ತಿಪಟೂರು :ನಗರದ ಶಾರದ ನಗರ ರೈಲು ನಿಲ್ದಾಣದ ಬಳಿ ಅಪರೀಚಿತ ಮಹಿಳೆಯೊರ್ವರು ದಿನಾಂಕ 20.05.2025 ರಂದು ರೈಲಿಗೆ ಸಿಲುಕಿಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹಾಸನ ಜಿಲ್ಲ ಆಸ್ಪತ್ರೆಗೆ ದಾಖಲಿಸಿದ್ದು,ಚಿಕಿತ್ಸೆ ಫಲಕಾಎಇಯಾಗದೆ ಮೃತಪಟ್ಟಿರುತ್ತಾರೆ, ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂಬರ್ 29/2025,ಕಲಂ 194 ಬಿಎನ್ ಎಸ್ಎಸ್ ರೀತ್ಯಾ ಪ್ರಕರಣ ದಾಖಲಿಸಲಾಗಿದೆ, ಆದರೆ ಮೃತ ಮಹಿಳೆಯ ವಿಳಾಸ ಹಾಗೂ ವಾರಸುದಾರರು ಪತ್ತೆಯಾಗಿರುವುದಿಲ್ಲ. ಮೃತಮಹಿಳೆಯು ವಯಸ್ಸು 50-55 ಆಗಿದ್ದು,152 ಸೆ.ಮೀ ಎತ್ತರ,ದುಂಡು ಮುಖ,ಗೋದಿ ಮೈ ಬಣ್ಣ,ಸಾಧಾರಣ ಮೈ ಕಟ್ಟು,40 ಸೆ.ಮೀ ಉದ್ದದ ಕಪ್ಪು ಬಿಳಿ ಮಿಶ್ರಿತ ತಲೆಕೂಡಲೆ ಇರುತ್ತದೆ,ಕಪ್ಪು ಬಣ್ಣದ ರವಿಕೆ,ಕ್ರೀಂ ಬಣ್ಣದ ಒಳ ಲಂಗ,ನೀಲಿ ಹಸಿರು ಬಣ್ಣಮಿಶ್ರೀತ ಸೀರೆ,ಕೈಯಲ್ಲಿ ನೀಲಿ ಗಾಜಿನ ಬಳೆ ಧರಿಸಿರುತ್ತಾರೆ.ಮೃತ ಮಹಿಳೆಯ ಗುರುತು ಪತ್ತೆಯಾದರೆ, ಅಥವಾ ವಾರಸುದಾರರು ಯಾರಾದರು ಇದರೇ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆ 08174-232244 ಅಥವಾ 9480802125ಸಂಪರ್ಕಿಸಲು ಕೋರಿದೆ




