Spread the love

ತಿಪಟೂರು:ತಾಲ್ಲೋಕಿನ ಕಸಬಾ ಹೋಬಳಿ ಕಂಚಾಘಟ್ಟ ಗ್ರಾಮದ ಮಜರೆ ಗೊಲ್ಲರಹಟ್ಟಿ ಗ್ರಾಮ ತಿಪಟೂರು ನಗರಕ್ಕೆ ಹೊಂದಿಕೊಂಡಂತೆ ಇದ್ದು, ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುವ ಗೊಲ್ಲರಹಟ್ಟಿಗೆ ರಸ್ತೆ ಸೌಕರ್ಯವಿಲ್ಲದೆ ಗ್ರಾಮಸ್ಥರು ಪರದಾಡುವಂತ್ತಾಗಿದೆ.ನಮ್ಮ ಗ್ರಾಮಕ್ಕೆ ರಸ್ತೆ ಸೌಕರ್ಯ ಕಲ್ಪಸುವಂತ್ತೆ ಒತ್ತಾಯಿಸಿ ತಿಪಟೂರು ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.


ಕಾಡುಗೊಲ್ಲ ಸಮಾಜದ ಮುಖಂಡ ಪ್ರಕಾಶ್ ಯಾದವ್ ಮಾತನಾಡಿ ಕಂಚಾಘಟ್ಟ ಗೊಲ್ಲರ ಹಟ್ಟಿಗೆ ಸೂಕ್ತ ರಸ್ತೆಸಂಪರ್ಕವಿಲ್ಲದೆ.ಪರದಾಡುವಂತ್ತಾಗಿದೆ,ಮಹಿಳೆಯರು ಮಕ್ಕಳು ಪರದಾಡುವಂತ್ತಾಗಿದೆ. ಶಾಲಾಮಕ್ಕಳು ರಸ್ತೆ ಸಂಪರ್ಕವಿಲ್ಲದೆ,ಸುಮಾರು ಮೂರ್ನಾಲ್ಕು ಕಿಲೋಮೀಟರ್ ಸುತ್ತಿಕೊಂಡು ನಗರದ ಶಾಲಾ ಕಾಲೇಜಿಗೆ ತಲುಪಬೇಕು. ಅಂಗವಿಕಲರು ವಯೋವೃದ್ದರ ಸ್ಥಿತಿಯಂತು ಅಯೋಮಯವಾಗಿದೆ.ಹಟ್ಟಿಯಲ್ಲಿ ಯಾರಾದರೂ ಅನಾರೋಗ್ಯ ಪೀಡಿತರಾದರೆ.ಅಂಬುಲೇನ್ಸ್ ಬರುವುದಕ್ಕೂ ರಸ್ತೆಇಲ್ಲ.ಸರ್ಕಾರ ಕೂಡಲೇ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ಗ್ರಾಮದ ಮುಖಂಡ ಹೊನ್ನಪ್ಪ ಮಾತನಾಡಿ ಕಂಚ್ಚಾಘಟ್ಟ ಗೊಲ್ಲರ ಹಟ್ಟಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ,ಹಿಂದೆ ಇದ್ದರಸ್ತೆ ಎತ್ತಿನಹೊಳೆ ಕಾಮಗಾರಿಯಿಂದ ರಸ್ತೆ ಇಲ್ಲದಾಗಿದೆ. ಗ್ರಾಮಕ್ಕೆ ಇರುವ ರಸ್ತೆ ಗುರ್ತಿಸಿಕೊಡಿ ಎಂದು ಮನವಿ ಮಾಡಿದರು ತಾಲ್ಲೋಕು ಕಚೇರಿ ಸಿಬ್ಬಂದಿ ಸ್ಪಂದಿಸುತ್ತಿಲ್ಲ.ಗ್ರಾಮಕ್ಕೆ ಇರುವ ಬಂಡಿದಾರಿಯಲ್ಲಿ ಓಡಾಡಲು ರಸ್ತೆ ಗುಂಡಿಬಿದ್ದು ಕೆಸರು ಮಯವಾಗಿದೆ. ಮಕ್ಕಳು ವೃದ್ದರು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ತಾಲ್ಲೋಕು ಆಡಳಿತ ಕೂಡಲೇ ಕಂಚ್ಚಾಘಟ್ಟ ಗೊಲ್ಲರಹಟ್ಟಿಗೆ ರಸ್ತೆ ಸಂಪರ್ಕಿಸಬೇಕು ಎಂದು ಒತ್ತಾಯಿಸಿದರು
ಜಯಣ್ಣ.ಶಂಕರಪ್ಪ.ರಾಜಣ್ಣ.ರಮೇಶ್ ಬಸವರಾಜು ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!