ತಿಪಟೂರು :ನಗರದಲ್ಲಿ ರೋಟರಿ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಭೀಮ್ ಸೇನೆ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭ ಉದ್ಘಾಟಿಸಿದ ಸಾಮಾಜಿಕ ಹೋರಾಟಗಾರ ನಟ ಅಹಿಂಸಾ ಚೇತನ್ ಮಾತನಾಡಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಬ್ಬ ದೇಶದ ಪ್ರಜೆಗೂ ವಾಕ್ ಸ್ವಾತಂತ್ರ್ಯದಿದ್ದು ಅಂತಹ ವಾಕ್ ಸ್ವಾತಂತ್ರದ ವಿರುದ್ಧ ಸರ್ಕಾರವು ದ್ವೇಷ ಭಾಷಣ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವುದು ಅಕ್ಷಮ್ಯ ಅಪರಾದ.ಯಾವುದೇ ಕಾರಣಕ್ಕೂ ಈ ಕಾಯ್ದೆನು ಜಾರಿಗೆ ತರಲು ಬಿಡುವುದಿಲ್ಲ ಎಂದು ಇದೇ ವೇಳೆ ಅವರು ತಿಳಿಸಿದರು.

ವ್ಯಕ್ತಿಯು ಯಾವುದೇ ಕಾನೂನನ್ನು ಉಲ್ಲಂಘನೆ ಮಾಡಿದ್ದಲ್ಲಿ ಅದಕ್ಕೆ ಸೂಕ್ತ ಶಿಕ್ಷೆ ನೀಡುವುದು ಈಗಾಗಲೇ ನಮ್ಮ ಸಂವಿಧಾನದ ಅಡಿಯಲ್ಲಿ ಇರುವುದರಿಂದ ಈ ಕಾಯ್ದೆಯ ಅವಶ್ಯಕತೆ ಇರುವುದಿಲ್ಲ.
ಇಂತಹ ಕಾಯಿದೆಯ ಅವಶ್ಯಕತೆ ಕರ್ನಾಟಕಕ್ಕೆ ಬೇಕಿತ್ತ ಇಂದ ಅವರು ತೆಲಂಗಾಣ ರಾಜ್ಯಗಳಲ್ಲೂ ಕೂಡ ಇಂತಹ ಕಾನೂನನ್ನು ಜಾರಿಗೆ ಮಾಡಲು ಹೊರಟಿರೋದು ದೂರದೃಷ್ಟಕರ ಎಂದ ಅವರು ನಮಗೆ ಬೇಕಾಗಿರೋದು ಸರ್ಕಾರಿ ಶಾಲೆಗಳು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ ಆರ್ಥಿಕ ಅಸಮಾನತೆಗಳ ನಡುವೆ ಸುಮಾರು 50ಕ್ಕೂ ಹೆಚ್ಚು ಇರುವ ಶ್ರೀಮಂತರು ತಮ್ಮಲ್ಲಿರುವ ಬಡವರ ರಕ್ಷಣೆಗೆ ಪಣತೊಟ್ಟಿ ನಿಲ್ಲಬೇಕು ಆಗ ಮಾತ್ರ ಆದೇಶದಲ್ಲಿ ಅಸಮಾನತೆ ಎಂಬುದು ಅಳಿಸಿ ಹೋಗುತ್ತದೆ ಎಂದು ಇದೆ ವೇಳೆ ಅವರು ತಿಳಿಸಿದರು.
ಬೇಡವಾದ ಕಾನೂನುಗಳನ್ನು ಜಾರಿಗೆ ತರುವ ಬದಲು ಮಹಿಳೆಯರಿಗೆ ಆರ್ಥಿಕವಾಗಿ ಸಬಲೀಕರಣಕ್ಕಾಗಿ ಬಡವರ ಏಳಿಗೆ ಗೋಸ್ಕರ ಬರುವಂತಹ ಕಾನೂನುಗಳನ್ನು ಜಾರಿಗೆ ತನ್ನಿ ಅಂತಹ ಕಾನೂನುಗಳನ್ನು ಸರ್ಕಾರವು ಜಾರಿ ಮಾಡಬೇಕಾಗಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಷಡಕ್ಷರ ಮಠದ ಶ್ರೀ ರುದ್ರಮನಿ ಮಹಾ ಸ್ವಾಮೀಜಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಶ್ವತ್ ನಾರಾಯಣ್ ಮಾಜಿ ನಗರಸಭಾ ಅಧ್ಯಕ್ಷೆ ಮೇಘಶ್ರೀ ಭೂಷಣ್ ತಾಲೂಕು ಅಧ್ಯಕ್ಷ ಮಂಜುನಾಥ್ ಆಂಜನಪ್ಪ ರಾಜ್ಯ ಅಧ್ಯಕ್ಷ ಶಂಕರ್ ರಾಮಲಿಂಗಯ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ತಾಲೂಕು ಉಪಾಧ್ಯಕ್ಷ ರೇಣುಕಾಮೂರ್ತಿ, ರೈತ ಸಂಘ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮೊದಲಾದವರು ಹಾಜರಿದ್ದರು
ವರದಿ:ಮಂಜುನಾಥ್ ಹಾಲ್ಕುರಿಕೆ





