ತಿಪಟೂರು:ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಶ್ರೀ ಕೆಂಪಮ್ಮದೇವಿ ಹಾಗೂ ಮಾರನಗೆರೆ ಶ್ರೀಕೆಂಪಮ್ಮ ದೇವಿ.ಕೊಲ್ಲಾಪುರದಮ್ಮ ದೇವಿ.ಚಿಕ್ಕಮ್ಮ ದೇವಿ.ಶ್ರೀಧೂತರಾಯಸ್ವಾಮಿ ರವರಿಗೆ ಪ್ರತಿವರ್ಷದ ಸಂಪ್ರದಾಯದಂತೆ ತಿಪಟೂರು ನಗರಠಾಣೆ ಪೊಲೀಸ್ ಸಿಬ್ಬಂದಿ ಪೂಜೆಸಲ್ಲಿಸಿದರು.

ಶ್ರೀ ಕೆಂಪಮ್ಮ ದೇವಿ,ಶ್ರೀಮಾರನಗೆರೆ ಶ್ರೀಕೆಂಪಮ್ಮ ದೇವಿ,ಶ್ರೀಕೊಲ್ಲಾಪುರದಮ್ಮ ದೇವಿ.ಶ್ರೀಚಿಕ್ಕಮ್ಮದೇವಿ.ಶ್ರೀಧೂತರಾಯಸ್ವಾಮಿ ಯವರನ್ನ ನಗರದ ಅರಳಿಕಟ್ಟೆಯಿಂದ ಬಳಿ ಮಣೇವು ಸೇವೆ ನಂತರ ತಿಪಟೂರು ನಗರಪೊಲೀಸ್ ಠಾಣೆಗೆ ಕರೆದುಕೊಂಡುಹೋಗಿ ಠಾಣೆಯಲ್ಲಿ ಕೂರಿಸಿ ಪೂಜೆಸಲ್ಲಿಸಲಾಯಿತು.
ತಿಪಟೂರು ಉಪವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ವಿನಾಯಕ ಶೆಟಿಗೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ರವಿ ಕುಮಾರ್.ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಲ್ಪತರು ನಾಡಿನ ಶಾಂತಿ ಸುಭೀಕ್ಷೆಗಾಗಿ ವಿಶೇಷ ಪೂಜೆಸಲ್ಲಿಸಿದರು.ಮಹಿಳಾ ಪೊಲೀಸ್ ಸಿಬ್ಬಂದಿ ತಂಬಿಟ್ಟಿನಿಂದ ಆರತಿ ಅರ್ಪಿಸಿ,ಕುಂಕುಮಾರ್ಚನೆ ನೆರವೇರಿಸಿದರು.ಪಾನಕ.ಫಲಹಾರ,ಮಡಿಲಕ್ಕಿ ಅರ್ಪಿಸಿ ಪೂಜೆಸಲ್ಲಿಸಲಾಯಿತು.
ವರದಿ:ಮಂಜುನಾಥ್ ಹಾಲ್ಕುರಿಕೆ




