ತಿಪಟೂರು:ಉಪಲೋಕಾಯುಕ್ತ ನ್ಯಾಯಾಮೂರ್ತಿ ಬಿ.ವೀರಪ್ಪ ನವರ ನೇತೃತ್ವದಲ್ಲಿ ರಾತ್ರಿಯಿಂದ ಹಲವಾರು ಕಡೆ ಮಿಂಚಿನ ದಾಳಿ ನಡೆಸಿದ ಲೋಕಾಯುಕ್ತರ ತಂಡ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು ರಾತ್ರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯ ಮೂರ್ತಿಗಳ ತಂಡ ವಿಧ್ಯಾರ್ಥಿಗಳಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.ಸರ್ಕಾರ ನೀಡುವ ಸೌಲಭ್ಯಗಳಲ್ಲಿ ಯಾವುದೇ ಕೊರತೆಆಗದಂತೆ, ನೋಡಿಕೊಳ್ಳಿ,ಸಾರ್ವಜನಿಕರ ತೆರಿಗೆ ಹಣದಲ್ಲಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಣ ವಿನಿಯೋಗ ಮಾಡುತ್ತಿದೆ.ವಿದ್ಯಾರ್ಥಿಗಳು ವಿದ್ಯಾಭ್ಯಾಸದ ವೇಳೆ ಪ್ರೀತಿ ಪ್ರೇಮ ಅಂತ ಜೀವನ ಹಾಳುಮಾಡಿಕೊಳ್ಳ ಬೇಡಿ,

ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದೂ ಕೊಪ್ಪಳದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಘಟನೆ ಉಲ್ಲೇಕಿಸಿದ ಉಪಲೋಕಾಯುಕ್ತ ನ್ಯಾಯಮೂರ್ತಿಗಳು. ಈ ಘಟನೆ ತೀವ್ರ ಆಘಾತ ಉಂಟುಮಾಡಿದೆ. ತಂದೆತಾಯಿಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಜೀವನ ತ್ಯಾಗಮಾಡಿದ್ದಾರೆ. ಅದಿಹರೆಯದಲ್ಲಿ ಪ್ರೀತಿ ಹೆಸರಿನಲ್ಲಿ ಜೀವನ ಹಾಳುಮಾಡಿಕೊಳ್ಳ ಬೇಡಿ,ವಿದ್ಯಾರ್ಥಿ ಜೀವನ ಹಾಳುಮಾಡಿಕೊಳ್ಳ ಬೇಡಿ,ಎಂದ ಅವರು. ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ಹೋರಾಟ ಮಾಡಿ.ಯಾವ ಕಾರಣಕ್ಕು ಭ್ರಷ್ಟಚಾರ ಸಹಿಸಬೇಡಿ ಎಂದು ತಿಳಿಹೇಳಿದರು.ಹಾಸ್ಟೆಲ್ ಗಳಲ್ಲಿ ನಿರಂತರ ವೈದ್ಯಕೀಯ ತಪಾಸಣೆ ನಡೆಯದಿರುವ ಬಗ್ಗೆ ತಾಲ್ಲೋಕು ಸಾರ್ವಜನಿಕ ಆಸ್ಪತ್ರೆ ವೈಧ್ಯಾಧಿಕಾರಿ ಚನ್ನಕೇಶವ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಉಪಲೋಕಾಯುಕ್ತರು ನಿಮಗೆ ಮಕ್ಕಳು ಮರಿ ಇಲ್ವಾ, ಬಡಮಕ್ಕಳು ಓದುವ ವಿದ್ಯಾರ್ಥಿ ನಿಲಯಗಳು ನಿರಂತರ ವೈಧ್ಯಕೀಯ ತಪಾಸಣೆ ನಡೆದಿಲ್ಲ.ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ .ಸೋಪ್ ಕಿಟ್ ,ನೀಡಿಲ್ಲ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಬೆಳಂಬೆಳಗ್ಗೆ ಎಪಿಎಂಸಿ ಬೆಳಗಿನ ಮಾರುಕಟ್ಟೆ.ಕೆ.ಎಸ್.ಆರ್.ಟಿ ಸಿ ಬಸ್ ನಿಲ್ದಾಣ ಹಾಗೂ ಈಚನೂರು ಕೆರೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ.ಕೆ.ಎಸ್.ಆರ್.ಟಿ ಸಿ ಬಸ್ ನಿಲ್ದಾಣದಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡುವಂತೆ ತಿಳಿಸಿದರು.ನಗರದ ಕಲ್ಪತರು ಕಾಲೇಜು ಆಡಿಟೋರಿಯಂ ನಲ್ಲಿ ನಡೆದ ತಿಪಟೂರು ಉಪವಿಭಾಗ ಮಟ್ಟದ ಸಭೆಯಲ್ಲಿ ತಿಪಟೂರು.ಚಿಕ್ಕನಾಯ್ಕನಹಳ್ಳಿ,ತುರುವೇಕೆರೆ .ಭಾಗದಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.
ಉಪಲೋಕಾಯುಕ್ತರೊಂದಿಗೆ ಕಾರ್ಯದರ್ಶಿ ಅರವಿಂದ್ ,ಅಪರ ಜಿಲ್ಲಾಧಿಕಾರಿ ತಿಪ್ಪೆಸ್ವಾಮಿ.ತುಮಕೂರು ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಭು,ಲೋಕಾಯುಕ್ತ ಎಸ್.ಪಿ ಎ.ವಿ ಲಕ್ಷ್ಮಿಕಾಂತ್.ಡಿವೈಎಸ್ಪಿ ಮಂಜುನಾಥ್.ಇನ್ಪೆಕ್ಟರ್ ಸಲೀಂ.ಸುರೇಶ್.ರಾಜು.ಟಿ.ಹಾಗೂ ತಿಪಟೂರು ನ್ಯಾಯಾಲಯದ 5ನೇ ಜಿಲ್ಲಾಸತ್ರನ್ಯಾಯಾಧೀಶರಾದ ಹೇಮಂತ್ ಕುಮಾರ್ .ಟಿ.ಆರ್. ಪ್ರಧಾನ ಸಿಮಿಲ್ ನ್ಯಾಯಾಧೀಶರಾದ ಭರತ್ ಚಂದ್ರ ಕೆ.ಎಸ್ .ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶರಾದ ಮಧುಶ್ರೀ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ತಹಸೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್ .ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ.ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ







