ತಿಪಟೂರು:ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಜಲಾವೃತಗೊಂಡಿದ್ದು,ನಿಲ್ದಾಣಕ್ಕೆ ಹೋಗಲಾರದೆ.ಹೊರಬಾಗದಲ್ಲಿ ಪ್ರಯಾಣಿಕರನ್ನ ಇಳಿಸುತ್ತಿದ್ದು,ಬಸ್ ಹತ್ತಲ್ಲು ಪ್ರಯಾಣಿಕರು ಪರದಾಡುವಂತ್ತಾಗಿದೆ.

ಬಸ್ ನಿಲ್ದಾಣದಲ್ಲಿ ಸುಮಾರುಮೂರ್ನಾಲ್ಕು ಅಡಿ ನೀರು ತುಂಬಿದ್ದು.ಹಳೇಪಾಳ್ಯ ರಸ್ತೆ,ಹಾಗೂ ಇಂದಿರಾ ಕ್ಯಾಂಟಿನ್ ಹಿಂಬಾಗದ ರಸ್ತೆ ವರೆಗೂ ನೀರು ತುಂಬಿದೆ.ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದು ಸಂಪೂರ್ಣವಾಗಿ ಮುಳಗಡೆಯಾಗಿ ಬೈಕ್ ಮಾಲೀಕರು ವಾಹನ ಹೊರತೆಗೆಯಲಾಗದೆ,ತೀವ್ರತೊಂದರೆಅನುಭವಿಸುವಂತ್ತಾಗಿದೆ .ಕೆ.ಎಸ್.ಆರ್.ಟಿ ಸಿ ಬಸ್ ನಿಲ್ದಾಣವನ್ನ ಕೆರೆಯ ಹಿನ್ನೀರಿನ ಒಳಭಾಗದಲ್ಲಿ ನಿರ್ಮಾಣ ಮಾಡಿರುವ ಕಾರಣ .ನಿಲ್ದಾಣದಿಂದ ನೀರು ಸರಾಗವಾಗಿ ಹೊರಹೋಗಲು ವ್ಯವಸ್ಥೆ ಕಲ್ಪಿಸಬೇಕಾಗಿತ್ತು.ಆದರೆ.ನಿಲ್ದಾಣಕ್ಕೆ ಬರುವ ಮಳೆ ನೀರು ಹೊರಹೋಗದೆ. ನಗರದ ಚರಂಡಿ ನೀರು.ನಿಲ್ದಾಣಕ್ಕೆ ನುಗ್ಗುತ್ತಿದ್ದು.ಜಲಾವೃತಗೊಳ್ಳಲು ಕಾರಣವಾಗಿದೆ.ಪ್ರತಿವರ್ಷ ಮಳೆಗಾಲದಲ್ಲಿ ನಗರದ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮೇಲ್ನೋಟಕ್ಕೆ ಹೈಟೆಲ್ ಬಸ್ ನಿಲ್ದಾಣವಾದರೂ ಮಳೆಬಂದೆರೆ ನಿಲ್ದಾಣದ ತುಂಬ ಕೊಳಚೆ ನೀರು ತುಂಬುತ್ತಿದ್ದು ಸರಾಗವಾಗಿ ನೀರು ಹೊರಹೋಗಲು ವ್ಯವಸ್ಥೆ ಕಲ್ಪಿಸಬೇಕಿದೆ.ತಗ್ಗಿನ ಪ್ರದೇಶದಲ್ಲಿ ಇರುವ ಕೆ.ಎಸ್.ಆರ್.ಟಿ ಬಸ್ ನಿಲ್ದಾಣ ಸೇರಿದಂತೆ.ನಗರದ ಕೊಳಚೆ ನೀರು ಹೊರಹೋಗಲು.ಬೃಹದಾಕಾರದ ಚರಂಡಿ ನಿರ್ಮಾಣ ಮಾಡಲಾಗಿದರೂ.ಅಮಾನೀಕೆರೆ ಏರಿ ರಸ್ತೆ ಪಕ್ಕದಲ್ಲಿ ನಿರ್ಮಾಣವಾಗಿರುವ ಚರಂಡಿಯಲ್ಲಿ ಹೂಳು ಹಾಗೂ ಕಸಕಡ್ಡಿ ತುಂಬಿ ಸರಾಗವಾಗಿ ನೀರುಹರಿಯಲು ಸಾಧ್ಯವಾಗದೆ. ಚರಂಡಿ ನೀರು ರಸ್ತೆಗಳಲ್ಲಿ ಹರಿಯುವಂತ್ತಾಗಿದೆ.ಚರಂಡಿಯಲ್ಲಿ ಕಸಕಡ್ಡಿ ಹೂಳು ತುಂಬಿದರೂ. ಚರಂಡಿ ಮೇಲ್ಬಾಗದಲ್ಲಿ ಸ್ಲ್ಯಾಬ್ ಅಳವಡಿಸುತ್ತಿರುವುದು,ಸ್ಲ್ಯಾಬ್ ಮೇಲೆ ಮಣ್ಣು ಮುಚ್ಚುತ್ತಿರುವುದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಸ್ಯೆ ತಲೆದೋರಬಹುದು ಎನ್ನಲಾಗಿದೆ.ಸರ್ಕಾರ ಕೂಡಲೇ ಕೆ.ಎಸ್.ಆರ್.ಟಿಸಿ ಜಾಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಾಗಿ ಸಾರ್ವಜನಿಕರ ಒತ್ತಾಯಿಸಿದ್ದಾರೆ.

ವೈಭವ ಮಾಲ್ ಮುಂಭಾಗದ ಬಿ.ಹೆಚ್. ರಸ್ತೆ ಜಲಾವೃತ ವಾಹನ ಸವಾರರ ಪರದಾಟ:ಸಂಜೆ ಸುರಿದ ಭಾರೀ ಮಳೆಗೆ ನಗರದ ಪ್ರಮುಖ ರಸ್ತೆಯಾದ ಬಿ.ಹೆಚ್ ರಸ್ತೆ ಜಲಾವೃತಗೊಂಡಿದ್ದು ಸುಮಾರು ಅರ್ಧ ಗಂಟೆಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತ್ತಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ












