Spread the love

:ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಳೆಕಟ್ಟಡ ಹಾಗೂ ಹೊಸ ಕಟ್ಟಡಗಳು ನಡುವೆ ಸಂಪರ್ಕಿಸಲು ಬಿ.ಹೆಚ್ ರಸ್ತೆಗೆ ಸ್ಕೈ ವಾಕ್ ನಿರ್ಮಾಣ ಮಾಡಬೇಕು.ಕಾಲೇಜು ಪ್ರರಂಭವಾಗಿ ತಿಂಗಳು ಕಳೆಯುತ್ತಿದ್ದರು ಸರ್ಕಾರ ಉಪನ್ಯಾಸಕರ ನೇಮಕ ಮಾಡದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಿಪಟೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಲಾಯಿತು.


ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಎಬಿವಿಪಿ ಮುಖಂಡ ಸಿದ್ದರಾಮಯ್ಯ ಮಾತನಾಡಿ ತಿಪಟೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು ಅತಿಹೆಚ್ಚು ವಿದ್ಯಾರ್ಥಿಗಳನ್ನ ಹೊಂದಿರುವ ಕಾಲೇಜುಗಳಲ್ಲಿ ಒಂದು ಆದರೆ ಈ ಕಾಲೇಜುಗೆ ಮೂಲಸೌಕರ್ಯಗಳಿಲ್ಲದೆ.ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪರದಾಡುವಂತ್ತಾಗಿದೆ‌‌.ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಹಳೆಕಟ್ಟಡ ಹಾಗೂ ಹೊಸಕಟ್ಟಡಗಳ ಮಧ್ಯೆ ಬಿ.ಹೆಚ್ ರಸ್ತೆ ಹಾದುಹೋಗಿರುವ ಕಾರಣ ವಿದ್ಯಾರ್ಥಿಗಳು ರಸ್ತೆದಾಟಿ ಕ್ಲಾಸ್ ಗಳಿಗೆ ಹೋಗಬೇಕಾದ ಕಾರಣ,ತೀವ್ರತೊಂದರೆಯಾಗುತ್ತಿದೆ.ಅಲ್ಲದೆ ರಸ್ತೆದಾಟುವಾಗ ವೇಗವಾಗಿ ಬರುವ ವಾಹನಗಳಿಂದ ಅಪಾಯಕ್ಕೆ ಒಳಗಾಗ ಬೇಕಾಗುತ್ತಿದೆ.ಆದರಿಂದ ಸರ್ಕಾರ ಕೂಡಲೇ ಸ್ಕೈ ವಾಕ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನ ಉದೇಶಿಸಿ ಮಾತನಾಡಿದ ಎಬಿವಿಪಿ ಮುಖಂಡ ಭರತ್ ಮಾತನಾಡಿ ರಾಜ್ಯಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ಉನ್ನತವ್ಯಾಸಂಗದ ಕನಸುಹೊತ್ತು.ಸರ್ಕಾರ ಪ್ರಥಮದರ್ಜೆ ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ.ರೈತರು ಬಡವರು ಸೇರಿದಂತೆ ಎಲ್ಲಾ ವರ್ಗದ ಮಕ್ಕಳು ವಿದ್ಯಾಭ್ಯಾಸ ಮಾಡುವ ಕಾಲೇಜಿಗೆ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಕನಸಿಗೆ ಸರ್ಕಾರ ಬೆಂಕಿ ಇಡುವ ಕೆಲಸ ಮಾಡುತ್ತಿದೆ. ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ3500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಆದರೆ ಸರ್ಕಾರದ ನಿಯಮದಂತೆ ಕನಿಷ್ಟ 150ಜನ ಉಪನ್ಯಾಸಕರಾದರೂ ಬೇಕು,ಆದರೆ ಕೇವಲ 35ಜನ ಖಾಯಂ ಉಪನ್ಯಾಸಕರ ಹೊರತಯ ಪಡಿಸಿ.ಅತಿಥಿ ಉಪನ್ಯಾಸಕರನ್ನ ಕೈ ಬಿಟ್ಟಿರುವ ಕಾರಣ .ಪಾಠ ಪ್ರವಚನಗಳಿಗೆ ಭಾರೀ ಹಿನ್ನಡೆಯಾಗಿದ್ದು.ಸಿಲಬಸ್ ಕಂಪ್ಲಿಟ್ ಆಗದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.ಸರ್ಕಾರ ಕೂಡಲೇ ಬೋದಕ ಹಾಗೂ ಬೇಧಕೇತರ ಸಿಬ್ಬಂದಿ ನೇಮಕ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಬಿವಿಪಿ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಮೋಹನ್.ರಾಜೇಶ್ ವಿನಯ್ .ರಮ್ಯ ಮುಂತ್ತಾದವರು ಉಪಸ್ಥಿತರಿದರು
ಗ್ರೇಡ್ 2ತಹಸೀಲ್ದಾರ್ ವಿದ್ಯಾರ್ಥಿಗಳಿಂದ ಮನವಿಪತ್ರಸ್ವೀಕರಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

error: Content is protected !!