Spread the love

ತಿಪಟೂರು: ಡಿಸೆಂಬರ್ 18ರಿಂದ 21ರ ವರೆಗೆ 4ದಿನಗಳ ಕಾಲ ನಡೆಯಲಿರುವ 39 ನೇ ಕರ್ನಾಟಕ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷ ಹಾಗೂ ಮಹಿಳೆಯರ ಚಾಂಪಿಯನ್ ಶಿಪ್ ಗೆ ಕಲ್ಪತರು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಕೆರಗೋಡಿ ರಂಗಾಪುರ ಭೂಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು ಧ್ವಜಾರೋಹಣ ನೆರವೇರಿಸಿದರು, ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ .ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಪಕಾರ್ ಸಿಂಗ್ ವರ್ಕ್ .ಸೇರಿದಂತೆ ಅನೇಕ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಮಾತನಾಡಿ ಕ್ರೀಡೆ ಮನುಷ್ಯನ ಆರೋಗ್ಯ ವೃದ್ದಿಗೆ ಸಹಕಾರಿಯಾಗಿದೆ,ಖೋ ಖೋ ಕ್ರೀಡೆ ಗ್ರಾಮೀಣ ಕ್ರೀಡೆಯಾಗಿದ್ದು, ಅಂತರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯುತ್ತಿದೆ.ಕ್ರೀಡಾಪಟುಗಳಿಗೆ ಸರ್ಕಾರವೂ ಸಹ ಹಲವಾರು ಪ್ರೋತ್ಸಾಹ ನೀಡುತ್ತಿದೆ.ಕ್ರೀಡೆಗಳಲ್ಲಿ ವಿಜೇತರಿಗೆ ಹೆಚ್ಚಿನ ಬಹುಮಾನದ ಜೊತೆಗೆ, ಸರ್ಕಾರದ ಉದ್ಯೋಗ ಸಹ ನೀಡಲಾಗುತ್ತಿದೆ.ಪೋಷಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಬೇಕು ಮನುಷ್ಯ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರು ಜೀವನದಲ್ಲಿ ವಿಫಲನಾಗ ಬಹುದು ಆದರೇ,ಕ್ರೀಡೆಯಲ್ಲಿ ಸಾಧನೆ ಮಾಡಿದ ವ್ಯಕ್ತಿ ಜೀವನದಲ್ಲಿ ಸೋಲುವುದಿಲ್ಲ,ಒಬ್ಬ ಕ್ರೀಡಾ ಪಟ್ಟು ಕ್ರೀಡಾ ಸ್ಪೂರ್ಧಿಯೊಂದಿಗೆ ಸೋಲು ಗೆಲುವನ್ನ ಸಮಾನವಾಗಿ ಸ್ವೀಕರಿಸುವ ಮನೋಭಾವನೆ ರೂಢಿಸಿಕೊಂಡಿರುತ್ತಾರೆ.ಕಲ್ಪತರು ನಾಡಿ ಕಲೆ,ಸಾಹಿತ್ಯ,ಹಾಗೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಹ ನೀಡುತ್ತಾ ಬಂದಿದೆ.ರಾಜ್ಯದ ವಿವಿಧ ಮೂಲೆಮೂಲೆಗಳಲಿಂದ ಬಂದಿರುವ ಕ್ರೀಡಾಪಟುಗಳು ಕ್ರೀಡಾಸ್ಪೂರ್ಧಿಯೊಂದಿಗೆ ಆಟವಾಡಿ ಕಲ್ಪತರು ನಾಡಿನ ಕ್ರೀಡಾಸೊಬಗಿನ್ನ ಸವಿಯನ್ನ ನಿಮ್ಮೂರಿಗೆ ಕೊಂಡೊಯ್ಯಿರಿಎಂದು ತಿಳಿಸಿದರು.
ದಿವ್ಯಸಾನಿಧ್ಯವಹಿಸಿದ ಪರಮಪೂಜ್ಯ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು ಮಾತನಾಡಿ ಕಲ್ಪತರು ನಾಡಿ ಕಲೆ ಸಾಹಿತ್ಯ,ಕ್ರೀಡೆ ಸೇರಿದಂತೆ ಸಮಾಜಮುಖಿಯಾದ ಕಾರ್ಯಗಳಿಗೆ ಸದಾ ಬೆಂಬಲ ನೀಡುತ್ತಾ ಬಂದಿದೆ.ಖೋಖೋ ಕ್ರೀಡಾ ಮನುಷ್ಯನ ದೈಹಿಕ ಸಾಮರ್ಥ್ಯವೃದ್ದಿಗೆ ಸಹಕಾರಿಯಾಗಿರುವ ಕ್ರೀಡೆ,ಕ್ರೀಡಾಪಟುಗಳು ಶಾಂತಿ ಸ್ನೇಹ ಮಾನೋಭಾವದೊಂದಿಗೆ ಆಟವಾಡಿ,ತಿಪಟೂರಿನಲ್ಲಿ ಕ್ರೀಡಾ ಕೂಟ ಆಯೋಜನೆಗೆ ಅನೇಕರ ಸಹಕಾರದಿಂದ ಲೋಕೇಶ್ವರ್ ಶ್ರಮವಹಿಸಿದ್ದಾರೆ ಅವರ ಶ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.ಎಂದು ತಿಳಿಸಿದರು.
ಅಖಿಲ ಭಾರತೀಯ ಖೋಖೋ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಉಪಾಕಾರ್ ಸಿಂಗ್ ವರ್ಕ್ ಮಾತನಾಡಿ ಖೋಖೋ ಕ್ರೀಡೆ ಅಭಿವೃದ್ದಿ ಹೊಂದುತ್ತಿದ್ದು.ಕ್ರೀಡಾಪಟುಗಳಿಗೆ ಅಗತ್ಯವಾದ ಎಲ್ಲಾ ಪ್ರೋತ್ಸಹ ನೀಡಲಾಗುತ್ತಿದೆ.ಅಂತರಾಷ್ಟ್ರೀಯ ಖೋಖೋ ಚಾಂಪಿಯನ್ ಷಿಪ್ ಆಯೋಜನೆ ಮಾಡಿದ್ದು.ಉತ್ತಮವಾದ ಬೆಂಬಲ ದೊರೆತ್ತಿದ್ದು. ಮುಂದಿನ ದಿನಗಳಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟ ನಡೆಸಲಾಗುವುದು ಎಂದು ತಿಳಿಸಿದರು.


ಕರ್ನಾಟಕ ಖೋಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್ ಮಾತನಾಡಿ ಖೋ ಖೋ ಕ್ರೀಡೆ ಗ್ರಾಮೀಣ ಕ್ರೀಡೆಯಾಗಿದ್ದು ಮನುಷ್ಯನ ದೈಹಿಕ ಆರೋಗ್ಯ ವೃದ್ದಿಗೆ ಸಹಕಾರಿಯಾಗಿದೆ. ಖೋಖೋ ಇತಿಹಾಸದಲ್ಲಿ ನಡೆದ 39ನೇ ಚಾಂಪಿಯನ್ ಷಿಪ್ ಗಳಲ್ಲಿ 7ಚಾಂಪಿಯನ್ ಷಿಪ್ ತಿಪಟೂರಿನಲ್ಲಿ ನಡೆದಿರುವುದು ವಿಶೇಷ .ಖೋಖೋ ಅಂತರಾಷ್ಟ್ರೀಯ ವೇದಿಕೆ ಒದಗಿಸಲು ಪ್ರಯತ್ನಗಳು ನಡೆಯುತ್ತಿದ್ದು.ಭಾರತೀಯ ಕ್ರೀಡೆಯಾದ ಖೋಖೋ ಕ್ರೀಡೆಯನ್ನ ಒಲಂಪಿಕ್ ಕ್ರೀಡಾಕೂಟದಲ್ಲಿ ಅಳವಡಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ಬೆಂಗಳೂರು ವಿಶ್ವವಿದ್ಯಾನಿಲಯ ರಿಜಿಸ್ಟರ್ ಸುಂದರ್ ರಾಜ್ ಅರಸ್‌.ಅರ್ಜನ್ ಪ್ರಶಸ್ತಿ ವಿಜೇಯ ಶುಭಾನಾರಾಯಣ್.ನವೀನ್ ಕಿರಣ್.ಮಾಜಿ ನಗರಸಭಾ ಉಪಾಧ್ಯಕ್ಷ ಸೊಪ್ಪುಗಣೇಶ್.ಮಾಜಿ ಸದಸ್ಯ ಶಶಿಕಿರಣ್.ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!