ಹಸುಗಳನ್ನ ತೋಟದಲ್ಲಿ ಮೇಯಿಸಲು ಹೋದ ರೈತ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಿಪಟೂರು ತಾಲ್ಲೋಕಿನ ಕಲ್ಲಯ್ಯನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಚಿಕ್ಕಕೊಟ್ಟಿಗೆಹಳ್ಳಿ ನಿವಾಸಿ ಸುಮಾರು 55 ವರ್ಷ ವಯಸ್ಸಿನ ಯೋಗೇಶ್ ಮೃತದುರ್ದೈವಿ.

ನಿತ್ಯಕೆಲಸದಂತೆ ತಮ್ಮ ಎರಡು ಸೀಮೆ ಹಸುಗಳಿಂದ ಹಾಲು ಕರೆದು.ಮೇಯಿಸಲು ತಮ್ಮ ಚಿಕ್ಕಕೊಟ್ಟಿಗೆಹಳ್ಳಿ ಸರ್ವೇಬರ್ ನ ತೋಟಕ್ಕೆ ಹೋಗಿದ್ದಾರೆ,ಆದರೆ, ರಾತ್ರಿ ಮಳೆಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನ ಗಮನಿಸದೆ ಆಕಸ್ಮಿಕವಾಗಿ ತಮ್ಮ ಹಸುಗಳು ಹಾಗೂ ಯೋಗೇಶ್ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಠಾಣೆ ಸಬ್ ಇನ್ಪೆಕ್ಟರ್ ನಾಗರಾಜು.ಬೆಸ್ಕಾಂ ಇಲಾಖೆ ಎಇಇ ಮನೋಹರ್.ಸೇರಿದಂತೆ ಕಂದಾಯ ಇಲಾಖೆ ,ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ವರದಿ:ಮಂಜುನಾಥ್ ಹಾಲ್ಕುರಿಕೆ




