Spread the love

: ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಜಾತ್ಯತೀತ, ಪಕ್ಷಾತೀತ, ನಾಯಕನಾಗಿ ಗುರು ವಿರಕ್ತರು ಒಂದೇ ಎಂದು ತಳಿಸಿ ಧರ್ಮವನ್ನು ಹಿಬ್ಬಾಗ ಮಾಡಲು ಅವಕಾಶ ನೀಡದೆ ರಾಜಕೀಯ ಕ್ಷೇತ್ರದಲ್ಲಿ ಹಲವಾರು ಬಾರಿ ಶಾಸಕರಾಗಿ ಒಮ್ಮೆ ಸಂಸದರಾಗಿ ನೇರ ನುಡಿಯ ವ್ಯಕ್ತಿಯಾಗಿ ಯಾವುದೇ ಕಪ್ಪು ಚುಕ್ಕಿ ಬಾರದಂತೆ ಸೋಲಿಲ್ಲದ ಸರದಾರನಾಗಿ ಯಾವುದೇ ರಾಜಕೀಯ ಉನ್ನತ ಹುದ್ದೆಗೆ ಆಸೆ ಪಡದೆ 94 ವಸಂತಗಳನ್ನು ಪೂರೈಸಿದ ಶ್ರೀ ಶಾಮನೂರು ಶಿವಶಂಕರಪ್ಪನವರು ಶ್ರೀ ಮಠದ ಆಪ್ತರಾಗಿದ್ದರು, ಶ್ರೀಯುತರ ಸಾವು ಇಡೀ ರಾಜ್ಯಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಹಿರಿಯ ಶ್ರೀಗಳಾದ ಕರಿವೃಷಭದೇಶಿಕೇಂದ್ರಡಾ. ಶಿವಯೋಗಿಶ್ವರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.


90ರ ದಶಕದ ಹಿಂದೆ ಶಿಕ್ಷಣದ ಕೊರತೆಯಿಂದ 10ನೇ ತರಗತಿ ವಿದ್ಯಾಭ್ಯಾಸ ನಡೆಸಿ ರಾಜ್ಯದಲ್ಲಿ ಶಿಕ್ಷಣಕ್ಕೆ ಕೊರತೆ ಆಗದಿರಲಿ ಎಂದು ರಾಜ್ಯದ ಹಲವು ಕಡೆ ಬಾಪೂಜಿ ಎಂಬ ಹೆಸರಿನ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ನೀಡಿದರು ರಾಜ್ಯದ ಬಹು ಸಂಖ್ಯಾತ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ರಾಷ್ಟ್ರಾಧ್ಯಕ್ಷರಾಗಿ ಧರ್ಮ ಹೊಡೆಯುವವರಿಗೆ ತಿಳಿಹೇಳಿ ವೀರಶೈವ ಲಿಂಗಾಯತ ಒಂದೇ ಎಂದು ತಿಳಿಸಿದ ಮಹಾನ್ ಸಮಾಜದ ಹಿರಿಯ ಚೇತನ ಕೈಗಾರಿಕಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ತೋರಿದರು ಇವರ ಸಾವು ಇಡೀ ರಾಜ್ಯಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ತಿಳಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!