
ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದಲ್ಲಿ ಮಡಿವಾಳ ಶ್ರೀ ಮಾಚಿದೇವರ ಸಂಘದ ವತಿಯಿಂದ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಕ, ವೀರಗಣಾಚಾರಿ ಶ್ರೀ ಮಡಿವಾಳ ಮಾಚಿದೇವರ ದ್ವಿತೀಯ ವರ್ಷದ ಜಯಂತೋತ್ಸವ ವಿಜೃಂಭಣೆಯಿಂದ ಆಚರಿಸಲಾಗಿತ್ತು.

ಸದರಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಚಿತ್ರದುರ್ಗ ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಮಾತನಾಡಿ ಮಡಿವಾಳ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ನಮ್ಮ ಸಮುದಾಯದ ಪದ್ಧತಿಗಳಾದ ಮಡಿ ಹಾಕುವುದು, ಅಂಗಾರಾ ಹಾಕುವುದು ಸಂಸ್ಕೃತಿಯ ಪ್ರತೀಕವಾಗಿದೆ ಅಲ್ಲದೆ ಮಡಿವಾಳ ಶ್ರೀ ಮಾಚಿದೇವರು ಶರಣರ ಬಟ್ಟೆ ತೊಳೆಯುವ ಕಾರ್ಯದಿಂದ ಅಂದು ತೊಡಗಿಸಿಕೊಂಡ ಪರಿಣಾಮವಾಗಿ ಇಂದು ನಾವು ನಾವು ತಲೆಯೆತ್ತಿ ಸಮಾಜದಲ್ಲಿ ನಿಲ್ಲುವ ಶಕ್ತಿ ತುಂಬಿದ್ದಾರೆ. ದೀಪವು ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವ ಹಾಗೆ ಶ್ರೀ ಮಡಿವಾಳ ಮಾಚಿದೇವ ಅಂದಿನ ಸಮಾಜದ ಶೋಷಣೆ ಗಳಿಂದ ಸುಟ್ಟುಕೊಂಡು ವಚನಗಳ ಸಂರಕ್ಷಿಸಿ ತಾನು ವಚನಗಳನ್ನು ರಚಿಸಿದ ಮಹಾನ್ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಅಂದು ಶ್ರೀ ಮಾಚಿದೇವ ಬಟ್ಟೆ ತೊಳೆಯುವ ಕಾಯಕದಿಂದ ಕ್ರಾಂತಿ ಮಾಡಿದ್ದರು ಇಂದು ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಸಮಾಜ ಮತ್ತು ಸಮುದಾಯಕ್ಕೂ ಕ್ರಾಂತಿ ಮಾಡಬೇಕಾದ ಜವಾಬ್ದಾರಿ ತಮ್ಮೆಲ್ಲರಿಗೂ ಇದೆ ಎಂದರು.
ಇದೇ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಪ್ರವಚನಕಾರರು ಮಾಜಿ ಸದಸ್ಯರು ಕರ್ನಾಟಕ ಕರ್ನಾಟಕ ನಾಟಕ ಅಕಾಡೆಮಿಯ ಡಾ. ಅಶ್ವಥ್ ನಾರಾಯಣ ಕೆ ಪಿ ಉಪನ್ಯಾಸ ನೀಡಿ ಯು ಶ್ರೀ ಮಡಿವಾಳ ಮಾಚಿದೇವರ ಇತಿಹಾಸದ ಪೂರ್ವ ವೃತ್ತಾಂತವನ್ನು ವಿವರಿಸಿ ನಾನು ಬೆಂಗಳೂರು ಎಂಬ ನಗರದಲ್ಲಿ ಸಣ್ಣ ಮನೆಯಲ್ಲಿ ವಾಸವಾಗಿದ್ದೆ ಶ್ರೀ ಮಾಚಿದೇವರ ಕುರಿತು ಅಧ್ಯಯನ ಮಾಡಿ ಲೇಖನವನ್ನ ಬರೆದು ಇಂಗ್ಲೀಷ್ ನಲ್ಲಿ ಭಾಷಾಂತರಿಸಿ ದೆಹಲಿಗೆ ಕಳಿಸಿಕೊಟ್ಟಿದ್ದೆ ಅದು ತುಂಬಾ ಪ್ರಚಾರಕ್ಕೆ ಬಂದಿದ್ದು ಇಂದು ನಾನು ಇದೇ ಬೆಂಗಳೂರಿನಲ್ಲಿ ಸ್ವಂತ ಮನೆಯನ್ನ ಹೊಂದಿದ್ದೇನೆ ಇದು ಶ್ರೀ ಮಾಚಿದೇವರ ಶಕ್ತಿ ಇಂತಹ ಶಕ್ತಿಯನ್ನು ಪಡೆದುಕೊಂಡು ನಮ್ಮ ಸಮುದಾಯದ ಯುವ ಪೀಳಿಗೆ ಉತ್ತಮ ಸಾಧನೆಯನ್ನ ಮಾಡಬೇಕಾಗಿದೆ ಎಂದರು.ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಮುದಿಮಡು ರಂಗಸ್ವಾಮಯ್ಯನವರು ಮಾತನಾಡಿ ಶ್ರೀ ಮಡಿವಾಳ ಮಾಚಿದೇವರು ನಮ್ಮ ಸಮುದಾಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ನಮ್ಮ ಮಡಿವಾಳ ಸಮುದಾಯಕ್ಕೆ ಪ್ರಮುಖವಾಗಿ ಎರಡು ವಿಷಯಗಳ ಬೇಡಿಕೆ ಇದೆ ಅವುಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿಸುವುದು ಹಾಗೂ ಪ್ರತ್ಯೇಕವಾಗಿ ಮಡಿವಾಳ ಸಮುದಾಯದ ಅಭಿವೃದ್ಧಿ ನಿಗಮವನ್ನು ಮಾಡುವ ಹೋರಾಟ ವಿಳಂಬವಾಗುತ್ತಿದೆ ಆದರೂ ಹೋರಾಟವನ್ನು ನಿಲ್ಲಿಸದೆ ನಿರಂತರವಾಗಿ ನಮ್ಮ ಸಮುದಾಯದ ಏಳಿಗೆಗಾಗಿ ಮುಂದುವರಿಸಲಾಗುತ್ತದೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಜಗದ್ಗುರು ಡಾ. ಶ್ರೀ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಪ್ರವಚನಕಾರರಾದ ಶ್ರೀ ಡಾ. ಅಶ್ವಥ್ ನಾರಾಯಣ ಕೆ ಪಿ ಮಡಿವಾಳ ಶ್ರೀ ಮಾಚಿದೇವರ ಸಂಘದ ಅಧ್ಯಕ್ಷರಾದ ಶ್ರೀ ತಿಮ್ಮಯ್ಯನವರು ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಶ್ರೀ ಮುದಿಮಡು ರಂಗಸ್ವಾಮಿಯವರು ಸಂಪಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶಿವಲಿಂಗಮೂರ್ತಿಯವರು ಉಪಸ್ಥಿತರಿದ್ದರು ಹಾಗೂ ಸಂಘದ ಎಲ್ಲಾ ಸರ್ವ ಸದಸ್ಯರು, ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಸಂತೋಷ್ ಓಬಳ. ತುರುವೇಕೆರೆ










Leave a Reply