ತಿಪಟೂರು:ಕನ್ನಡ ನಾಡಿನ ಹೆಮ್ಮೆಯ ಪುತ್ರಿ ಹಾಗೂ ನಿವೃತ್ತ ಡಿಜಿಪಿ ಶಂಕರ್ ಬಿದರಿಯವರ ಪುತ್ರಿ ವಿಜಯಲಕ್ಷ್ಮಿ ಬಿದರಿ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವುದಕ್ಕೆ ಕಲ್ಪತರು ವಿದ್ಯಾಸಂಸ್ಥೆಯ ಹಾಗೂ ಜಯದೇವ ಹಾಸ್ಟೇಲ್ ನಿರ್ದೇಶಕರಾದ ಜಿ.ಸಿ ಸುರೇಶ್ ಗಂಡಸಿ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯಲಕ್ಷ್ಮಿಯವರ ತಂದೆ ಶ್ರೀಮಾನ್ ಶಂಕರ್ ಬಿದರಿಯವರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆಸಲ್ಲಿಸುವ ಮೂಲಕ ರಾಜ್ಯದ ಕೀರ್ತಿಹೆಚ್ಚಿಸಿದ್ದಾರೆ.ಶಂಕರ ಬಿದರಿಯವರು ಉಪಪೊಲೀಸ್ ಅಧೀಕ್ಷಕರಾಗಿ ತಿಪಟೂರು ಉಪವಿಭಾಗದಲ್ಲಿ ಸೇವೆಸಲ್ಲಿಸಿದ್ದು.ಕಲ್ಪತರು ನಾಡಿಗೆ ಸೇವೆಸಲ್ಲಿಸಿದ್ದಾರೆ,ಅವರ ಕುಟುಂಬ ದೇಶಸೇವೆಗೆ ತಮ್ಮ ಅವಿರತವಾಗಿ ಶ್ರನಿಸುತ್ತಿದ್ದು,ತಂದೆಯ ಹಾದಿಯಲ್ಲಿಯೇ ಸಾಗಿರುವ ವಿಜಯಲಕ್ಷ್ಮಿ ಬಿದರಿಯವರು ಮಹಾರಾಷ್ಟ್ರ ಸರ್ಕಾರದ ಪ್ರಧಾನಕಾರ್ಯದರ್ಶಿಯಾಗಿ ನೇಮಕವಾಗುವ ಮೂಲಕ ಕನ್ನಡನಾಡಿನ ಕೀರ್ತಿಹೆಚ್ಚಿಸಿದ್ದಾರೆ. ಕಲ್ಪತರು ನಾಡಿನ ಸಮಸ್ತ ಜನತೆಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ





