ತಿಪಟೂರು: ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರದಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ನಾರಾಯಣಗುರು,ಹಾಗೂ ಡಿ.ದೇವರಾಜು ಅರಸು ಮತ್ತು ಮಾಜಿ ಪ್ರದಾನಿ ರಾಜೀವ್ ಗಾಂಧಿ ಯವರ ಜನ್ಮಜಯಂತಿ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಭಾಷಣಸ್ಪರ್ಧೆ ಹಾಗೂ ಪ್ರಭಂದ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಲಾಯಿತು.

ಕಾಂಗ್ರೇಸ್ ಮುಖಂಡ ಹಾಗೂ ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರ್ ಹಾಲಪ್ಪ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿಇರಬೇಕು,ಸಾಧಿಸುವ ಚಲಿರುವವರಿಗೆ ಸಾಧನೆ ಸುಲಭವಾಗುತ್ತದೆ.ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಳ್ಗೊಳ ಬೇಕು,ಶಾಲೆಯಲ್ಲಿ ಉನ್ನತ ಹುದ್ದೆಯ ಅಧಿಕಾರಿ, ಹಾಗೂ ಉದ್ಯಮಿಗಳನ್ನ ಶಾಲೆಗಳಿಗೆ ಕರೆಸಿ ಅವರಿಂದ ಉಪನ್ಯಾಯ ಕೊಡಿಸಿದರೆ.ಅವರಿಂದ ವಿದ್ಯಾರ್ಥಿಗಳಿಗೆ ಸ್ಪೂರ್ಥಿ ದೊರೆಯುತ್ತದೆ,ತಿಪಟೂರು ಉದ್ಯಮಗಳ ಸ್ಥಾಪನೆಗೆ ಪ್ರಶಸ್ಥ್ಯವಾದ ಸ್ಥಳ ಹೆಚ್ಚು ನಮ್ಮ ಯುವಕರು ಹೆಚ್ಚು ಹೆಚ್ಚು ಉದ್ಯಮಿಗಳಾಗಿ ಹೊರಹೊಮ್ಮ ಬೇಕು,ಜಗತ್ತು ತಾಂತ್ರಿಕವಾಗಿ ನಾಗಲೋಟದಲ್ಲಿ ಮುನ್ನಡೆಯುತ್ತಿದ್ದು,ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚು ತಾಂತ್ರಿಕ ಶಿಕ್ಷಣ ದೊರೆಯಬೇಕು,ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಡೇನೂರು ಕಾಂತರಾಜು.ನಗರಸಭೆ ಸದಸ್ಯ ಲೋಕನಾಥ್ ಸಿಂಗ್.ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಪ್ರಾಚಾರ್ಯ ಶಿವಕುಮಾರ್.ಬಜಗೂರು ಮಂಜುನಾಥ್ .ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ






