ತಿಪಟೂರು:ಹಬ್ಬಗಳು ಸಮಾಜದಲ್ಲಿ ಸೌಹಾರ್ದತೆ ಸಾಮರಸ್ಯ ಉಂಟುಮಾಡಬೇಕು ಗೌರಿಗಣೇಶ ಹಬ್ಬ ನೂರಾರು ವರ್ಷಗಳಿಂದ ಆಚರಿಸುತ್ತಾ ಬಂದಿದೆ.ಹಬ್ಬಗಳು ಸಂಭ್ರಮ ಸಡಗರ ಹೆಚ್ಚಿಸುವಂತ್ತಿರಬೇಕು.ಗೌರಿ ಗಣೇಶ ಪ್ರತಿಷ್ಠಾಪನೆ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸಬೇಕು.ಸರ್ಕಾರದ ನಿಯಮಾನುಸಾರ ಶಾಂತಿ ಸೌಹಾರ್ದತೆಗೆ ಧಕ್ಕೆಬಾರದಂತೆ ಸಂಪ್ರದಾಯಬದ್ದ ಹಬ್ಬ ಆಚರಣೆಗೆ ಸರ್ಕಾರ ಅಗತ್ಯ ನೀಡುತ್ತದೆ ಎಂದು ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ತಿಳಿಸಿದರು

ನಗರದ ತಾಲ್ಲೋಕು ಕಚೇರಿಯಲ್ಲಿ ಗೌರಿಗಣೇಶ ಹಬ್ಬ ಆಚರಣೆಕುರಿತು ಸಭೆ ನಡೆಸಿದ ಅವರು ಹಬ್ಬಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀಕವಾಗಿ ನಮ್ಮ ಆಚರಣೆಗಳು ಸಂಭ್ರಮ ಹೆಚ್ಚಿಸುವಂತಿರಬೇಕು.ಸಂಭ್ರಮದ ಜೊತೆಗೆ ಸುರಕ್ಷತೆಯ ಧೃಷ್ಠಿಯಿಂದ ಸರ್ಕಾರ ಹಲವಾರು ಮಾರ್ಗಸೂಚಿ ನೀಡಿದ್ದು.ಗೌರಿಗಣೇಶ ಪ್ರತಿಷ್ಠಾಪನೆ ವೇಳೆ ಕಡ್ಡಾಯವಾಗಿ ಪೊಲೀಸ್ ಇಲಾಖೆ .ಕಂದಾಯ ಇಲಾಖೆ ಗ್ರಾಮೀಣ ಭಾಗದಲ್ಲಿ ಗ್ರಾಮಪಂಚಾಯ್ತಿ,ನಗರದಲ್ಲಿ ನಗರಸಭೆ.ಬೆಸ್ಕಾಂ.ಅಗ್ನಿಶಾಮಕ ಇಲಾಖೆ.ಹಾಗೂ ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು.ಎಲ್ಲಾ ಸೇವೆಗಳು ಒಂದೇ ಕಡೆದೊರೆಯಬೇಕು ಎನ್ನುವ ದೃಷ್ಠಿಯಿಂದ ಏಕಗವಾಕ್ಷಿ ಯೋಜನೆಯಡಿ,ಗ್ರಾಮೀಣ ಪ್ರದೇಶದಲ್ಲಿ ಗ್ರಾಮಪಂಚಾಯ್ತಿ ಹಾಗೂ ನಗರದಲ್ಲಿ ನಗರಸಭೆಯಲ್ಲಿ ಅರ್ಜಿಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ.ಗಣೇಶ ಪ್ರತಿಷ್ಠಾಪನೆ ಸ್ಥಳದ ಅನುಮತಿ ಪಡೆಯಬೇಕು.ಬೆಸ್ಕಾಂ ಇಲಾಖೆಯಿಂದ ಪ್ರತ್ಯೇಕ ಮೀಟರ್ ಪಡೆದು ಇಲಾಖೆಯ ಸುರಕ್ಷಿತ ನಿಯಮ ಪಾಲಿಸಬೇಕು.ಬೆಂಕಿಸುರಕ್ಷತೆ ನಿಯಮ ಪಾಲಿಸಬೇಕು.ಪೊಲೀಸ್ ಇಲಾಖೆ ನೀಡುವ ಸೂಚನೆಪಾಲಿಸಬೇಕು,ಗಣೇಶ ವಿಸರ್ಜನೆ ವೇಳೆ ನುರಿತ ಈಜುಗಾರರು ವಿಸರ್ಜನೆ ಮಾಡಬೇಕು.ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಅಶ್ಲೀಲ ನೃತ್ಯ,ಅಥವಾ ಕೋಮು ಸಾಮರಸ್ಯ ಕದಡುವ ನೃತ್ಯ ಹಾಗೂ ಘೋಷಣೆ ಕೂಗುವುದು ಪ್ರಚೋದನೆ ಮಾಡುವ ಕೆಲಸ ಮಾಡಿದರೆ ಅಂತವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್ ಮಾತನಾಡಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಪೊಲೀಸ್ ಇಲಾಖೆಯ ನಿಯಮಪಾಲಿಸಬೇಕು.ಗಣೇಶ ಪ್ರತಿಷ್ಠಾಪನೆ ಸಮಿತಿ ಸದಸ್ಯರ ಪಟ್ಟಿ ಪ್ರಕಟಮಾಡಬೇಕು ಎಂದು ತಿಳಿಸಿದರು
ಸಭೆಯಲ್ಲಿ ಅಡಿಷನಲ್ ಎಸ್ಪಿ ಯಶ್ ಕುಮಾರ್ ಶರ್ಮ.ತಹಸೀಲ್ದಾರ್ ಮೋಹನ್ ಕುಮಾರ್.ಬೆಸ್ಕಾಂ ಇಲಾಖೆ ಎಇಇ ಮನೋಹರ್.ಅಬ್ಕಾರಿ ಸಬ್ ಇನ್ಪೆಕ್ಟರ್ ನಂಜುಂಡಸ್ವಾಮಿ.ಸೇರಿದಂತೆ ಅನೇಕರು
ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ







