ತಿಪಟೂರು:ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಪರಿಶಿಷ್ಠ ಜಾತಿ ಹೊಲಯ ಬಲಗೈಸಂಬದಿತ ಉಪಪಂಗಡಗಳ ದತ್ತಾಂಶಗಳ ಕೃಢೀಕರಲ್ಲಿ ಅನ್ಯಾಯವಾಗಿದ್ದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಕೂಡಲೇ ಬಲಗೈ ಉಪಪಂಗಡಗಳನ್ನ ಕೃಢೀಕರಿಸಬೇಕು ಎಂದು ಚಲವಾದಿ ಮಹಾಸಭಾ ಅಧ್ಯಕ್ಷ ಬಜಗೂರು ಮಂಜುನಾಥ್ ಒತ್ತಾಯಿಸಿದರು.

ನಗರದ ಕಲ್ಪತರು ಗ್ರ್ಯಾಂಟ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಹೊಲಯ ಮಾದಿಗ ಎರಡು ಸಮುದಾಯಗಳು ಸೋದರ ಸಮುದಾಯಗಳೆ ನಾವು ಅವರು ಅಸ್ವೃಷ್ಯತೆ ನೋವುಂಡವರೇ ಮಾದಿಗ ಸಮುದಾಯಕ್ಕೆ 6%ಒಳ ಮೀಸಲಾತಿ ನೀಡಲು ನಮ್ಮ ಅಕ್ಷೇಪವಿಲ್ಲ ಆದರೆ ನಮ್ಮ ಚಲವಾದಿ ಹೊಲಯ ಸಂಬಂದಿತ ಜಾತಿಗಳಿಗೆ ಅನ್ಯಾಯವಾಗಬಾರದು.ಆಯೋಗ ಹೊಲಯ ಸಂಬಂದಿತ ಆಡಿಯ,ಬೈರಾ,ಬಕಡ್,ಬಾಂಡಿ,ಬ್ಯಾಗರ,ಚೆನ್ನದಾಸರ,ಹೊಲಯ ದಾಸರ,ಹೊಲರ್,ವಲ್ದರ್,ಹೊಲೆದಾಸರಿ,ಆದಿ ಆಂದ್ರ,ಆದಿಕರ್ನಾಟಕ,ಆದಿದ್ರಾವಿಡ ಸೇರಿ ಇತರೆ ಉಪಪಂಗಡಗಳನ್ನ ಒಟ್ಟುಗೂಡಿಸಿ,ಹೊಲಯ ಜಾತಿ ಗುರ್ತಿಸ ಬೇಕು,ಆನಂತರ ಒಳಮೀಸಲು ಹಂಚಿಕೆ ಮಾಡಬೇಕು.ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಒಳಮೀಸಲಾಯಿ ಹಂಚಿಕೆಗೆ ನಮ್ಮ ವಿರೋಧವಿಲ್ಲ, ಹೊಲಯರು ಮಾದಿಗರು ಒಟ್ಟಾಗಿ ಒಳಮೀಸಲಾತಿಗೆ ಹೋರಾಡಿದೆವೆ,ಒಳಮೀಸಲಾತಿ ನ್ಯಾಯಸಮ್ಮತ ಹಕ್ಕುದೊರೆಯಲಿ ಎಂದು ತಿಳಿಸಿದರು.

ಪತ್ರಿಕಾ ಘೋಷ್ಠಿಯಲ್ಲಿ ಚಲವಾದಿ ಮಹಾಸಭಾ ಖಜಾಂಚಿ ಕರಡಾಳು ಚಂದ್ರಶೇಖರ್.ಕರಡಾಳು ವೆಂಕಟೇಶ್ ಮೂರ್ತಿ.ಬಸವರಾಜು.ಷಡಕ್ಷರಿ,ಕಂಕಂಚಾಘಟ್ಟ ನರಸಿಂಹಮೂರ್ತಿ.ಕೀರ್ತಿ.ಮೂರ್ತಿ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ







