ತಿಪಟೂರು:ನಗರದ ಕೆಲವು ಖಾಸಗೀ ಶಾಲೆಗಳಲ್ಲಿ ಅನಾಧೀಕೃತ ಶುಲ್ಕ ವಸೂಲಿ ಮಾಡಲಾಗುತ್ತಿದೆ,ಸರ್ಕಾರದ ನಿಯಮಾನುಸಾರ ಶುಲ್ಕ ಪಡೆಯದೆ, ಡೋನೇಷನ್ ವಸೂಲಿ ಮಾಡಲಾಗುತ್ತಿದೆ ,ಎಂದು ಅರೋಪಿಸಿ ಕಲ್ಪತರು ಸೆಂಟರ್ ಸ್ಕೂಲ್ ಮುಂಭಾಗ ಸಧೃಡ ಫೌಂಡೇಷನ್ ಹಾಗೂ ಖಾಸಗೀ ಶಾಲೆಗಳ ಮಕ್ಕಳ ಒಕ್ಕೂಟ ದಿಂದ ಶಾಲೆ ಮುಂಭಾಗ ಆಹೋರಾತ್ರಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಲ್ಪತರು ಸೆಂಟರ್ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು,ಕಲ್ಪತರು ಸೆಂಟರ್ ಶಾಲೆ ಶಿಕ್ಷಣ ಇಲಾಖೆ 2024ನೇ ಶೈಕ್ಷಣಿಕ ಸಾಲಿಗೆ 26 ಸಾವಿರ ಶಾಲಾ ಶುಲ್ಕಪಾವತಿ ಮಾಹಿತಿ ನೀಡಿದೆ,ಆದರೆ 2025-2026,ನೇ ಸಾಲಿಗೆ 45ಸಾವಿರ ಶುಲ್ಕವಸೂಲಿ ಮಾಡುತ್ತಿದ್ದು, ಸಂಪೂರ್ಣ ಇಲಾಖೆಯ ನಿಯಮಕ್ಕೆ ವಿರೋದವಾಗಿದ್ದು,ಶಿಕ್ಷಣ ಇಲಾಖೆ 3ಕಂತಿನಲ್ಲಿ ಶುಲ್ಕಪಾವತಿಗೆ ಸೂಚಿಸಿದರೂ ಇಂದು ಬೆಳಗ್ಗೆ ಮಕ್ಕಳನ್ನ ದಾಖಲಿಸಲು ಹೋದಾಗ ದಾಖಲು ಮಾಡಿಸಿಕೊಳ್ಳಲು ನಿರಾಕರಿಸಿದ್ದು,ಶಾಲಾ ಆಡಳಿತ ಮಂಡಳಿಯ ಎಲ್ಲಾ ನಿಯಮಗಳಿಗೂ ನಾವೂ ಬದ್ದವಾಗಿದ್ದೇವೆ,

ನಾವೂ ಯಾವುದೇ ಪ್ರಶ್ನೆ ಮಾಡುವುದಿಲ್ಲ ಎಂದು ಒಪ್ಪಿಗೆ ಪತ್ರ ಸಿದ್ದಪಡಿಸಿದ್ದು,ಒತ್ತಾಯ ಪೂರಕವಾಗಿ ಪೋಷಕರಿಂದ ಸಹಿ ಪಡೆಯಲಾಗುತ್ತಿದೆ. ಸೆಂಟರ್ ಸ್ಕೂಲ್ ಮುಖ್ಯಸ್ಥರನ್ನ ಮಕ್ಕಳ ಪೋಷಕರ ಪ್ರಶ್ನೆಮಾಡಿದ್ದಾಗ,ಕಚೇರಿಯಿಂದ ಹೊರಹೋದವರು ವಾಪಾಸ್ ಬಂದಿಲ್ಲ ಸೆಂಟರ್ ಸ್ಕೂಲ್ ಮುಖ್ಯಸ್ಥರ ಉದ್ಗಟತನಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಪೋಷಕರ ಪ್ರತಿಭಟನೆ ಹಿನ್ನೆಲೆ ಇಒ ಸುದರ್ಶನ್.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ,ಪ್ರತಿಭಟನಾ ನಿರತರಜೊತೆ ಮಾತುಕತೆ ನಡೆಸಿದರು.




