ತಿಪಟೂರು: ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಮಂಜುನಾಥಪುರದ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಟ್ಟಡಕ್ಕೆ ಡಿಕ್ಕಿಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ
ತಿಪಟೂರು ತಾಲ್ಲೋಕಿನ ಹಾಲ್ಕುರಿಕೆ ಗ್ರಾಮದ ವಾಸಿ ಬೆಂಗಳೂರು ಬಿ.ಎಂ.ಟಿ.ಸಿ ಡಿಪೋ 09 ಬಸ್ ಚಾಲಕ ಯೋಗಿಶಪ್ಪ ಹೆಚ್.@ಬೂರಿಮನೆ ಲೋಕೇಶ್ ಮೃತ ದುರ್ದೈವಿ.
ಹಾಲ್ಕುರಿಕೆಯಿಂದ ಮಂಜುನಾಥ ಪುರಕ್ಕೆ ತೆರಳುವ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬಸವಣ್ಣದ ದೇವಾಲಯದ ಕಟ್ಟಡಕ್ಕೆ ಡಿಕ್ಕಿ ಹೊಡೆದು ದುರ್ಮರಣಹೊಂದಿದ್ದು.
ಸ್ಥಳಕ್ಕೆ ಹೊನ್ನವಳ್ಳಿ ಸಬ್ ಇನ್ಪೆಕ್ಟರ್.ಚಂದ್ರಕಾಂತ್ ಹಾಗೂ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಚಂದ್ರಶೇಖರ್.ಸ್ಥಳಪರೀಶೀಲನೆ ನಡೆಸಿದ್ದು ಶವವನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ




