ತಿಪಟೂರು:ರಾಜ್ಯದಲ್ಲಿ ಖಾಸಗೀ ಶಾಲೆಗಳು ಅನಾಧೀಕೃತ ಶಾಲಾ ಶುಲ್ಕ ವಸೂಲಿ ಮೂಲಕ ಮಕ್ಕಳ ಪೋಷಕರಿಗೆ ತೊಂದರೆ ನೀಡುತ್ತಿದ್ದಾರೆ.ಸರ್ಕಾರ ಕೂಡಲೇ ಖಾಸಗೀ ಶಾಲೆಗಳ ಅನಾಧೀಕೃತ ಶುಲ್ಕವಸೂಲಿಗೆ ಕಡಿವಾಣಹಾಕಬೇಕು,ಪ್ರತಿಶಾಲೆಯಲ್ಲಿಯೂ ಸಹ ಶಾಲಾಶುಲ್ಕಗಳು ಹಾಗೂ ತಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಮಾಹಿತಿಯನ್ನ ಶಾಲಾ ನಾಮಫಲಕದಲ್ಲಿ ಪ್ರಕಟಿಸಬೇಕು ಎಂದು ಸಧೃಡಫೌಂಡೇಷನ್ ಒತ್ತಾಯಿಸಿದೆ.

ತಿಪಟೂರು ತಾಲ್ಲೋಕಿನಲ್ಲಿಯೂ ಖಾಸಗೀ ಶಾಲೆಗಳ ಶುಲ್ಕ ಹಾವಳಿಗೆ ಪೋಷಕರು ತತ್ತರಿಸಿದ್ದಾರೆ.ಖಾಸಗೀ ಶಾಲೆಗಳು ಸರ್ಕಾರದ ನಿಯಮ ಮೀರಿ ಶುಲ್ಕವಸೂಲಿಗೆ ಇಳಿದಿವೆ,ಯಾವುದೇ ನಿಯಂತ್ರಣವಿಲ್ಲದೆ ತಮ್ಮ ಮನಸೋ ಇಚ್ಚೆ ಶುಲ್ಕವಸೂಲಿ ಮಾಡುತ್ತಿದ್ದಾರೆ ಶಿಕ್ಷಣ ಇಲಾಖೆ ಕೂಡಲೆ ಅನಾಧೀಕೃತ ಶುಲ್ಕಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ತಿಪಟೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರಸಲ್ಲಿಸಲಾಯಿತು.ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಉತ್ತಮ ಬೆಳವಣಿಗೆ ಹೊಂದಲು ಸರ್ಕಾರಿ ಶಾಲಾ ಕಾಲೇಜುಗಳಂತೆ ಖಾಸಗೀ ಶಿಕ್ಷಣ ಸಂಸ್ಥೆಗಳು ಪ್ರಮುಖ ಪ್ರಾತ್ರವಹಿಸಿವೆ.ಸೇವೆಯನ್ನೆ ತಮ್ಮ ಧ್ಯೇಯವಾಗಿರಿಸಿಕೊಂಡಿರುವ, ಖಾಸಗೀ ಸಂಸ್ಥೆಗಳ ನಡುವೆ ಹಲವಾರು ಖಾಸಗೀ ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣ ಮನೋಭಾವದೊಂದಿಗೆ,ಸರ್ಕಾರದ ನಿಯಮಗಳನ್ನ ಮೀರಿ ಹೆಚ್ಚುವರಿ ಶುಲ್ಕವಿದಿಸುತ್ತಿರುವುದು ಸಾರ್ವಜನಿಕರ ಆಕ್ಷೇಪಣೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.ಇತ್ತಿಚಿನ ದಿನಗಳಲ್ಲಿ ಮದ್ಯಮ ವರ್ಗದ ಜನ,ಸೇರಿದಂತೆ ಸಾಮಾನ್ಯ ಬಡವರು,ಕೂಲಿಕಾರ್ಮಿಕರು, ಸಹ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಮಕ್ಕಳಿಗೂ ಇಂಗ್ಲೀಶ್ ಶಿಕ್ಷಣದೊರೆಯಲಿ ಎನ್ನುವ ಮಹದಾಸೆಯೊಂದಿಗೆ, ಖಾಸಗೀ ಶಾಲೆಗಳ ಮೊರೆಹೋಗುತ್ತಿದ್ದಾರೆ, ಪೋಷಕರ ಮನಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಖಾಸಗೀ ಶಿಕ್ಷಣ ಸಂಸ್ಥೆಗಳು ,ಮಕ್ಕಳ ಪೋಷಕರಿಂದ ಅನಾಧೀಕೃತ ಶುಲ್ಕವಸೂಲಿಗಿಳಿದಿವೆ.ಸರ್ಕಾರ ಖಾಸಗೀ ಶಾಲೆಗಳ ಅನಾಧೀಕೃತ ಶುಲ್ಕವಸೂಲಿಗೆ ಕಡಿವಾಣಹಾಕಬೇಕು.ಪ್ರತಿಶಾಲೆಯಲ್ಲಿಯೂ ಪೋಷಕರ ಸಮಿತಿ ರಚಿಸ ಬೇಕು,ಕಡ್ಡಾಯವಾಗಿ ಶಾಲಾ ನಾಮಫಲಕದಲ್ಲಿ ಶುಲ್ಕಗಳ ಮಾಹಿತಿ ಹಾಗೂ ಶಾಲೆಗಳಲ್ಲಿ ದೊರೆಯುವ ಸೇವೆ ಸೌಲಭ್ಯಗಳನ್ನ ಪ್ರಕಟಿಸ ಬೇಕು ಎಂದು ಒತ್ತಾಯಿಸಿದರು.ಈ ವೇಳೆ ಮುಖಂಡರಾದ ಬೋಜರಾಜ್. ಮಲ್ಲೇನಹಳ್ಳಿ ಕಾಂತರಾಜು.ದಯಾನಂದ್.ಮುಂತ್ತಾದವರು ಉಪಸ್ಥಿತರಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ




