Spread the love

ತಿಪಟೂರು: ಹಳೆಪಾಳ್ಯದ ಗಾಯತ್ರಿನಗರದಲ್ಲಿರುವ ರಾಮಮಂದಿರದಲ್ಲಿ ಶುಕ್ರವಾರ ರಾತ್ರಿ ಕಳ್ಳರು ಕೈಚಳಕ ತೋರಿಸಿದ್ದಾರೆ.

ದೇವಾಲಯ ಹಿಂದಿನ ಬಾಗಿಲ ಬೀಗ ಮುರಿದು, ಹುಂಡಿಯನ್ನು ಗಾಯತ್ರಿ ನಗರ ಬಡಾವಣೆಗೆ ಹೊಂದಿಕೊಂಡಂತಿರುವ, ಮಾವಿನ ತೋಪಿಗೆ ಹೊತ್ತೊಯ್ದು ಹುಂಡಿಯ ಹಣವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ರಾಮ ಮಂದಿರ ಟ್ರಸ್ಟಿಯವರು ಪ್ರತಿ ವರ್ಷ ಮೇ ತಿಂಗಳಲ್ಲಿ ಹುಂಡಿ ತೆಗೆಯುತ್ತಿದ್ದರು,ಕಳೆದ ಬಾರಿ ಅಂದಾಜು 1 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು. ಶೀಘ್ರದಲ್ಲಿ ಟ್ರಸ್ಟ್ ನವರು ಹುಂಡಿ ತೆಗೆಯಬೇಕಿತ್ತು, ಆದರೆ ಅಷ್ಟರೊಳಗೆ ಕಳ್ಳತನವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಸ್ಥಳಕ್ಕೆ ತಿಪಟೂರು ನಗರಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!