Spread the love

ತಿಪಟೂರು:ತಿಪಟೂರು ಉಪವಿಭಾಗದಲ್ಲಿ 108ತುರ್ತು ಆಂಬುಲೆನ್ಸ್ ಸೇವೆ ದೊರೆಯದೆ ಉಸಿರಾಟದ ತೊಂದರೆಯಿಂದ ರೋಗಿ ಸಾವನ್ನಪ್ಪಿರುವ ಘಟನೆ ತಾಲ್ಲೋಕಿನ ಕಸಬಾ ಹೋಬಳಿ ಕರೀಕೆರೆ ಗ್ರಾಮದಲ್ಲಿ ನಡೆದಿದೆ.
ಬೆಳಗ್ಗೆ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ಕರೀಕೆರೆ ಗ್ರಾಮದ ಚನ್ನಬಸವಣ್ಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಕುಟುಂಬಸ್ಥರು 108ತುರ್ತು ಆಂಬುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ. ಸರಿ ಸಮಾರು 11.ಗಂಟೆಯಿಂದ ಆಂಬುಲೆನ್ಸ್ ಗೆ ನಿರಂತರವಾಗಿ ಕರೆಮಾಡಿದ್ದಾರೆ,ಒಂದೆಡೆ ಸ್ವಂತ ವಾಹನವಿಲ್ಲ, ಇನ್ನೋದೆಡೆ ಸರಿಯಾದ ಸಮಯಕ್ಕೆ ತುರ್ತು ಆಂಬುಲೇನ್ಸ್ ಸೇವೆ ಸಿಗದೆ.2ಗಂಟೆ ಜೀವನ್ಮರಣದ ನಡುವೆ ಹೋರಾಡಿದ ಚನ್ನಬಸವಣ್ಣ ಕೊನೆಗೆ ಉಸಿರುಚೆಲ್ಲಿದ್ದಾರೆ.ತೀವ್ರ ಎದೆನೋವು,ಹಾಗೂ ಉಸಿರಾಟದ ತೊಂದರೆಗೆ ಒಳಗಾದ ಚನ್ನಬಸವಣ್ಣ 108 ಕಂಟ್ರೋಲ್ ರೂಂ ಗೆ ಕರೆಮಾಡಿದ್ದಾಗ
ತಿಪಟೂರು ಉಪವಿಭಾಗ ವ್ಯಾಪ್ತಿಯ ತಿಪಟೂರು .ಚಿಕ್ಕನಾಯ್ಕನಹಳ್ಳಿ.ತುರುವೇಕೆರೆ.ಹುಳಿಯಾರು ಅರಸೀಕೆರೆ,ಗಂಡಸಿ, ಸೇರಿದಂತೆ ಹಲವಾರು 108ಆಂಬುಲೆನ್ಸ್ ಗಳು ಲಭ್ಯವಿಲ್ಲ ಎಂದುಉತ್ತರ ನೀಡಿದ್ದಾರೆ, ಹಲವಾರು ಬಾರಿ ಪ್ರಯತ್ನಪಟ್ಟು ಆಂಬುಲೆನ್ಸ್ ಸೂಕ್ತ ಸಮಯಕ್ಕೆ ದೊರೆಯದ ಕಾರಣ ರೋಗಿ ಕೊನೆಉಸಿರೆಳೆದ್ದಿದ್ದಾರೆ.
ಎಲ್ಲರಿಗೂ ಆರೋಗ್ಯ ಮನೆಬಾಗಿಲಿಗೆ ಎಂದು ಘೋಷಣೆ ಮಾಡುವ ಸರ್ಕಾರ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸಮರ್ಪಕ ಆಂಬುಲೆನ್ಸ್ ಸೇವೆ ನೀಡಲು ವಿಫಲವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ 108ತುರ್ತು ವಾಹನ ಸೇವೆ ಆರಂಭವಾದಾಗ,ಗ್ರಾಮೀಣ ಭಾಗಗಳಿದ ತುರ್ತುಸೇವೆಗಾಗಿ ಕರೆಮಾಡಿದ 10ರಿಂದ 15ನಿಮಿಷಗಳಲ್ಲಿ ಆಂಬುಲೆನ್ಸ್ ಗಳು ಲಭ್ಯವಾಗುತ್ತಿದ್ದವು,108ತುರ್ತು ಆಂಬುಲೆನ್ಸ್ ಸೇವೆಯಿಂದ ಸಾವಿರಾರು ಜನರ ಜೀವ ಉಳಿದಿವೆ.ಆದರೆ ಪಂಚಗ್ಯಾರಂಟಿಗಳ ಜೊತೆಗೆ ಆರೋಗ್ಯದ ಗ್ಯಾರಂಟಿ ನೀಡಿದ ಸರ್ಕಾರ ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ ಸೇವೆ ನೀಡಲು ವಿಫಲವಾಗಿರುವುದು ನೂರಾರು ಬಡಜೀವಗಳ ಸಾವಿಗೆ ಕಾರಣವಾಗುತ್ತಿದೆ. ಸರ್ಕಾರ ಮನುಷ್ಯನ ಜೀವದ ಜೊತೆ ಚೆಲ್ಲಾಟವಾಡದೆ.ಗ್ರಾಮೀಣ ಭಾಗಕ್ಕೆ ತುರ್ತು ಆಂಬುಲೆನ್ಸ್ ಸೇವೆ ಒದಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!