ತಿಪಟೂರು:ನಗರದ ಗಾಂಧೀನಗರ ಆಶಾ ಪ್ಯಾಕ್ಟರಿ ಬಳಿ ನಗರ ಆಯುಷ್ಮಾನ್ ಆರೋಗ್ಯಮಂದಿರ ನಮ್ಮ ಕ್ಲಿನಿಕ್ ಅನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಿದರು.
ನಮ್ಮ ಕ್ಲಿನಿಕ್ ಉದ್ಘಾಟಿಸಿ ಸಾರ್ವಜನಿಕರನ್ನ ಉದೇಶಿಸಿ ಮಾತನಾಡಿ ತಿಪಟೂರು ನಗರದ ಗಾಂಧೀನಗರ ಭಾಗದಲ್ಲಿಯೇ ಶೇಕಡ 40ರಷ್ಟು ಜನವಾಸವಾಗಿದ್ದಾರೆ,ಅವರಿಗೆ ಮೂಲಭೂತಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ.ತಿಪಟೂರುನಗರದ ಬಳಿ 6ಬೆಡ್ ಉಳ್ಳ ನಗರಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್ ಆರಂಭ ಮಾಡಿದ್ದು.ಉತ್ತಮ ಆರೋಗ್ಯ ದೊರೆಯುತ್ತದೆ.

ನಾನು ಮೊದಲ ಭಾರೀ ಶಾಸಕನಾಗಿದ್ದಾಗಿನಿಂದ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಆಧ್ಯತೆ ನೀಡಿದ್ದೇನೆ. ಗಾಂಧೀನಗರ ಭಾಗ ಹೆಚ್ಚುಜನ ಬಡವರು ಅಲ್ಪಸಂಖ್ಯಾತರು ವಾಸಮಾಡುವ ಪ್ರದೇಶ ಈ ಪ್ರದೇಶ ಸೇರಿದಂತೆ ನಗರದ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದ್ದು ವರ್ಷದ ಒಳಗೆ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆ ಪ್ರಾರಂಭಗೊಳಿಸಲಾಗುವುದು,ತಿಪುಟೂರು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ.ಆದರೂ ಸಹ ಶಿವಮೊಗ್ಗದಿಂದ ಬೆಂಗಳೂರುವರೆಗೆ ಯಾವುದೇ ಮಲ್ಟಿಸ್ಷೆಲಿಟಿ ಆಸ್ಪತ್ರೆಗಳು ಇಲ್ಲದ ಕಾರಣ ಜಕ್ಕನಹಳ್ಳಿ ಗೇಟ್ ಬಳಿ ಟ್ರಾಮಕೇರ್ ಸೆಂಟರ್ ಹಾಗೂ ಕೆ.ಬಿ ಕ್ರಾಸ್ ಬಳಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ತಿಳಿಸಿದರು.

ತಾಲ್ಲೋಕುಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮಾತನಾಡಿ ನಮ್ಮ ಕ್ಲಿನಿಕ್ ನಲ್ಲಿ ಬಿಪಿ ಶೂಗರ್ ಸೇರಿದಂತೆ ರೋಗಿಗಳಿಗೆ ದೊರೆಯುವ ಎಲ್ಲ ಪ್ರಾಥಮಿಕ ಚಿಕಿತ್ಸೆಗಳು ದೊರೆಯುತ್ತವೆ .ಹೆಚ್ಚಿನ ತಪಾಸಣೆ ಹಾಗೂ ಚಿಕಿತ್ಸೆಯ ಅಗತ್ಯವಿದರೆ,ಸಾರ್ವಜನಿಕ ಆಸ್ಪತ್ರೆಗೆ ತೆರಳಬಹುದು.ನಗರದ ಸಾರ್ವಜನಿಕರು ನಮ್ಮ ಕ್ಲಿನಿಕ್ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಮೇಘನಾ ಭೂಷಣ್.ಆರ್ ಸಿ ಹೆಚ್ ನಾರಾಯಣ್.ನಗರಸಭಾ ಸದಸ್ಯರಾದ ಹೂರ್ ಬಾನು.ಸೈಫುಲ್ಲ.ಬಾಬು.ಪ್ಯಾರೆಜಾನ್ .ತಾಲ್ಲೋಕು ವೈದ್ಯಾಧಿಕಾರಿ ಚನ್ನಕೇಶವ.ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




