ತುಮಕೂರು: ಜಿಲ್ಲಾ ಪೊಲೀಸ್ ಇಲಾಖೆಯ ಹೆಮ್ಮೆಯ ಕ್ರೀಡಾಪಟು ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಹೆಡ್ ಕಾಸ್ಟೇಬಲ್ ಗುರುಪ್ರಸಾದ್ ರವರು ಅಮೇರಿಕಾದ ಅಲ್ಬಮ್ ನಲ್ಲಿ ನಡೆದ 21ನೇ ವಿಶ್ವ ಪೊಲೀಸ್ ಫೈರ್ ಕ್ರೀಡಾಕೂಟ 2025 ರಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳವ ಮೂಲಕ ಕಲ್ಪತರು ನಾಡು ಹಾಗೂ ಪೊಲೀಸ್ ಇಲಾಖೆಗೆ ಕೀರ್ತಿ ತಂದಿದ್ದಾರೆ.

ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಮಣಕಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇನಹಳ್ಳಿ ಹೊಸೂರು ಗ್ರಾಮದ ವಾಸಿಯಾದ ಕರಿಯಪ್ಪ ಲಕ್ಷ್ಮೀ ದೇವಮ್ಮ ನವರ ಪುತ್ರ ಶ್ರೀ.ಗುರುಪ್ರಸಾದ್ ರವರು ಅಮೆರಿಕ ಆಲ್ಬಮ್ ದಲ್ಲಿ ನಡೆದ 21ನೇ ವಿಶ್ವ ಪೊಲೀಸ್ ಹಾಗೂ ಫೈರ್ ಕ್ರೀಡಾಕೂಟ 2025″ ಭಾರತ ಪೊಲೀಸ್ ತಂಡವನ್ನು ಪ್ರತಿನಿಧಿಸಿ 10 ಕಿಲೋಮೀಟರ್ ಕ್ರಾಸ್ ಕಂಟ್ರಿ ಮತ್ತು 5 ಕಿಲೋಮೀಟರ್ ರೇಸ್ ನಲ್ಲಿ ಚಿನ್ನದ ಪದಕ ಹಾಗೂ 800 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದು ಭಾರತೀಯ ಪೊಲೀಸ್, ಕರ್ನಾಟಕ ಪೊಲೀಸ್ ಮತ್ತು ತುಮಕೂರು ಜಿಲ್ಲಾ ಪೋಲಿಸ್ ಇಲಾಖೆಗೆ ಕೀರ್ತಿ ತಂದಿದ್ದಾರೆ.

ಮಣಕಿಕೆರೆ ಶ್ರೀ ಭುವನೇಶ್ವರ ವಿದ್ಯಾಸಂಸ್ಥೆ ವಿದ್ಯಾರ್ಥಿಯಾಗಿದ್ದು, ಸಂಸ್ಥೆ ಆಡಳಿತ ಮಂಡಳಿ. ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘತಿಪಟೂರು ತಾಲ್ಲೂಕು ಘಟಕ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ.
ವರದಿ:ಮಂಜುನಾಥ್ ಹಾಲ್ಕುರಿಕೆ




