ತಿಪಟೂರು: ಕಲ್ಪತರು ನಾಡಹಬ್ಬ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಅನ್ನಸಂತರ್ಪಣೆ ಅದ್ದೂರಿಯಾಗಿ ನಡೆಯಿತು.ಕನ್ನಡ ನಾಡಿನ ವಿಶಿಷ್ಠ ಗಣೇಶ ಉತ್ಸವಗಳಲ್ಲಿ ಒಂದಾದ ತಿಪಟೂರು ಗಣೇಶೋತ್ಸವ ಮೈಸೂರು ದಸರಾ.ಬೆಂಗಳೂರು ಕರಗದಂತೆ ಪ್ರಖ್ಯಾತಿ ಪಡೆದಿದೆ.ಗಣೇಶ ಪ್ರತಿಷ್ಠಾಪನೆಯಿಂದ ಆರಂಭಗೊಂಡು ಪ್ರತಿ ಆಚರಣೆ ಪೂಜಾವಿಧಿವಿಧಾನಗಳು ವಿಶಿಷ್ಠವಾಗಿ ಆಚರಣೆ ಮಾಡಲಾಗಿತ್ತದೆ.

96 ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕರ ಸಹಯೋಗದಲ್ಲಿ ನಡೆಯುವ ಅನ್ನಸಂತರ್ಪಣೆಯಲ್ಲಿ ರೈತರು ತಾವು ಬೆಳೆದ ಬೆಳೆಗಳು ಹಣ್ಣು ತರಕಾರಿಗಳನ್ನ ಗಣೇಶೋತ್ಸವದ ಅನ್ನದಾನಕ್ಕಾಗಿ ಅರ್ಪಿಸಿದರೆ. ವರ್ತಕರು,ವ್ಯಾಪಾರಿಗಳು ತಮ್ಮ ಅಂಗಡಿಗಳಿಂದ ಅನ್ನದಾಸೋಹಕ್ಕೆ ಅಕ್ಕಿ.ಬೆಲ್ಲ.ಬೇಳೆ ಕಾಳುಗಳು,ಸೇರಿ ಅನ್ನದಾಸೋಹಕ್ಕೆ ಬೇಕಾದ ಪಡಿಯನ್ನ ನೀಡುತ್ತಾರೆ.ಅನ್ನಸಂತರ್ಪಣೆಯಲ್ಲಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬಡವ ಬಲಿದೆನ್ನದೆ ಅವರವರ ಶಕ್ತಾನುಸಾರ ದಾನ ನೀಡುವುದು.ವಾಡಿಕೆ ಅವದರಂತೆ ಶ್ರೀಸತ್ಯಗಣಪತಿ ಸೇವಾ ಟ್ರಸ್ಟ್ ಎಲ್ಲ ಭಕ್ತರೂ ನೀಡುವ ವಸ್ತುಗಳನ್ನ ಕೃಡೀಕರಿಸಿ ಅನ್ನಸಂತರ್ಪಣೆ ನೆರವೇರಿಸುತ್ತಾರೆ .

ಈ ಭಾರೀ ಖ್ಯಾತ ವೈದ್ಯರಾದ ಡಾ//ಶ್ರೀ ಧರ್ ತಮ್ಮ ತಂದೆ,ತಾಯಿಗಳ ಸ್ಮರಣಾರ್ಥ ಐಸ್ ಕ್ರೀಮ್ ವಿತರಣೆ ಮಾಡಿದರೆ. ಬಿ.ಎಸ್ ಚಂದ್ರಶೇಖರಯ್ಯ ನವರ ಸ್ಮರಣಾರ್ಥ ಚಂದ್ರಶೇಖರಯ್ಯ ನವರ ಕುಟುಂಬ ಲಾಡ್ ವಿತರಣೆ ಮಾಡಿದರು.ಶ್ರೀಧರ್ವಕಾಂಡಿಮೆಂಟ್ಸ್ ಶ್ರೀಧರ್ ರವರಿಂದ ಬೋಡ ವಿತರಣೆ,ನವೀನ್ ಶೇಠ್ ಕುಟುಂಬದಿಂದ ಜಿಲೇಬಿ ವಿತರಣೆ.ಪಟೇಲ್ ಸಮಾಜದಿಂದ ಜೂಸ್ ವಿತರಣೆ.ಹಾಗೂ ವಿಷ್ಣು ಸಮಾಜದಿಂದ ನೀರಿನ ಬಾಟಲ್ ವಿತರಣೆ ಮಾಡಲಾಯಿತು.ಸಾವಿರಾರು ಜನ ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರೀಸತ್ಯಗಣಪತಿ ಪ್ರಸಾದ ಸೇವಿಸಿ ಪುನೀತರಾದರು.

ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಷಡಕ್ಷರಿ.ತಿಪಟೂರು ನ್ಯಾಯಾಲಯದ 5ನೇ ಜಿಲ್ಲಾಸತ್ರನ್ಯಾಯಾಧೀಶರಾದ ಹೇಮಂತ್ ಕುಮಾರ್ .ಟಿ.ಆರ್. ಪ್ರಧಾನ ಸಿಮಿಲ್ ನ್ಯಾಯಾಧೀಶರಾದ ಭರತ್ ಚಂದ್ರ ಕೆ.ಎಸ್ .ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶರಾದ ಮಧುಶ್ರೀ ಜಿ.ಎಸ್ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ಶ್ರೀಸತ್ಯಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ.ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ತಹಸೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್ .ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ.ಸೇರಿದಂತೆ ಅನೇಕ ಮುಖಂಡರು ಪೂಜೆಸಲ್ಲಿಸಿ ಅನ್ನದಾಸೋಹಕ್ಕೆ ಚಾಲನೆ ನೀಡಿದರು.ವಿಶೇಷವಾಗಿ ತಿಪಟೂರು ಸೇರಿದಂತೆ ಸುತ್ತಮುತ್ತಲ ತಾಲ್ಲೋಕು ಸೇರಿದಂತೆ ರಾಜ್ಯದ ಹಲವಾರು ಭಾಗಗಳಿಂದ ಬರುವ ಭಕ್ತರು ಅನ್ನದಾಸೋಹದಲ್ಲಿ ಪ್ರಸಾದ ಸೇವಿಸಿ ಪುನೀತರಾಗುತ್ತಾರೆ. ಬರುವ ಭಕ್ತರಿಗೆ ಯಾವುದೇ ಕೊರತೆ ಇಲ್ಲದಂತೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ







