Spread the love

ತಿಪಟೂರು :ದೇಶ ಹಾಗೂ ಧರ್ಮದ ರಕ್ಷಣೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವೆ ಆದರ್ಶನೀಯವಾಗಿದ್ದು, ಸಂಘದ ಚಿಂತನೆಗಳನ್ನ ಅಳವಡಿಸಿಕೊಳ್ಳ ಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ತಿಳಿಸಿದರು.


ನಗರದ ಹಿಂದೂರುದ್ರಭೂಮಿಯಲ್ಲಿ ಗಾಂಧೀಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ರವರ ಜನ್ಮಜಯಂತಿ ಅಂಗವಾಗಿ ತಿಪಟೂರು ಹೋರಾಟ ಸಮಿತಿ,ರೋಟರಿ ಸಂಸ್ಥೆ ತಿಪಟೂರು .ನಗರಸಭೆ ಸಹಯೋಗದಲ್ಲಿ ಆಯೋಜಿಸಿದ ಹಿಂದೂರುದ್ರಭೂಮಿ ಸ್ವಚ್ಚತೆಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಚ್ಚತೆ ಅರಿವು ಪ್ರತಿ ಪ್ರಾಣಿ ಪಕ್ಷಿಗಳಲ್ಲಿಯೂ ಇದೆ.ಬುದ್ದಿವಂತನಾದ ಮನುಷ್ಯ ಸ್ವಚ್ಚತೆ ಬಗ್ಗೆ ಹೆಚ್ಚು ಅರಿವು ಇಟ್ಟುಕೊಳ್ಳಬೇಕು.ನಮ್ಮ ಸುತ್ತಮುತ್ತ ವಾತಾವರಣದ ಜೊತೆಗೆ,ನಮ್ಮ ಊರು ಪಟ್ಟಣದ ಸ್ವಚ್ಚತೆ ಕಾಪಾಡಿಕೊಳ್ಳ ಬೇಕು.ಬದುಕಿದ್ದಾಗ ಮನುಷ್ಯ ನೆಮ್ಮದಿಯಾಗಿ ಇರುತ್ತಾನೋ ಇಲ್ಲವೂ, ಸತ್ತ ಮೇಲೆ ನಿಮ್ಮದಿಯಾಗಿ ಸಂಸ್ಕಾರ ಮಾಡುವ ಸ್ಥಳ ಸ್ವಚ್ಚವಾಗಿರಬೇಕು ಎನ್ನವ ದೃಷ್ಠಿಯಿಂದ ಹಲವಾರು ವರ್ಷಗಳಿಂದ ನಾನು ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯಮಾಡುತ್ತಾ ಬಂದಿದ್ದೇವೆ.ಸ್ವಚ್ಚತಾ ಸೇವಾ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು.ದೇಶ ಹಾಗೂ ಧರ್ಮದ ರಕ್ಷಣೆಗಾಗಿ ನೂರುವರ್ಷಗಳ ಹಿಂದೆ ಬಲಿರಾಮ್ ಹೆಗಡೆವಾರ್ ಸ್ಥಾಪನೆ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರುವರ್ಷ ಪೂರೈಸಿದ್ದು,ಪ್ರತಿಗ್ರಾಮಗಳಲ್ಲಿಯೂ ಸಂಘದ ಕಾರ್ಯಕರ್ತರು ಸ್ವಚ್ಚತಾ ಕಾರ್ಯಕೈಗೊಂಡಿದ್ದಾರೆ.ಅಕ್ಟೋಬರ್ 12ರಂದು ತಿಪಟೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಆಯೋಜಿಸಿದ್ದು. ಹೆಚ್ಚಿನ ನಾಗರೀಕರು ಗಣವೇಶದೊಂದಿಗೆ ಭಾಗವಹಿಸಬೇಕು. ದೇಶದ ಸ್ವತಂತ್ರ್ಯಕ್ಕೆ ಮಹತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಿ ರವರ ಕೊಡುಗೆ ಅಪಾರವಾಗಿದ್ದು.ಗಾಂಧೀಜಿ ಹಾಗೂ ಶಾಸ್ತ್ರೀ ಜಿ ಆದರ್ಶಗಳನ್ನ ಅಳವಡಿಸಿಕೊಳ್ಳ ಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ರೋಟರಿ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ವನೀತಾ ಪ್ರಸನ್ನ ಮಾತನಾಡಿ ನಗರದ ಸ್ವಚ್ಚತೆಯಲ್ಲಿ ನಗರಸಭೆ ಸಿಬ್ಬಂದಿ ಜೊತೆ,ನಾಗರೀಕರ ಸಹಕಾರ ಅಗತ್ಯ.ತಿಪಟೂರು ಹೋರಾಟ ಸಮಿತಿ,ಹಿಂದೂರುದ್ರಭೂಮಿ ಸ್ವಚ್ಚತೆಯಂತಹ ಸಮಾಜ ಸೇವಾಕಾರ್ಯಗಳಿಗೆ ರೋಟರಿ ಭಾಗವಹಿಸುವುದು ಖುಷಿಯ ವಿಚಾರವಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಉಪಾಧ್ಯಕ್ಷ ಸೊಪ್ಪುಗಣೇಶ್.ಸದಸ್ಯರಾದ ಭಾರತೀ ಮಂಜುನಾಥ್.ಕನ್ನಡ ಸಾಹಿತ್ಯ ಪರೀಷತ್ ಅಧ್ಯಕ್ಷ ಬಸವರಾಜು.ಗುರುಸ್ವಾಮಿ.ಆರ್.ಎಸ್.ಎಸ್ ಮುಖಂಡ ಉಮೇಶ್ ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!