Spread the love

ತಿಪಟೂರು:ನಗರದ ಗಾಂಧೀನಗರ ಕೆ.ಜಿ.ಎನ್ ವೆಲ್ಫೇರ್ ಟ್ರಸ್ಟ್ ವತಿಯಂದ ಗಾಂಧೀನಗರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಸರ್ಕಾರಿ ಮೌಲಾನ ಅಬ್ದುಲ್ ಆಜಾದ್ ಆಂಗ್ಲಮಾದ್ಯಮಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.


ಸರ್ಕಾರಿ ಪ್ರಾಥಮಿಕ ಪಾಠಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದ ನಗರಪೋಲೀಸ್ ಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್.ಮಕ್ಕಳು ಓದಿನಕಡೆ ಹೆಚ್ಚು ಆಸಕ್ತಿ ವಹಿಸಬೇಕು,ತಂದೆ ತಾಯಿಗಳು ಕಷ್ಟಪಟ್ಟು ನಿಮ್ಮನ ಶಾಲೆಗೆ ಕಳಿಸುತ್ತಾರೆ, ಅವರು ಪಡುವ ಶ್ರಮಕ್ಕೆ ತಕ್ಕಫಲದೊರೆಯಬೇಕೆಂದರೆ.ನೀವು ಚೆನ್ನಾಗಿ ಓದಿ ಮುಂದೆ ಬರಬೇಕು.ನಮ್ಮ ನಡುವೆ ನಡೆಯುವ ದುಷ್ಚಟಗಳ ಕಡೆ ಗಮನ ಹರಿಸಬಾರದು.ಹೊರಗಿನ ವ್ಯಕ್ತಿಗಳು ಕೊಡುವಂತಹ ವಸ್ತುಗಳನ್ನ ಸ್ವೀಕರಸಬೇಡಿ,ಅಪರೀಚಿತ ವ್ಯಕ್ತಿಗಳು ಕರೆದಾಗ ಹೋಗಬಾರದು.ಮಕ್ಕಳಿಗೆ ತಾಯಿ ಮೊದಲ ಶಿಕ್ಷಿಯಾದರೆ,ಮಕ್ಕಳು ಶಾಲೆಗೆ ಬಂದಾಗ ಶಿಕ್ಷಕರೇ ತಾಯಿಯ ಸ್ಥಾನದಲ್ಲಿ ನಿಂತು,ಗುರುವಾಗಿ ನಿಮ್ಮ ಜೀವನ ರೂಪಿಸಲು ಶ್ರಮಪಡುತ್ತಾರೆ.ಶಿಕ್ಷಕರು ತೋರುವ ಮಾರ್ಗದಲ್ಲಿ ನಡೆದು.ಉತ್ತಮ ಶಿಕ್ಷಣಪಡೆದು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ.ನಿಮ್ಮ ತಂದೆತಾಯಿ ಕನಸು ಈಡೇರಿಸಿ ಎಂದು ತಿಳಿಸಿದರು.


ಮದೀನ ಮಸೀದಿ ಮುಖ್ಯಸ್ಥರಾದ ಮಹಮದ್ ಸೈಫ್ಪುಲ್ಲ .ಮಾತನಾಡಿ ಮಕ್ಕಳ ಶಿಕ್ಷಣ ಪಡೆಯುವ ಕಡೆ ಹೆಚ್ಚು ಆಸಕ್ತಿ ಬೆಳಸಿಕೊಳ್ಳಿ,ನಿಮ್ಮ ತಂದೆ ತಾಯಿ ಆಸೆ ಈಡೇರಿಸಿ,ಗಾಂಧೀನಗರ ಭಾಗದಲ್ಲಿ ಅತ್ಯಂತ ಕಡುಬಡವ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ.ಬಡಮಕ್ಕಳಿಗೆ ಪ್ರೋತ್ಸಹ ನೀಡುವುದು ನಮ್ಮ ಜವಾಬ್ದಾರಿಯಾಗಬೇಕು,ಕೆ.ಜಿ ಎನ್ ವೆಲ್ಫೇರ್ ಟ್ರಸ್ಟ್ ಪ್ರತಿವರ್ಷ ಹಲವಾರು ಸಮಾಜಮುಖಿ ಕಾರ್ಯಗಳನ್ನ ಮಾಡುವ ಮೂಲಕ ಜನಮೆಚ್ಚುಗೆಗಳಿಸಿದ್ದಾರೆ.ಎಂದು ತಿಳಿಸಿದರು
ಪತ್ರಕರ್ತ ತಿಪಟೂರು ಕೃಷ್ಣ ಮಾತನಾಡಿ ವಿದ್ಯಾಯಾರ ಸ್ವತ್ತಲ್ಲ ಕಷ್ಟಪಟ್ಟು ಓದಿದರೆ,ತಕ್ಕಫಲ ದೊರೆಯುತ್ತದೆ.ಸರ್ಕಾರಿ ಶಾಲಾ ಮಕ್ಕಳು ಎನ್ನುವ ಕೀಳಿರಿಮೆ ಬಿಡಿ.ಗಾಂಧಿನಗರ ಬಡಮಕ್ಕಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಡುತ್ತಿದ್ದು ಮಕ್ಕಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮುತ್ತಾವಲ್ಲಿ ಮಹಮದ್ ದಸ್ತಗಿರ್,ಕೆ.ಜಿ.ಎನ್ ವೆಲ್ಪೇರ್ ಟ್ರಸ್ಟ್ ಅಧ್ಯಕ್ಷ ಜಮೀರ್ ಜಿಲ್ಲಾವಕ್ಪ್ ಬೋರ್ಡ್ ಸದಸ್ಯ ಮಹಮದ್ ಶಾಹಿಕ್.ಜಿಜೆಪಿ ನಗರಾಧ್ಯಕ್ಷ ಜಗದೀಶ್ .ನಗರಸಭಾ ಸದಸ್ಯ ಮಹೇಶ್.ಬೆಳೆಕಾವಲು ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೆಳಹಟ್ಟಿ,ಮುಖಂಡರಾದ ಶಾಹಿದ್,ಅಂಜನಮೂರ್ತಿ,ಅತಾಉಲ್ಲಾ,ಖದೀರ್ ಖಬ್ರು.ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!