ತಿಪಟೂರು:ಅಖಿಲ ಭಾರತೀಯ ವಿದ್ಯಾರ್ಥಿ ಪರೀಷತ್ ದಕ್ಷಿಣ ಪ್ರಾಂತ ವಿಭಾಗದಿಂದ ಆಯೋಜಿಸಿದ ಅಭಯ ರಾಣಿ ಅಬ್ಬಕ್ಕ ಮಹಾರಾಣಿ ಅಬ್ಬಕ್ಕ ರಥಯಾತ್ರೆ ತಿಪಟೂರು ನಗರಕ್ಕೆ ಆಗಮಿಸಿದ ವೇಳೆ ತಿಪಟೂರು ನಗರಸ ಹಾಸನ ಸರ್ಕಲ್ ನಿಂದ ಪಂಜಿನ ಮೆರವಣಿಗೆ ಮೂಲಕ ರಥಯಾತ್ರೆಯನ್ನ ಎಬಿವಿಪಿ ಕಾರ್ಯಕರ್ತರು ಸ್ವಾಗತಿಸಿದರು.

ರಥಯಾತ್ರೆ ಸಾಗುವ ಮಾರ್ಗಮಧ್ಯೆ ತಿಪಟೂರು ಆಡಳಿತ ಸೌಧದಲ್ಲಿ ನಡೆದ ಪ್ರಗತಿ ಪರಿಶೀನಾ ಸಭೆ ಮುಗಿಸಿ ತೆರಳುತ್ತಿದ್ದ ಗೃಹಸಚಿವರಿಗೆ ರಥಯಾತ್ರೆ ಎದುರಾದ ಹಿನ್ನೆಲೆ,ಕಲ್ಪತರು ಕಾಲೇಜು ಮುಂಭಾಗ ತಮ್ಮ ವಾಹನ ನಿಲ್ಲಿಸಿದ ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ//ಜಿ.ಪರಮೇಶ್ವರ್ ಹಾಗೂ ಶಾಸಕ ಕೆ.ಷಡಕ್ಷರಿ ಮಹಾರಾಣಿ ಅಬ್ಬಕ್ಕ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ,ವಿದ್ಯಾರ್ಥಿ ಮುಖಂಡರಿಂದ ರಥಯಾತ್ರೆ ಮಾಹಿತಿ ಪಡೆದು ತೆರಳಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ







