Spread the love

ತಿಪಟೂರು ತಾಲೂಕಿನ ಹೊನ್ನವಳ್ಳಿ
ಹೋಬಳಿ . ಚೌಡೇನಹಳ್ಳಿ ಗ್ರಾಮದಲ್ಲಿ ಕುರಿಗಾಯಿಗಳ ಕುರಿಮಂದೆಗೆ ನುಗ್ಗಿದ ಬೀದಿ ನಾಯಿಗಳ ಹಿಂಡು 18ಕುರಿಗಳನ್ನ ಬಲಿಪಡೆದಿದ್ದು 10ಕುರಿಗಳನ್ನ ಗಾಯಗೊಳಿಸಿರುವ ಘಟನೆ ನಡೆದಿದೆ.


ಚೌಡೇನಹಳ್ಳಿ ಗ್ರಾಮದಲ್ಲಿ ಮಲ್ಲಯ್ಯನವರ ಮಗ ಜನಪದ ಕಲಾವಿದರು ಹಾಗೂ ಕುರಿಗಾಹಿ ಶಂಕರಪ್ಪ ನವರಿಗೆ ಸೇರಿದ ಕುರಿ ಮಂದೆಗೆ ನುಗ್ಗಿದ ನಾಯಿಗಳ ಹಿಂಡು 18 ಕುರಿಗಳನ್ನು ಬಲಿ ಪಡೆದಿದ್ದು 10ಕ್ಕೂ ಹೆಚ್ಚು ಕುರಿಗಳನ್ನ ಗಾಯಗೊಳಿಸಿವೆ,ನಾಯಿಗಳ ಹಿಂಡು ನಿನ್ನೆ ರಾತ್ರಿ 12 ಗಂಟೆ ಸಮಯದಲ್ಲಿ ಕುರಿ ಗೂಡು ಒಳಗೆ ಪ್ರವೇಶಿಸಿ 18 ಕುರಿಗಳ ರಕ್ತ ಕುಡಿದು ಕೊಂದು ಹಾಕಿವೆ. ನಾಯಿಗಳ ಹಾವಳಿಯಿಂದ ಚೌಡೇನಹಳ್ಳಿ ಹನುಮಂತಪುರ .ಗಿಡದಹಳ್ಳಿ ಸೇರಿದಂತೆ.ನಾಯಿಗಳ ದಾಳಿಯಿಂದ ಸುತ್ತಮುತ್ತಲಗ್ರಾಮಗಳಲ್ಲಿ ಆತಂಕ ಉಂಟುಮಾಡಿದೆ. ನಾಯಿಗಳ ದಾಳಿಯಿಂದ ಕುರಿಗಳು ಸಾವನ್ನಪ್ಪಿದರೂ ,ಪಶುಪಾಲನೆ ಇಲಾಖೆ ಯಾವುದೇ ಕ್ರಮಕೈಗೊಳ್ಳದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

error: Content is protected !!