್ತಮ ಶಿಕ್ಷಣ ನೀಡಬೇಕು ಈ ಭಾಗಕ್ಕೆ ಬಸ್ಸುಗಳ ಅವಶ್ಯಕತೆ ಇದೆ ಕೂಡಲೇ ಬಗೆಹರಿಸಬೇಕು ಎಂದು ಹೇಳಿದರು.
ಮತ್ತೊಬ್ಬ ಸಾಹಿತಿ ಬೀಚನಹಳ್ಳಿ ಕರಿಗೌಡ ಮಾತನಾಡಿ ರಾಜ್ಯದಲ್ಲಿ ಎರಡನೇ ನವೋದಯ ಪ್ರಾರಂಭವಾಗಿದೆ ಇಂತಹ ಸಾಹಿತ್ಯ ಸಮ್ಮೇಳನಗಳು ಗ್ರಾಮೀಣ ಭಾಗದಲ್ಲಿ ನಡೆಯಬೇಕಿದೆ ಕನ್ನಡ ಉಳಿದಿರುವುದು ಉಳಿಯಬೇಕಾಗಿರುವುದು ಇಂತಹ ಗ್ರಾಮದಲ್ಲಿ ಮಾತ್ರ ಪ್ರತಿಯೊಬ್ಬರು ಕನ್ನಡ ಡಿಂಡಿಮ ಮೊಳಗಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಯೋಗೇಶ್ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಅರಿವು ನೀಡಬೇಕಿದೆ ಇಂತಹ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತೇನೆ ಎಂದರು .
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಹೊನ್ನವಳ್ಳಿ ಕರಿಸಿದ್ದೇಶ್ವರ ಮಠ ಪೀಠಾಧ್ಯಕ್ಷರಾದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ ನಶಿಸುತ್ತಿರುವ ಭಾಷೆ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗರು ಪ್ರಯತ್ನಿಸಬೇಕು ಮೊದಲು ನಾಡಿನ ಭಾಷೆಗೆ ತಾಯಿಯ ಸ್ಥಾನ ನೀಡಬೇಕು ಇತರ ಭಾಷೆಗಳನ್ನು ಗೌರವಿಸಬೇಕು ಸರ್ಕಾರ ಜಾತಿ ವ್ಯವಸ್ಥೆ ಹೋಗಲಾಡಿಸಲು ಜಾತಿ ಎನ್ನುವ ಕಾಲಂ ತೆಗೆದಾಗ ವ್ಯವಸ್ಥೆ ಬದಲಾಗುತ್ತದೆ, ಮಕ್ಕಳಲ್ಲಿ ಜ್ಞಾನದ ಅರಿವು ಭಾಷೆಯ ಅರಿವು ಮೂಡಿಸಬೇಕು ಪೋಷಕರು ಆಂಗ್ಲ ಭಾಷೆಯ ವ್ಯಾಮೋಹ ಮರೆಯಬೇಕು ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ಹೋಬಳಿ ಮಟ್ಟಗಳಲ್ಲಿ ಸಾಹಿತ್ಯ ಭಂಡಾರಗಳನ್ನು ತೆಗೆದು ಭಾಷೆಗೆ ಆದ್ಯತೆ ನೀಡಬೇಕಿದೆ. ಎಂದರು
ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ ಜಿಲ್ಲೆಯಲ್ಲಿ ಸಾ.ಶಿ. ಮರುಳಯ್ಯ ಸಿದ್ದಲಿಂಗಯ್ಯ ಇನ್ನು ಅನೇಕ ಕವಿ ಸಾಹಿತಿಗಳನ್ನು ರಾಷ್ಟ್ರಮಟ್ಟಕ್ಕೆ ಜಿಲ್ಲೆ ನೀಡಿದೆ ಇವರು ರಾಷ್ಟ್ರಮಟ್ಟದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ ಕನ್ನಡದ ಕೆಲಸಕ್ಕೆ ಶ್ರಮಿಸಿದವರನ್ನು ಕನ್ನಡಿಗರು ಎಂದಿಗೂ ಮರೆಯುವುದಿಲ್ಲ ಗೌರವಿಸುತ್ತಾರೆ 15ನೇ ಸಮ್ಮೇಳನ ಜಿಲ್ಲೆಯಲ್ಲಿ ನಡೆಯಲಿದ್ದು ತಾಲೂಕಿನಲ್ಲಿ ಕಳೆದ ವರ್ಷ ನಾಲ್ಕಾರು ಕನ್ನಡ ಕಾರ್ಯಕ್ರಮಗಳು ನಡೆದಿದೆ ಇವಕ್ಕೆಲ್ಲಾ ಕನ್ನಡ ಭಾಷಾ ಪಂಡಿತರು ಸಹಕಾರ ನೀಡಿದ್ದಾರೆ ಎಂದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಎಂ ಡಿ ಶಿವಕುಮಾರ್, ಅಧ್ಯಕ್ಷ ಎಂ ಬಸವರಾಜಪ್ಪ, ಅಗ್ರಹಾರ ಕೃಷ್ಣಮೂರ್ತಿ, ಚಲನಚಿತ್ರ ನಟ ಅಚ್ಚುತ್ ಕುಮಾರ್, ಗ್ರಾಪಂ ಅಧ್ಯಕ್ಷ ಪುರುಷೋತ್ತಮ್, ಸಂತೋಷ್, ಮಂಜಪ್ಪ, ಶಾರದಮ್ಮ, ಇನ್ನು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸದಸ್ಯರು ಮುಂತಾದವರಿದ್ದರು ಸಮ್ಮೇಳನ ಅಧ್ಯಕ್ಷರನ್ನು ಭವ್ಯ ಮೆರವಣಿಯೊಂದಿಗೆ ನಂದಿ ದ್ವಜ ವೀರಗಾಸೆ ಡೊಳ್ಳು ಕುಣಿತ ವಿವಿಧ ಜಾನಪದ ಕಲಾವಿದರ ತಂಡದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ





