ತಿಪಟೂರು : ನಗರದ ಕಲ್ಪತರು ವಿದ್ಯಾ ಸಂಸ್ಥೆ (ರಿ.) ಹಾಗೂ ತುಮಕೂರು ಇನೋವೇಶನ್ ಇಂಕ್ಯುಬೇಶನ್ ಅಂಡ್ ಎಂಟರ್ ಪ್ರಿನರ್ಶಿಪ್ ಕೌನ್ಸಿಲ್ ಸಂಯುಕ್ತ ಆಶ್ರಯದಲ್ಲಿ “ಉದ್ಯಮಶೀಲತೆ ವೃತ್ತಿಯಾಗಿ ಅವಕಾಶಗಳ ಮಹಾಸಾಗರ”ಎಂಬ ಶೀರ್ಷಿಕೆಯ ಜಾಗೃತಿ ಕಾರ್ಯಕ್ರಮವನ್ನು ಆಗಸ್ಟ್ 29 ಶುಕ್ರವಾರ ಬೆಳಿಗ್ಗೆ 11:00 ಸಂಸ್ಥೆಯ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಖಜಾಂಜಿ ಟಿ.ಎಸ್.ಶಿವಪ್ರಸಾದ್ ತಿಳಿಸಿದರು.

ನಗರದ ಕಲ್ಪತರು ವಿದ್ಯಾಸಂಸ್ಥೆ ಆಡಳಿತ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಪತರು ನಾಡು ತಿಪಟೂರಿನಲ್ಲಿ ಉದ್ಯಮಿಗಳಾಗಿ ಹೊಸ ಹೊಸ ಉದ್ಯಮಗಳನ್ನ ಪ್ರರಂಬಿಸಬೇಕು,ಸ್ಥಳೀಯವಾಗಿ ಉದ್ಯಮ ಆರಂಬಿಸಿ.ನೂರಾರು ಜನರಿಗೆ ಉದ್ಯೂಗ ನೀಡಬಹುದು.ಉದ್ಯೋಗ ಅರಸಿ ಹೊರಗಡೆ ಹೋಗುವ ಬದಲಾಗಿ ನೀವೆ ಉದ್ಯೋಗ ನೀಡುವಂತ್ತಾಗ ಬೇಕು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಉದ್ಯಮ ಆರಂಬಿಸಲು ತರಬೇತಿ,ಮಾರುಕಟ್ಟೆ ಸೌಲಭ್ಯ, ಸರ್ಕಾರದ ಯೋಜನೆಗಳು, ಹಾಗೂ ಬ್ಯಾಂಕಿಂಗ್ ಸೌಲಭ್ಯ ಸಹಾಯಧನಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.ವಿವಿಧ ಇಲಾಖೆಯ ತಾಂತ್ರಿಕ ಪರಿಣಿತರು ಹಾಗೂ ಉದ್ಯಮಪತಿಗಳು ಮಾಹಿತಿ ನೀಡಲಿದ್ದಾರೆ. ಕಲ್ಪತರು ಸೆಂಟ್ರಲ್ ಸ್ಕೂಲ್.ಪಲ್ಲಾಗಟ್ಟಿ ಅಡವಪಪ್ಪ ಪ್ರಥಮದರ್ಜೆ ಕಾಲೇಜು.ಕಲ್ಪತರು ಕಾಲೇಜು.ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉದ್ಯಮಶಿಲತೆ ತರಬೇತಿ ಕೇಂದ್ರದ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.

ಕಲ್ಪತರು ವಿದ್ಯಾಸಂಸ್ಥೆ ಕಾರ್ಯದರ್ಶಿ ಸಂಗಮೇಶ್ ಮಾತನಾಡಿ ಕಲ್ಪತರು ನಾಡು ತಿಪಟೂರಿನಲ್ಲಿ ತೆಂಗು ಆಧಾರಿತ ಉದ್ಯಮಗಳ ಸ್ಥಾಪನೆಗೆ ವಿಫುಲ ಅವಕಾಶಗಳಿವೆ,150ಕೋ ಕೋ ನೆಟ್ ಕಾರ್ಖಾನೆಗಳಿದ್ದು.ಚಾರ್ಕೋಲ್ ಸೆಲ್.ಡೆಸಿಕೇಟೆಡ್ ಕೋಕೋ ನೆಟ್ .ಕ್ಷೇತ್ರಕ್ಕೆ ಸಂಬಂದಿಸಿದ ಬೈ ಪ್ರಾಡೆಕ್ಟ್ ಉತ್ಪನ್ನಗಳ ಉದ್ಯನ ಸ್ಥಾಪನೆ ಅಗತ್ಯವಿದ್ದು ತೆಂಗು ಆಧಾರಿದ ಕೈಗಾರಿಕೆಗಳ ಸ್ಥಾಪನೆ ಮಾಡಿದರೆ ಸ್ಥಳೀಯವಾಗಿ ಉದ್ಯೋಗ ನೀಡುವಜೊತೆಗೆ ನಮ್ಮ ತೆಂಗುಬೆಳೆಗಾರ ರೈತರಿಗೆ ಅನುಕೂಲವಾಗುತ್ತದೆ.ರೈತರು ವರ್ತಕರ ಸಹಕಾರದಿಂದ ಕಲ್ಪತರು ವಿದ್ಯಾ ಸಂಸ್ಥೆ ಬೆಳೆದಿದ್ದು ಇಂದಿನ ಎಐ ಯುಗದಲ್ಲಿ ವಿದ್ಯಾರ್ಥೀಗಳು ಸಂಬಳಕ್ಕಾಗಿ ಕಂಪನಿಗಳಲ್ಲಿ ಕೆಲಸ ಮಾಡದೇ ವಿದ್ಯಾರ್ಥಿಗಳು ಹೊಸದಾಗಿ ಉದ್ದಿಮೆಗಳನ್ನು ಸೃಷ್ಟಿಸುವ ಯೋಚಿಸುವ ಕಡೆ ಚಿಂತಿಸಿಬೇಕಾಗಿದೆ.ನಮ್ಮ ವಿದ್ಯಾರ್ಥಿಗಳು ಉದ್ಯಮಪತಿಗಳಾಗಲು ಇಂತಹ ಕಾರ್ಯಕ್ರಮ ಅಗತ್ಯವಿದೆ, ಆಡಳಿತ ಮಂಡಳಿಯು ಉದ್ಯಮಶೀಲತೆ ವೃತ್ತಿಯಾಗಿ ಅವಕಾಶಗಳ ಮಹಾಸಾಗರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಕಾರ್ಯಕ್ರಮಕ್ಕೆ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ..ವೆಂಕಟೇಶ್ವರಲು, ಕಾರ್ಪೋರೆಡ್ ಇಂಡಸ್ಟ್ರೀಸ್ ಅಧ್ಯಕ್ಷ ಡಾ.ಎಚ್.ಜಿ.ಚಂದ್ರಶೇಖರ್ ಹಾಗೂ ಟಿಐಐಈಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸತೀಶ್ ಭವಾನ್ಯ ಭಾಗವಹಿಲಿದ್ದಾರೆ.
ಕಲ್ಪತರು ವಿದ್ಯಾ ಸಂಸ್ಥೆ ಈಗಾಗಲೇ ಎಐಸಿಟಿಈ ಐಡಿಯಾ ಲ್ಯಾಬ್, ಎಐ ಅಳವಡಿಕೆ, ಇಂಕ್ಯುಬೇಶನ್, ಕ್ಯಾಂಟಮ್ ಕಂಪ್ಯೂಟಿಂಗ್, ಡೇಟಾ ಸೈನ್ಸ್, ಮತ್ತು ಸೈಬರ್ ಸೆಕ್ಯುರಿಟಿ ಕೇಂದ್ರಗಳು ಮುಂತಾದ ಭವಿಷ್ಯಮುಖಿ ಯೋಜನೆಗಳನ್ನು ಕೈಗೊಂಡಿದೆ. ಎಲ್ಲಾ ಕಲ್ಪತರು ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ವ್ಯಾಪಕ ಪ್ರಯೋಜನ ದೊರಕಲಿದೆ ಎಂದರು.
ಅಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಸಂಸ್ಥೆಯ ಉಪಾಧ್ಯಕ್ಷ ಉಮೇಶ್ ಬೆಳ್ಳೂರು ಪುತ್ರ ಪ್ರಣವ್ ಬೆಳ್ಳೂರಿಗೆ ರಾಷ್ಟ್ರಪತಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಸಂಸ್ಥೆಯಿಂದ ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜ್, ಕಾರ್ಯದರ್ಶಿಗಳಾದ ಎಮ್.ಆರ್.ಸಂಗಮೇಶ್, ಜಿ.ಎಸ್.ಉಮಾಶಂಕರ್, ಕೆಐಟಿ ಪ್ರಾಂಶುಪಾಲ ಸತೀಶ್‌ಕುಮಾರ್.ಎಚ್.ಸಿ, ಉಪನ್ಯಾಸಕ ಗುರುಮೂರ್ತಿ, ಗುಂಡಪ್ಪ, ಉಪಸ್ಥಿತರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ








