ತಿಪಟೂರು:ಶಾಸಕರ ಕೆ.ಷಡಕ್ಷರಿಯವರ ದೂರದೃಷ್ಠಿಯ ಕೊರತೆ ಹಾಗೂ ಅಡಳಿತ ವೈಪಲ್ಯದ ಪರಿಣಾಮ ತಿಪಟೂರಿನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದೆ.ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೂರಾರು ಯುವಕರು ಉದ್ಯೋಗಕ್ಕಾಗಿ ವಲಸೆ ಹೋಗುವಂತ್ತಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ಬೇಸರ ವ್ಯಕ್ತಪಡಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ತಿಪಟೂರು ತಾಲ್ಲೋಕು ಕೈಗಾರಿಕೆಗಳ ಸ್ಥಾಪನೆಗೆ ಪ್ರಶಸ್ತವಾಗಿದೆ,ತುಮಕೂರು ನಗರದಲ್ಲಿ ವಸಂತ ನರಸಾಪುರ ಸೇರಿದಂತೆ ಹಲವಾರು ಕೈಗಾರಿಕ ಪ್ರದೇಶಗಳ ಅಭಿವೃದ್ದಿಯಿಂದ ನಗರವು ಅಭಿವೃದ್ದಿಯಾಗುತ್ತಿದ್ದು,ಬೆಂಗಳೂರಿನಿಂದ ಹಲವಾರು ಕೈಗಾರಿಕೆಗಳು ತುಮಕೂರಿನತ್ತ ಮುಖಮಾಡುತ್ತಿವೆ.ಆದರೆ ತಿಪಟೂರಿನಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಮೂಲ ಉತ್ಪನ್ನಗಳು ಹಾಗೂ ಮಾನವ ಸಂಪನ್ಮೂಲ ಹೇರಳವಾಗಿದರೂ, ನಮ್ಮ ಆಡಳಿತ ವ್ಯವಸ್ಥೆ ಸದ್ಬಳಕೆ ಮಾಡಿಕೊಳ್ಳಲು ವಿಫಲವಾಗಿದೆ.ಶಾಸಕರ ದೂರದೃಷ್ಠಿಯ ಕೊರತೆಯಿಂದ ಯಾವುದೇ ಹೊಸ ಕೈಗಾರಿಕೆಗಳು,ಸ್ಥಾಪನೆಯಾಗಿಲ್ಲ.ತಾಲ್ಲೋಕಿನ ಮಡೇನೂರು ಬಳಿ ಕೈಗಾರಿಕಾ ವಸಹತು ಪ್ರದೇಶ ನಿರ್ಮಾಣಕ್ಕೆ ಜಾಗಗುರ್ತಿಸಿದ ಸರ್ಕಾರ ಮತ್ತೆ,ಈ ಬಗ್ಗೆ ಯಾವುದೇ ಕ್ರಮಗೈಗೊಂಡಿಲ್ಲ.ತಿಪಟೂರಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ ಉದ್ಯೋಗ ನೀಡಲು ಹಲವಾರು ಕೈಗಾರಿಕೋದ್ಯಮಿಗಳು.ಹಾಗೂ ಕೈಗಾರಿಕಾ ಕಂಪನಿಗಳು ಸಿದ್ದಿಇವೆ,ಆದರೆ ಸ್ಥಳೀಯವಾಗಿ ಕೈಗಾರಿಕೆಗಳಿಗಾಗಿ ಅನುಮೋದನೆಗೊಂಡ ಜಾಗ ಹಾಗೂ ಮೂಲಸೌಕರ್ಯದ ಕೊರತೆಯಿಂದ ,ನಮ್ಮ ಯುವಕರು ಕೇವಲ ಹತ್ತು,ಹದಿನೈದು ಸಾವಿರ ಸಂಬಳಕ್ಕಾಗಿ ಅಲೆಯುತ್ತಿದ್ದಾರೆ.ನಿಮ್ಮ ತಿಪಟೂರು ಜಿಲ್ಲಾಕೇಂದ್ರವಾಗುವ ಅರ್ಹತೆ ಇರುವ ತಾಲ್ಲೋಕು ತಾಲ್ಲೋಕಿನ ಅಭಿವೃದ್ದಿಗೆ ಕೈಗಾರಿಕೆಗಳ ಸ್ಥಾಪನೆ ಅತ್ಯಾಗತ್ಯ, ಶಾಸಕರು ಕೇವಲ ರಸ್ತೆ ಗುದ್ದಲಿ ಪೂಜೆಯಲ್ಲಿಯೇ ಕಾಲಕಳೆಯದೆ,ತಾಲ್ಲೋಕಿನ ಅಭಿವೃದ್ದಿಗೆ ಆಧ್ಯತೆ ನೀಡಬೇಕು.ತಾಲ್ಲೋಕಿನಲ್ಲಿ ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗ ಬೇಕು.ಸ್ಥಳೀಯವಾಗಿ ಉದ್ಯೋಗ ಸೃಷ್ಟಿಮಾಡ ಬೇಕು.ಎಂದು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾಪ್ರಧಾನ ಕಾರ್ಯದರ್ಶಿ ಮತ್ತಿಘಟ್ಟ ಶಿವಸ್ವಾಮಿ ಮಾತನಾಡಿ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ಹೊಂದಾಣಿಕೆ ಮಾಡಲು ಹಣವಿಲ್ಲದೆ.ರೈತರ ಜೇಬಿಗೆ ಕೈಹಾಕುವ ಕೆಲಸಕ್ಕೆ ಮುಂದಾಗಿದೆ.ರೈತರು ಹಾಲು ಉತ್ಪಾದರಕ ಸಹಕಾರ ಸಂಘಗಳು ಹಾಗೂ ಸಹಕಾರ ಸಂಘದಲ್ಲಿ ಇರುವಂತಹ ಆಪತ್ ನಿಧಿ ಗೆ ಕೈ ಹಾಕುವ ಕೆಲಸ ಮಾಡುತ್ತಿದೆ.ಗೃಹ ಬಳಕೆ ವಿದ್ಯುತ್ ಮೀಟರ್ ಬಿಲ್ ಹೆಚ್ಚಳ ಮಾಡಿದ್ದು.ಸರ್ಕಾರ ನಡೆಸುವುದೇ ಕಷ್ಟವಾಗಿದೆ.ಇವುಗಳ ಮಧ್ಯೆ ಸಿ.ಎಂ ಹಾಗೂ ಡಿಸಿಎಂ ಕುರ್ಚಿ ಕಿತ್ತಾಟ ಕಂಡ ರಾಜ್ಯದ ಜನ ರೋಸಿ ಹೋಗಿದ್ದಾರೆ.ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಶೂನ್ಯವಾಗಿದೆ.ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಸುದರ್ಶನ್.ರಾಜಶೇಖರ್. ಹಾಲ್ಕುರಿಕೆ ನಂಜುಂಡಪ್ಪ ಬಸವರಾಜು ಮಠದ ಮನೆ,ನಟರಾಜ್ .ನಾಗರಾಜು ಶಿವರ ನಟರಾಜ್.ರಮೇಶ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ







