ತಿಪಟೂರು:ನಗರದ ಹಾಸನ ಸರ್ಕಲ್ ಮಾದಿಹಳ್ಳಿ ತಿರುವಿನಲ್ಲಿ ರಾಶಿ ರಾಶಿ ಮಣ್ಣು ಹಾಗೂ ಮರಳು ರಸ್ತೆಯಲ್ಲಿ ಶೇಕರಣೆಗೊಂಡಿದ್ದು,ವಾಹನ ಸವಾರರಿಗೆ ರಸ್ತೆಯಲ್ಲಿ ಬಿದ್ದಿರುವ ಮಣ್ಣು, ಯಮಸ್ವರೂಪಿಯಾಗಿದೆ.
ತಿಪಟೂರು ನಗರದಿಂದ ವೇಗವಾಗಿ ಹೋಗುವ ದ್ವಿಚಕ್ರವಾಹನಗಳು ಮಣ್ಣಿನಲ್ಲಿ ಸ್ಕಿಡ್ ಆಗಿ ಬಿದ್ದು.ಅನೇಕ ಜನ ಪ್ರಾಣ ಕಳೆದುಕೊಳ್ಳುವ ಜೊತೆಗೆ, ಅನೇಕ ಜನ ಕೈ ಕಾಲು ಮುರಿದುಕೊಂಡು ಅಂಗವಿಕಲರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 206 ರ ಮಾದಿಹಳ್ಳಿ ತಿರುವ ಅತ್ಯಂತ ಅಪಾಯಕಾರಿ ಅಪಘಾತ ವಲಯವಾಗಿದ್ದು, ಪದೇ ಪದೇ ಅಪಘಾತಗಳು ಸಂಬವಿಸುತ್ತಿದರೂ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಅಥವಾ ನಗರಸಭೆ ಅಧಿಕಾರಿಗಳಾಗಲೀ ತಲೆ ಕೆಡಿಸಿಕೊಂಡಿಲ್ಲ,ನಗರದ ಬಿ.ಹೆಚ್ ರಸ್ತೆಯಲ್ಲಿ ಬಹುತೇಕ ಕಡೆ ಇದೇ ರೀತಿ ಮಣ್ಣು ರಸ್ತೆಯಲ್ಲಿ ಶೇಖರಣೆಯಾಗಿರುವ ಕಾರಣ ವಾಹನ ಸವಾರರು ತೊಂದರೆ ಅನುಭವಿಸ ಬೇಕಿದೆ.ಇನ್ನೂ ಲಾರಿ ಬಸ್ ಸೇರಿದಂತೆ ದೊಡ್ಡ ದೊಡ್ಡ ವಾಹನಗಳು ವೇಗವಾಗಿ ಚಲಿಸುವ ಕಾರಣ ರಸ್ತೆಯ ಧೂಳು ಮಣ್ಣು ಹಾರಿ ದ್ವಿಚಕ್ರವಾಹನ ಸವಾರರ ಕಣ್ಣಿಗೆ ಬಿಳುವ ಕಾರಣ ಅನಾರೋಗ್ಯದ ಸಮಸ್ಯೆಗೆ ಒಳಗಾಗುವ ಜೊತೆಗೆ ಅಪಘಾತಕ್ಕೆ ಒಳಗಾಗ ಬೇಕಾಗುತ್ತದೆ.ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕೂಡಲೇ ರಸ್ತೆಯಲ್ಲಿ ಶೇಖರಣೆ ಗೊಂಡಿರುವ ಮಣ್ಣು ತೆರವಿಗೆ ಕ್ರಮವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ







