Spread the love

ತಿಪಟೂರು:ಬುದ್ದ ಬಸವ ಅಂಬೇಡ್ಕರ್,ಜಗತ್ತಿನ ಬೆಳಕು,ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಅಸಮಾನತೆಯ ಕಸತೊಳೆಯಲು ಬಂದ ಮಹಾಪುರುಷರು ಎಂದು ತಿಪಟೂರು ಷಡಕ್ಷರ ಮಠದ ಶ್ರೀ ಶ್ರೀ ರುದ್ರಮುನಿಸ್ವಾಮೀಜಿ ತಿಳಿಸಿದರು.

ನಗರದ ಕಲ್ಪತರು ಕಾಲೇಜು ಆಡಿಟೋರಿಯಂ ನಲ್ಲಿ ಅಂಬೇಡ್ಕರ್ ಸೇನೆ(ರಿ)ವತಿಯಿಂದ ಆಯೋಜಿಸಿದ ಭೀಮೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿದ ಶ್ರೀಗಳು ಮಾತನಾಡಿ ಡಾ//ಬಿ.ಆರ್ ಅಂಬೇಡ್ಕರ್ ತಮ್ಮ ಜೀವಿತದ ವರೆಗೂ ಅಸಮಾನತೆ ಅಸ್ಪೃಷತೆ ವಿರುದ್ದ ಹೋರಾಡಿದರು ಬುದ್ದ ಶಾಂತಿ ಸಮಾನತೆಗೆ ಹೋರಾಟ ಮಾಡಿದರೆ,ಬಸವಣ್ಣ ಸಮಾನತೆಗೆ ಹೋರಾಟಮಾಡಿ ದಮನಿತರಿಗೆ ಧ್ವನಿಯಾದರು,ಡಾ//ಬಿ.ಆರ್ ಅಂಬೇಡ್ಕರ್ ರವರು ಶಿಕ್ಷಣ ಪಡೆದು ಬುದ್ದ ಬಸವಣ್ಣ ದಾರಿಗೆ ಕಾನೂನಿನ ರೂಪಕೊಟ್ಟರು.ದಲಿತರು ಅಂಬೇಡ್ಕರ್ ರವರನ್ನ ಪೂಜಿಸುವ ಜೊತೆಗೆ ಅವರ ಆದರ್ಶಗಳನ್ನ ಅಳವಡಿಸಿಕೊಂಡು,ತಮ್ಮ ಮಕ್ಕಳಿಗೆ ಹೆಚ್ಚು ಹೆಚ್ಚು ಶಿಕ್ಷಣ ನೀಡಬೇಕು ಎಂದು ತಿಳಿಸಿದರು.


ಅಂಬೇಡ್ಕರ್ ಸೇನೆ ರಾಜ್ಯದ್ಯಕ್ಷ ಪಿ.ಮೂರ್ತಿ ಮಾತನಾಡಿ ಶೋಷಿತ ಸಮುದಾಯಗಳ ಆಶಾಕಿರಣ ,ಭಾರತದ ಭಾಗ್ಯವಿದಾತ,ಡಾ//ಬಿ.ಆರ್ ಅಂಬೇಡ್ಕರ್ ರವರು ತಾವು ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಷ್ಯತೆ ನೋವು ನಮ್ಮದೇಶದ ಜನಅನುಭವಿಸಬಾರದು,ದೇಶದಲ್ಲಿ ಅಸಮಾನತೆ ಅಳಿದುಹೋಗಬೇಕು,ಎಂದು ಬಾಬಾ ಸಾಹೇಬರು ತಮ್ಮ ಸುಖದುಖಃವನ್ನೇಲ್ಲ ತ್ಯಾಗಮಾಡಿದ್ದಾರೆ. ಶಿಕ್ಷಣ ಶಕ್ತಿಯನ್ನ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.ಶಿಕ್ಷಣ ಹುಲಿಯ ಹಾಲಿನಂತೆ ಕುಡಿದವರು ಗರ್ಜಿಸಲೇ ಬೇಕು.ದೇಶದ ಪ್ರತಿಯೊಬ್ಬ ಶೋಷಿತ ಶಿಕ್ಷಣ ಪಡೆಯುವ ಜೊತೆಗೆ ಸ್ವಾವಲಂಬನೆ ಬದುಕು ಬದುಕಬೇಕು ಆಗಮಾತ್ರ ನಾವು ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ರವರಿಗೆ ಗೌರವಸಲ್ಲಿಸಿದಂತೆ,ಸರ್ಕಾರ ಹಲವಾರು ಸವಲತ್ತು ನೀಡುತ್ತಿದೆ ಅವುಗಳನ್ನ ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ.ಅವರು ಸರ್ವಜನಾಂಗದ ಸ್ವತ್ತು.ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆ ಗೌರವಯುತವಾಗಿ ಬದುಕಬೇಕೆನ್ನುವ ಹಕ್ಕುನೀಡಿದ್ದಾರೆ‌.ದಲಿತರು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣಕೊಡಿಸಿ.ಸರ್ಕಾರ ಬಡವರು ಅಲ್ಪಸಂಖ್ಯಾತರು.ದಲಿತರಿಗೆ ಹಲವಾರು ಸವಲತ್ತುಗಳನ್ನ ನೀಡಿದೆ ಸರ್ಕಾರದ ಸಮಲತ್ತು ಸದುಪಯೋಗಪಡಿಸಿಕೊಳ್ಳಿ.ಸಮಾಜದಲ್ಲಿ ಗಂಡು ಹೆಣ್ಣು ಎರಡೆ ಜಾತಿ ,ಸಮಾಜದಲ್ಲಿ ತಾರತಮ್ಯ ದೂರವಾಗಬೇಕು ಎಂದು ತಿಳಿಸಿದರು‌
ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಮಾತನಾಡಿ ಡಾ//ಬಿ.ಆರ್ ಅಂಬೇಡ್ಕರ ರವರು ಸಮಾಜದಲ್ಲಿ ಸಮಾನವಾಗಿ ಜೀವಿಸುವ ಶಕ್ತಿನೀಡಿದ್ದಾರೆ.ಸಮಾಜದಲ್ಲಿ ಬಡವ ಬಲ್ಲಿದ ಎನ್ನದೆ ಸಮ ಸಮಾಜ ನಿರ್ಮಾಣವಾಗಬೇಕು ಎನ್ನುವ ಅಂಬೇಡ್ಕರ ಕನಸು ನನಸಾಗಲು ಶಿಕ್ಷಿತರಾಗಬೇಕು.ನಾವು ನಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುವಂತೆ ಮಾಡಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಖ್ಯಾತವೈದ್ಯರಾದ ಡಾ// ಶ್ರೀಧರ್ . ಮಾಜಿ ಜಿ.ಪಂ ಸದಸ್ಯ ಕೊಪ್ಪ ಶಾಂತಪ್ಪ.ಡಿ.ಎಸ್.ಎಸ್ ಮುಖಂಡ ಕುಪ್ಪಾಳು ರಂಗಸ್ವಾಮಿ.ಪೌರಕಾರ್ಮಿಕರ ಸಂಘದ ಅಧ್ಯಕ್ಷ ಕಾಂತರಾಜು‌.ಶ್ರೀಮತಿ ಮೇಘಶ್ರೀ ಭೂಷಣ್.ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಯಗಚೀಕಟ್ಟೆ ನರಸಿಂಹಮೂರ್ತಿ. ಅಂಬೇಡ್ಕರ್ ಸೇನೆ,ಅಧ್ಯಕ್ಷ ಆನಂದ್ ಕುಮಾರ್ . ಸುದರ್ಶನ್.ಬಜಗೂರು ಮಂಜುನಾಥ್.ಮಾರುತಿ ಗಂಗಹನುಮಯ್ಯ.ಚಂದನ್. ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!