Spread the love

ತಿಪಟೂರು:ವಸತಿ ಹಾಗೂ ನಿವೇಷನ ವಂಚಿತರಿಗೆ ನಿವೇಷನ ನೀಡಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋಪೆಸರ್ ಬಿ.ಕೃಷ್ಣಪ್ಪ ಸ್ಥಾಪಿತ ವತಿಯಿಂದ ತಿಪಟೂರು ನಗರಸಭೆ ಮುಂಭಾಗಬೃಹತ್ ಪ್ರತಿಭಟನಾ ಧರಣಿ ನಡೆಸಿ ನಗರಸಭೆ ಕಾರ್ಯವೈಖರಿವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು, ನಗರದಲ್ಲಿ ನಿವೇಷನ ವಂಚಿತರಿಗೆ ನಿವೇಷನ ನೀಡಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ತಾಲ್ಲೋಕು ಸಂಚಾಲಕ ಜಕ್ಕನಹಳ್ಳಿ ಮೋಹನ್ ಕುಮಾರ್ ತಿಪಟೂರು ನಗರಸಭೆ ವಸತಿ ಹಾಗೂ ನಿವೇಷನ ವಂಚಿತರಿಗೆ ನಿವೇಷನ ನೀಡಲು ವಿಫಲವಾಗಿದೆ, ಅಕ್ಕಿಪಕ್ಷಿಗಳು ತನ್ನದೇ ಆದ ಗೂಡುಹೊಂದುತ್ತವೆ ಆದರೆ ಪ್ರಜ್ಞಾವಂತನಾದ ಮನುಷ್ಯ ಗೌರವಯುತವಾದ ಬದುಕು ಬದುಕಲು ಸೂಕ್ತವಾದ ಮನೆಇಲ್ಲದೆ ಪರದಾಡುವಂತ್ತಾಗಿದೆ.ನಾಗರೀಕರಿಗೆ ನಿವೇಷನ ಹಾಗೂ ವಸತಿ ಒದಗಿಸಬೇಕಾದ ಸರ್ಕಾರಗಳು ನಿವೇಷನ ಒದಗಿಸಲು ವಿಫಲವಾಗಿವೆ,ತಿಪಟೂರಿನಲ್ಲಿ ವಸತಿ ಹಾಗೂ ನಿವೇಷನಕ್ಕಾಗಿ ಸಾವಿರಾರು ಕುಟುಂಬಗಳು ಅರ್ಜಿಸಲ್ಲಿಸಿ,ನಿವೇಷನಗಳಿಗಾಗಿ.ಚಾತಕಪಕ್ಷಿಯಂತೆ,ಕಾಯುತ್ತಿದ್ದಾರೆ.ಸರ್ಕಾರ ಹಾಗೂ ನಗರಾಡಳಿತದ ಹೊಣೆಗೇಡಿತನದಿಂದ ನಗರದ ಜನರಿಗೆ ನಿವೇಷನಗಳು ಮರೀಚಿಕೆಯಾಗಿವೆ.ನಗರದ ಅತ್ಯಂತ ಕಡುಬಡವರು ವಾಸಮಾಡುವ ಗಾಂಧೀನಗರ,ಇಂಧಿರಾ ನಗರ.ನೆಹರುನಗರ .ಹಳೇಪಾಳ್ಯ.ಮಾವಿನತೋಪು,ಮಾರನಗೆರೆ ಸೇರಿದಂತೆ ನಗರದ ಬಹುತೇಕ ಬಡವರು ವಾಸಮಾಡುವ ಸ್ಥಳಗಳಲ್ಲಿ ಸೂಕ್ತವಾದ ಮನೆಗಳು ಇಲ್ಲದೆ ಪ್ರಾಣಿಗಳಿಗಿಂತಲು ಕಡೆಯಾಗಿ ವಾಸಮಾಡುತ್ತಿದ್ದಾರೆ,ಹಳೇಪಾಳ್ಯ ಬಳಿ ಅಲೆಮಾರಿಗಳು ಸೇರಿದಂತೆ ನಿವೇಷನಕ್ಕಾಗಿ ಮೀಸಲಾಗಿರುವ ಸ್ಥಳದಲ್ಲಿ ಯಾರಿಗೆ ನಿವೇಷನಗಳು ದೊರೆತ್ತಿವೆ ಎನ್ನುವುದೇ ಯಾರಿಗೂ ತಿಳಿಯುತ್ತಿಲ್ಲ ನಗರ ವ್ಯಾಪ್ತಿಗೆ ಹೊಂದಿಕೊಂಡಂತ್ತೆ ಹಲವಾರು ಕಡೆ ಸರ್ಕಾರಿ ಜಮೀನು ಲಭ್ಯವಿದ್ದರು,ನಗರಸಭೆ ನಿವೇಷನ ನೀಡಲು ಯಾವುದೇ ಕ್ರಮಕೈಗೊಳ್ಳದೆ ಇರುವುದು ನಮ್ಮ ತಾಲ್ಲೋಕು ಕಾರ್ಯವೈಖರಿಗೆ ಸಾಕ್ಷಿಯಾಗಿದೆ.ನಗರಾಡಳಿ ಕೂಡಲೇ ನಗರದ ಜನರಿಗೆ ನಿವೇಷನ ನೀಡಲು ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ಉಪಸ್ಥಿತರಿದ ಜಿಲ್ಲಾ ಸಂಘಟನಾ ಸಂಚಾಲಕ ಮತ್ತಿಹಳ್ಳಿ ಹರೀಶ್ ಗೌಡ ಮಾತನಾಡಿ ಬಡವರಿ ವಸತಿ ಹಾಗೂ ನಿವೇಷನ ನೀಡಬೇಕಾಗಿರುವುದು ಸರ್ಕಾರದ ಆಧ್ಯಕರ್ತವ್ಯ,ರಾಜ್ಯದ ಬಹುತೇಕ ನಗರಗಳಲ್ಲಿ,ಜನರಿಗೆ ನಿವೇಷನ ಹಾಗೂ ಮನೆ ದೊರಕಿಸಿಕೊಡಲು ನಗರಾಡಳಿತಗಳು ಮುಂದಾಗಿವೆ,ಆದರೆ ತಿಪಟೂರು ನಗರಾಡಳಿತ ನಿವೇಷನ ರಹಿತರಿಗೆ ನಿವೇಷನ ನೀಡಲು ವಿಫಲವಾಗಿದ್ದು,ಮೂರ್ನಾಲ್ಕು ಭಾರಿ ನಿವೇಷನಕ್ಕಾಗಿ ಅರ್ಜಿಪಡೆದು ಪೆಂಡಿಕಟ್ಟಿ ಮೂಲೆಗೆಹಾಕಿದ್ದಾರೆ.ನಗರದ ಜನರ ಆಶೋತ್ತರ ಈಡೇರಿಸಬೇಕಾದ ನಗರದ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಫಲವಾಗಿ,ತಿಪಟೂರು ಜನರಿಗೆ ನಿವೇಷನ ಹೊಂದುವ ಕನಸು ಮರೀಚಿಕೆಯಾಗಿದ್ದು.ಅಕ್ಕಪಕ್ಕದ ತಾಲ್ಲೋಕುಗಳಲ್ಲಿ ಬಡಜನರಿಗಾಗಿ ನಿವೇಷನ ಹಕ್ಕುಪತ್ರ ನೀಡಲಾಗುತ್ತಿದ್ದು,ನಮ್ಮ ತಾಲ್ಲೋಕು ಮಾತ್ರ ನಿವೇಷನ ಹಂಚಿಕೆಯಲ್ಲಿ ತೀರಹಿಂದುಳಿದೆ,ನಗರಾಡಳಿತ ಜನವಿರೋಧಿ ಧೋರಣೆ ಬಿಟ್ಟು 3ತಿಂಗಳಲ್ಲಿ ನಗರದ ಜನರಿಗೆ ನಿವೇಷನ ನೀಡಲು ಮುಂದಾಗದಿದ್ದರೆ,ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋಪೆಸರ್ ಬಿ.ಕೃಷ್ಣಪ್ಪ ಸ್ಥಾಪಿತ ವೆಣ್ಣೂರು ಶ್ರೀ ನಿವಾಸ್ ನೇತೃತ್ವದ ಸಂಘಟನೆ ನಗರಸಭೆ ವಿರುದ್ದ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ದಲಿತ ಮುಖಂಡ ಶಿವಪುರ ರಮೇಶ್ ನಗರಸಭೆ ನಗರದ ಜನರಿಗೆ ವಸತಿ ಹಾಗೂ ನಿವೇಷನ ನೀಡಲು ಮುಂದಾಗ ಬೇಕು,ನಗರದಲ್ಲಿ ನಿವೇಷನಗಳು ಸಿಗದೆ ಜನಪರದಾಡುತ್ತಿದ್ದಾರೆ,ಖಾಸಗೀ ಲೇಔಟ್ ಗಳಲ್ಲಿ ದುಬಾರಿ ಬೆಲೆ ತೆತ್ತು ಬಡವರು ನಿವೇಷನ ಖರೀದಿ ಮಾಡಲು ಸಾಧ್ಯವಿಲ್ಲ.ಬಡತನದಲ್ಲಿ ಜೀವನ ನಡೆಸುವುದು ಕಷ್ಟ.ದುಬಾರಿ ಬೆಲೆನೀಡಿ ನಿವೇಷನ ಪಡೆಯಲು ಹೇಗೆ ಸಾಧ್ಯ,ನಗರಸಭೆ ಬಡವರ ಕಷ್ಟ ಅರಿತು,ನಗರಹಾಗೂ ನಗರದ ಹೊರವಲಯ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಲಭ್ಯವಿದ್ದು,ಅರ್ಹ ಫಲಾನುಭವಿಗಳಿಗೆ ನಿವೇಷನ ನೀಡಲು ಮುಂದಾಗ ಬೇಕು.ಎಂದು ಒತ್ತಾಯಿಸಿದರು


ಪ್ರತಿಭಟನೆಯಲ್ಲಿ ನಗರ ಅಧ್ಯಕ್ಷ ಸತೀಶ್ ಮಾರನಗೆರೆ,ರಘು.ಬಾಗುವಾಳ ಲಿಂಗರಾಜು.ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಮಹೇಶ್ .ತಾಲ್ಲೋಕು ಸಂಘಟನಾ ಸಂಚಾಲಕ ಹತ್ಯಾಲ್ ಕೀರ್ತಿ.ಜಯಕುಮಾರ್ ಹಾಲ್ಕುರಿಕೆ.ಶಂಕರಲಿಂಗಯ್ಯ.ರಂಗಸ್ವಾಮಿ ಹುಲಿಹಳ್ಳಿ.ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು.ನಗರಸಭೆ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಮನವಿಪತ್ರ ಸ್ವೀಕರಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!