Spread the love

ತಿಪಟೂರು : ಯಶಸ್ವಿನಿ ಕರ್ನಾಟಕ ಸರ್ಕಾರದ ಯಶಸ್ವಿನಿ ಯೋಜನೆ ಜಾರಿಗೊಳಿಸಲು ಸಹಕಾರ ಇಲಾಖೆಯಲ್ಲಿ “ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ”ಸದಸ್ಯರಾಗಿ ತಿಪಟೂರು ಕುಮಾರ್ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಶ್ರೀಧರ್ ರವರನ್ನ ಟ್ರಸ್ಟ್ ಯಾಗಿ ನೇಮಿಸಿ ಸರ್ಕಾರ ಆದೇಶ ನೀಡಿದೆ.

ರಾಜ್ಯದಲ್ಲಿ ಈ ಹಿಂದೆ ಸಹಕಾರ ಸಂಘಗಳ ಸದಸ್ಯರ ಆರೋಗ್ಯ , ರಕ್ಷಣೆಗಾಗಿ ಯಶಸ್ಸಿನಿ ಯೋಜನೆಯನ್ನು ಸಹಕಾರ ಇಲಾಖೆಯಲ್ಲಿ 2003 ರಲ್ಲಿ ಪ್ರಾರಂಭಿಸಲಾಗಿತ್ತು , ಈ ಯೋಜನೆಯು 2003- 2004 ರಿಂದ 2017-2018 ರವರೆಗೆ ಜಾರಿಯಲ್ಲಿದ್ದು , ದಿನಾಂಕ : 31-05-2018 ರಿಂದ ಸೃಗಿತಗೊಂಡಿದ್ದು , ದಿನಾಂಕ : 01.06.2018 ರಿಂದ ಆರೋಗ್ಯ , ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಂಡಿರುತ್ತದೆ ..
ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ರಾಜ್ಯದ ಸಹಕಾರಿಗಳ ನಿರಂತರ ಬೇಡಿಕೆಯನ್ನಯ ರಾಜ್ಯ ಸರ್ಕಾರವು 2022-23ನೇ ಸಾಲಿನ ಆಯವ್ಯಯದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಲು ಮೇಲೆ ಕ್ರ.ಸಂ. ( 1 ) ರಲ್ಲಿ ಓದಲಾದ ಆಯವ್ಯಯದಲ್ಲಿ ಘೋಷಣೆ ಮಾಡಿದ್ದು, ದಿನಾಂಕ : 30.03.2022 ರ ಆದೇಶದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ .ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಟ್ರಸ್ಟನ್ನು ರಚಿಸಿ , ಸದರಿ ಟ್ರಸ್ಟ್ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ . ಈ ಟ್ರಸ್ಟ್‌ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರು ಪ್ರಧಾನ ಪೋಷಕರಾಗಿ , ಸಹಕಾರ ಇಲಾಖೆಯ ಪ್ರಭಾರವನ್ನು ಹೊಂದಿರುವ ಸಚಿವರು ಪೋಷಕರಾಗಿ , ಸರ್ಕಾರದ ಪ್ರಧಾನ ಕಾರ್ಯದರ್ಶಿರವರು ಸಹಕಾರ ಇಲಾಖೆ , ಟ್ರಸ್ಟ್‌ನ ಅಧ್ಯಕ್ಷರಾಗಿ , ಇತರ ಸರ್ಕಾರಿ ಅಧಿಕಾರಿಗಳು ಮತ್ತು ರಾಜ್ಯದ ವಿವಿಧ ವೈದ್ಯಕೀಯ ವಲಯಗಳಲ್ಲಿ ಹೆಸರಾಂತ ವೈದ್ಯರು ಟ್ರಸ್ಟಿಗಳಾಗಿರುತ್ತಾರೆ . ಯಶಸ್ವಿನಿ ಯೋಜನೆ ಜಾರಿಗೊಳಿಸಲು ಸಹಕಾರ ಇಲಾಖೆಯಲ್ಲಿ ಈ ಹಿಂದ ರಚಿಸಲಾಗಿದೆ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್‌ನ ವೈದ್ಯರು ಮತ್ತು ಸಹಕಾರಿಗಳ ಟ್ರಸ್ಟಿಗಳ ಅವಧಿಯು ದಿನಾಂಕ : 21-09-2025ಕ್ಕೆ ಮುಕ್ತಾಯಗೊಂಡಿರುತ್ತದೆ .
ಯಶಸ್ವಿನಿ ಟ್ರಸ್ಟ್ ಡೀಡ್‌ನ ಕ್ರ . ಸಂ . 03 ರ ಪ್ರಕಾರ ಯಶಸ್ವಿನಿ ಟ್ರಸ್ಟ್‌ನಲ್ಲಿ 13 ಜನ ಟ್ರಸ್ಟಿಗಳಿದು , ಅದರಲ್ಲಿ ಸಹಕಾರ ಇಲಾಖೆಯ ಪುಭಾರವನ್ನು ಹೊಂದಿರುವ ಸರ್ಕಾರದ ಕಾರ್ಯದರ್ಶಿ / ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಅಧ್ಯಕ್ಷರಾಗಿರುತ್ತಾರೆ . ಟ್ರಸ್ಟ್ ನ ಅಧ್ಯಕ್ಷರನ್ನು ಹಾಗೂ ಇತರೆ ಐದು ಜನ ಸರ್ಕಾರಿ ಅಧಿಕಾರಿಗಳು ಖಾಯಂ ಸದಸ್ಯರಾಗಿರುತ್ತಾರೆ , ಮುಂದುವರೆದು , ರಾಜ್ಯದ ವಿವಿಧ ವೈದ್ಯಕೀಯ ವಲಯಗಳಲ್ಲಿ ಹೆಸರಾಂತ ಐದು ವೈದ್ಯರುಗಳು ಟ್ರಸ್ಟಿಗಳಾಗಿರುತ್ತಾರೆ ಹಾಗೂ ಟ್ರಸ್ಟ್ ಡೀಡ್‌ನ ಪ್ರಕಾರ ಟ್ರಸ್ಟಿಗಳಾಗಿ ಇಬ್ಬರು ಹಿರಿಯ ಸಹಕಾರಿಗಳನ್ನು ಸರ್ಕಾರದಿಂದ ನಾಮನಿರ್ದೇಶನ ಮಾಡಲಾಗಿದ್ದು.ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಯಶಸ್ವಿನಿಯೋಜನೆ,ಆರೋಗ್ಯ ಸುರಕ್ಷಾ ಟ್ರಸ್ಟ್ ನ ಟ್ರಸ್ಟಿಯಾಗಿ ಡಾ//ಶ್ರೀಧರ್ ರವರನ್ನ ನೇಮಕ ಮಾಡಿದ್ದು. ಗ್ರಾಮೀಣ ಭಾಗದ ಸಾವಿರಾರು ರೋಗಿಗಳಿಗೆ ಕೋವಿಡ್ ಸಂದರ್ಭದಲ್ಲಿ ಉಚಿತ ಸೇವೆ ನೀಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.ಅಲ್ಲದೆ ತಿಪಟೂರು ಸೇರಿದಂತೆ ಜಿಲ್ಲೆಯಾದ್ಯಾಂತ ವೈದ್ಯಕೀಯ ಸೇವೆ.ಮಾಡಿ ಮಾದರಿ ವೈದ್ಯರಾಗಿರುವ ಡಾ//ಶ್ರೀಧರ್ ರವರಿಗೆ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರಕಿರುವುದು ಕಲ್ಪತರು ನಾಡಿನ ಜನರಲ್ಲಿ ಹೊಸ ಆಶಾಭಾವನೆ ಹುಟ್ಟಿಹಾಕಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!