Spread the love

ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಹಾಗೂ ಇತರೆ ಪ್ರದೇಶಗಳ ಹತ್ತಿರ ಸಾರ್ವಜನಿಕರಿಂದ ಭಿಕ್ಷಾಟನೆ ಮಾಡುವಾಗ ಮಕ್ಕಳ ಚಲನಚಲನ ಗಮನಿಸಿದ ಪತ್ರಕರ್ತರು ಅಧಿಕಾರಿಗಳ ಸಮಕ್ಷಮ ಬಾಲಮಂದಿರಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.


ತಿಪಟೂರಿನ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಆರ್ ಪ್ರಶಾಂತ್ ಹಾಗೂ (ಪ್ರಶಾಂತ್ ಕರೀಕೆರೆ) ಮತ್ತು ಹೊಸದಿಗಂತ ವರದಿಗಾರ ಮನೋಹರ ರಂಗಾಪುರ ಗಮನಿಸಿ.ನಗರದಲ್ಲಿ ಸಂಚರಿಸುವವೇಳೆ ಮಕ್ಕಳು ಇಬ್ಬರಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು,ಗಮನಕ್ಕೆ ಬಂದಿದೆ.ಮಕ್ಕಳ ಮಾಹಿತಿ ಸಂಗ್ರಹಿಸಿದ್ದಾಗ ಮಕ್ಕಳು ಶಾಲೆ ಬಿಟ್ಟು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ದೊರೆತ್ತಿದ್ದು,ತಕ್ಷಣ ಶಿಶು ಅಭಿವೃದ್ದಿ ಇಲಾಖೆ ಹಾಗೂ ತುಮಕೂರು ಬಾಲಮಂದಿರಕ್ಕೆ ಮಾಹಿತಿ ನೀಡಿ.ಮಕ್ಕಳು ಓಡಿಹೋಗದಂತೆ ತಿಂಡಿಕೊಟ್ಟು ಮಾತನಾಡಿಸಿ ಅವರ ಪೂರ್ವ ಹಿನ್ನಲೆಯನ್ನು ವಿಚಾರಿಸಿದಾಗ ತಂದೆ ತೀರಿಕೊಂಡಿದ್ದು ತಾಯಿ ವಿಪರೀತ ಕುಡಿತದಿಂದ ಮಕ್ಕಳನ್ನು ಕೈಬಿಟ್ಟಿದ್ದು ತಿಳಿದು ಬಂದಿದೆ.
ಹರಿಹರ ತಾಲೂಕಿನ ರೈಲ್ವೆ ಸ್ಟೇಷನ್ ಹತ್ತಿರ ಆಟವಾಡುತ್ತಿದ್ದ ಮಕ್ಕಳನ್ನು ಪ್ರದೀಪ್ ಎಂಬಾತ ಕರೆದುಕೊಂಡು ಬಂದು ಸುಮಾರು ಆರು ಏಳು ತಿಂಗಳ ಹಿಂದೆ ತಿಪಟೂರಿನಲ್ಲಿ ಒಂದು ಚಿಕ್ಕ ಮನೆಯಲ್ಲಿ ಆಶ್ರಯವನ್ನು ನೀಡಿದ್ದರು. ಆದರೆ ಮಗುವಿನ ಶೈಕ್ಷಣಿಕ ಪ್ರಗತಿಯಾಗಲಿ, ಪೌಷ್ಟಿಕಾಂಶವುಳ್ಳ ದೈಹಿಕ ಬೆಳವಣಿಗೆಯಲ್ಲಿ ಕುಂಠಿತಗೊಂಡಿರುತ್ತದೆ.

ತದನಂತರ ತಿಪಟೂರು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಗರ ಪೊಲೀಸ್ ಠಾಣೆಗೆ, ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಫೋನ್ ಮೂಲಕ ವಿಚಾರವನ್ನು ಮುಟ್ಟಿಸಿದಾಗ ಶಿಶು ಅಭಿವೃದ್ಧಿ ಅಧಿಕಾರಿಗಳ ಮೂಲಕ ತುಮಕೂರಿನ ಬಾಲ ಮಂದಿರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಆಶ್ರಯ ನೀಡಲಾಗಿದೆ.ಆದರೆ ಮಕ್ಕಳು ಶಾಲೆ ಬಿಟ್ಟು ಭಿಕ್ಷಾಟನೆಯಲ್ಲಿ ತೊಡಗಿದರೂ ಶಿಕ್ಷಣ ಇಲಾಖೆ ಶಾಲೆ ಬಿಟ್ಟಮಕ್ಕಳ ಗಣತಿ ನಡೆಸದೆ,ಇರುವುದು ಶಿಕ್ಷಣ ಇಲಾಖೆ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ನೂರಾರು ಮಕ್ಕಳು ಶಾಲೆ ಬಿಟ್ಟು ಭಿಕ್ಷಾಟನೆ ಹಾಗೂ ಬಾಲ ಕಾರ್ಮಿಕ ಕೆಲಸದಲ್ಲಿ ತೊಡಗಿದ್ದಾರೆ ಇಂತಹ ಮಕ್ಕಳ ಚಲನವಲನಗಳ ಮೇಲೆ ಗಮನಹರಿಸಬೇಕುಎಂದು ಪ್ರಶಾಂತ್ ಕರೀಕೆರೆ ಒತ್ತಾಯಿಸಿದ್ದಾರೆ.ಪತ್ರಕರ್ತರ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!