ತಿಪಟೂರು:ನಗರದ ಇಂದಿರಾನಗರ ವೃತ್ತದಲ್ಲಿ ಹಾರಿಸಲಾಗಿದೆ ವರಹ ಚಿಹ್ನೆಯುಲ್ಳ ಕೇಸರಿ ಧ್ವಜವನ್ನ ಜುಲೈ 23 ರಾತ್ರಿ 1ಗಂಟೆ ಸಮಯದಲ್ಲಿ ಪೊಲೀಸರು ತೆರವುಗೊಳಿಸಿದ್ದಾರೆ.ಇಂದಿರಾನಗರ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಸಮಾಜದಲ್ಲಿ ಶಾಂತಿಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ನಗರಸಭೆ ಪೌರಾಯುಕ್ತರು ಸಹ ಸಿಬ್ಬಂದಿ ಶ್ರೀನಿವಾಸ್ ಎಂಬುವವರಿಂದ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ .

ಎನ್ನಲಾಗಿದ್ದು,ಕಳೆದ 8ವರ್ಷಗಳಿಂದ ಇಂದಿರಾ ನಗರ ಸರ್ಕಲ್ ನಲ್ಲಿ ಕೇಸರಿ ಧ್ವಜ ಹಾರಿಸಲಾಗುತ್ತಿತ್ತು, ಇದರಂತೆ ಈವರ್ಷವೂ ಸಹ ಹಿಂದೂಪರ ಸಂಘಟನೆಗಳ ಯುವಕರ ಗುಂಪು ಕೇಸರಿ ಧ್ವಜ ಹಾರಿಸಿದ್ದಾರೆ,ಆದರೆ ತಿಪಟೂರು ನಗರಠಾಣೆ ಪೊಲೀಸರು ನಗರಸಭೆ ಸಿಬ್ಬಂದಿಯಿಂದ ದೂರು ಪಡೆದು ಹಿಂದೂಪರ ಸಂಘಟನೆ ಯುವಕರ ಮೇಲೆ ದೂರು ದಾಖಲು ಮಾಡಿದ್ದಾರೆ.ಎಂದು ಆರೋಪಿಸಿ ತಿಪಟೂರು ನಗರಸಭೆ ಮುಂಭಾಗ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು
ನಗರಸಭೆ ಪೌರಾಯುಕ್ತರು ಹಾಗೂ ಪೋಲೀಸ್ ಇಲಾಖೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು.ನಗರಸಭೆ ಪೌರಾಯುಕ್ತರು,ಕೂಡಲೇ ತಾವು ನೀಡಿರುವ ಪೊಲೀಸ್ ದೂರು ವಾಪಾಸ್ ಪಡೆಯಬೇಕು ನಗರಸಭೆ ಹಿಂದೂವಿರೋಧಿ ದೋರಣೆ ಮುಂದೂವರೆದಿದರೆ ಉಗ್ರಹೋರಾಟ ಮಾಡುವುದ್ದಾಗಿ ತಿಳಿಸಿದರು.

ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಮಾಜಿ ನಗರಸಭಾ ಅಧ್ಯಕ್ಷ ರಾಮ್ ಮೋಹನ್ ಪೌರಾಯುಕ್ತರು ರಾಜಕೀಯ ಒತ್ತಡಕ್ಕೆ ಮಣಿದು ಹಿಂದೂಸಂಘಟನೆಗಳ ಕಾರ್ಯಕರ್ತರ ಮೇಲೆ ದೂರು ನೀಡಿದ್ದಾರೆ.ಕಳೆದ 8ವರ್ಷಗಳಿಂದ ಇದ್ದ ಕೇಸರಿ ಧ್ವಜ ತೆರವು ಮಾಡುವ ಅಗತ್ಯವೇನಿತ್ತು.ಅನ್ಯಕೋಮಿನ ಓಲೈಕೆಗಾಗಿ ಪೊಲೀಸ್ ಇಲಾಖೆ ಹಿಂದೂ ಕಾರ್ಯಕರ್ತರನ್ನ ಬಂದಿಸಿದೆ,ಕೂಡಲೇ ಯಾಥಸ್ಥಿತಿ ಕೇಸರಿ ಧ್ವಜ ಸ್ಥಾಪನೆ ಮಾಡಬೇಕು.ನಗರಸಭೆ ಅಧಿಕಾರಿಗಳು ನೀಡಿರುವ ದೂರು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು
ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಗಂಗರಾಜು ಪೊಲೀಸ್ ಇಲಾಖೆ ಹಾಗೂ ನಗರಸಭೆ ಹಿಂದೂವಿರೋಧಿಯಾಗಿ ವರ್ತಿಸುತ್ತಿದ್ದು ಅನ್ಯಕೋಮಿನ ಓಲೈಕೆಗಾಗಿ ಹಿಂದೂಕಾರ್ಯಕರ್ತರ ಮೇಲೆ ದೂರು ನೀಡಿ ಕೇಸ್ ದಾಖಲು ಮಾಡಿದ್ದಾರೆ.ಕೂಡಲೇ ಕೇಸರೀ ಧ್ವಜ ಸ್ಥಾಪನೆ ಮಾಡಬೇಕು.ಹಿಂದೂಕಾರ್ಯಕರ್ತರಮೇಲಿನ ಕೇಸ್ ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಸನ್ನ ಕುಮಾರ್.ಬಿಜೆಪಿ ಅಧ್ಯಕ್ಷ ಸತೀಶ್ ನಗರಾಧ್ಯಕ್ಷ ಹಳೇಪಾಳ್ಯ ಜಗದೀಶ್.ಯುವಮುಖಂಡ ವಿಶ್ವದೀಪ್.ನಾಗೇಶ್.ಶಶಿಕಿರಣ್.ಗುಲಾಬಿ ಸುರೇಶ್.ಮೈನ್ಸ್ ಬಸವರಾಜು.ತರಕಾರಿ ಗಂಗಾಧರ್.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ




