
ತುಮಕೂರು ಜಿಲ್ಲೆ ತಿಪಟೂರು ನಗರದ ಹಾಲ್ಕುರಿಕೆ ರಸ್ತೆಯಲ್ಲಿರುವ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭವನ್ನ ಜನವರಿ 3,4 ಮತ್ತು 5ರಂದು 16ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದು ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥಾಪಕರಾದ ಶ್ರೀ ಟಿ.ಆರ್ ಕೇಶವ ಕುಮಾರ್ ತಿಳಿಸಿದರು.

ನಗರದ ಹಾಲ್ಕುರಿಕೆ ರಸ್ತೆ ಶಂಕರನಗರ ಎಸ್.ವಿ.ಐ.ಎಸ್ ಮತ್ತು ಕಿಡ್ಜಿ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಶವಕುಮಾರ್ ರವರು, ಪ್ರತಿವರ್ಷದಂತೆ ಈ ವರ್ಷವೂ ಕೂಡ 2024-25 ಸಾಲಿನ ಜನವರಿ 3,4 ಮತ್ತು 5 ರಂದು ಶಾಲಾ ಉತ್ಸವ,ಮಕ್ಕಳ ಪ್ರತಿಭೆಗಳ ಅನಾವರಣ ಮತ್ತು ಜ್ಞಾನೋದಯ ಎಂಬ ಕಾರ್ಯಕ್ರಮದಡಿ ಶಾಲಾ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿದ್ದು,ಪ್ರತಿದಿನವೂ ನಮ್ಮ ಶಾಲೆಯ ಎಲ್ಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,ಪ್ರತಿಯೊಬ್ಬ ನಮ್ಮ ಶಾಲೆಯ ವಿದ್ಯಾರ್ಥಿಗಳು ವೇದಿಕೆಯನ್ನು ಬಳಸಿಕೊಳ್ಳುವಂತಾಗಲಿ ಎಂಬ ನಿಟ್ಟಿನಲ್ಲಿ, ಕಾರ್ಯಕ್ರಮವನ್ನು ಸತತ 15 ವರ್ಷಗಳಿಂದ ಆಯೋಜನೆ ಮಾಡುತ್ತಿದ್ದೇವೆ. ನಮ್ಮ ಶಾಲೆಯಲ್ಲಿ ಎಸ್.ಎಸ್ ಎಲ್.ಸಿ ಯಲ್ಲಿ 2023-24 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಯಾದ ಡಿ.ಉಲ್ಲಾಸ್ (93.33) ಚಿನ್ನದ ಪದಕ ಹಾಗೂ ದ್ವಿತೀಯ ಸ್ಥಾನಗಳಿಸಿರುವ ವಿದ್ಯಾರ್ಥಿನಿಯಾದ ಎಲ್. ಅಕ್ಷರ (93.00) ಬೆಳ್ಳಿ ಪದಕದೊಂದಿಗೆ ” ವಿವೇಕ ರತ್ನ ” ಎಂಬ ಬಿರುದು ನೀಡಿ, ಗೌರವಿಸಲಾಗುವುದು. ಮೂರು ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 12 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ನಮ್ಮ ಸಂಸ್ಥೆಯ ಮೂಲಕ ಮುಂದೆ ಕಾಲೇಜು ಪ್ರಾರಂಭಿಸುವ ಆಲೋಚನೆಯನ್ನು ವ್ಯಕ್ತಪಡಿಸಿದ ಅವರು, ಈಗಾಗಲೇ ಪಿನ್ ಲ್ಯಾಂಡ್ ಸೇರಿದಂತೆ ಕೆಲವು ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿ,ಅಲ್ಲಿನ ಶಾಲಾ- ಕಾಲೇಜುಗಳ ಗುಣಮಟ್ಟದ ವಿದ್ಯಾಭ್ಯಾಸ,ಶಾಲಾ ಕಾಲೇಜುಗಳಿಗೆ ಬೇಕಾದ ಪೂರಕ ವ್ಯವಸ್ಥೆಗಳನ್ನು ನೋಡಿ ಬಂದು ಅದೇ ರೀತಿ ತಾಲೂಕಿನಲ್ಲಿ ಸುಸಜ್ಜಿತವಾದ ಉತ್ತಮ ಭೋದಕರ ಒಳಗೊಂಡ ಕಾಲೇಜ್ ಪ್ರಾರಂಭಿಸಲು ಚಿಂತಿಸುತ್ತಿದ್ದೇನೆ ಮತ್ತು ಆ ದೇಶದಲ್ಲಿರುವ ಶಿಕ್ಷಣ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಅದೇ ಮಾದರಿಯಲ್ಲಿ ನಾವು ಕೂಡ ಶಿಕ್ಷಣವನ್ನು ಕೊಡಲು ಬಯಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಎಸ್.ವಿ.ಐ.ಎಸ್ ವಿದ್ಯಾ ಸಂಸ್ಥೆ ಮತ್ತು ಕಿಡ್ಜಿ ಶಾಲೆಗೆ ಹೊರ ರಾಜ್ಯಗಳಿಂದ ಮೂರು ಪ್ರಶಸ್ತಿಗಳು ಲಭಿಸಿರುವುದು ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಪ್ರಾಂಶುಪಾಲೆ ಅಜ್ರ ನೂರ್ ಫೌಜಿಯಾ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ



