Spread the love

ತಿಪಟೂರು : ನನಗೆ ಕಳೆದ ಬಾರಿಯೇ ಸಹಕಾರಿ ಸಚಿವನ್ನಾಗಿ ಮಾಡುತ್ತೇನೆ ಎಂದು ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದರು ಆದರೆ ಕೇವಲ ಆರು ತಿಂಗಳ ಮಾತ್ರ ಅವಕಾಶವಿತ್ತು. ತದ ನಂತರ ಯಾವುದೋ ಚುನಾವಣೆ ಸಂದರ್ಭದಲ್ಲಿ ಅವರ ಮಗ ವಿರುದ್ದ ನನ್ನ ಅಳಿಯ ಸ್ವರ್ಥೆ ಮಾಡಿದ್ದರು ಆಗ ಸಿಟ್ಟು ಬಂದು ನನ್ನನ್ನು ಮಂತ್ರಿ ಮಾಡಿರುವುದಿಲ್ಲ. ತುಮಕೂರು ಕಾರ್ಯಕ್ರಮದ ಬೇಟಿ ಸಂದರ್ಭದಲ್ಲಿ ನನ್ನನ್ನು ಮಂತ್ರಿ ಮಾಡಲ್ಲ ಅಂದರೆ ಮೊದಲು ಜಯಚಂದ್ರನನ್ನು ಸ್ವೀಕರ್ ಮಾಡಿ ವಿಧಾನ ಸಭೆಗೆ ಒಂದು ಗೌರವ ಬರುತ್ತದೆ ಎಂದು ತಿಳಿಸಿದ್ದು ಸಚಿವ ಸಂಪುಟ ಪುನರಾಚನೆ ಆದರೆ ನನ್ನನ್ನು ಮಂತ್ರಿ ಮಾಡುವ ಅವಕಾಶವಿದೆ. ಆದರೆ ಸಚಿವ ಸ್ಥಾನ ವಂಚಿತನಾದರೆ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು

ತಿಪಟೂರು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾ¯ಯದ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ 138ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!