Spread the love

ತಿಪಟೂರು:ಸಾರ್ವಜನಿಕ ಆಸ್ಪತ್ರೆ ತಿಪಟೂರು ತಾಲ್ಲೋಕು ಸೇರಿದಂತೆ ಸುತ್ತಮುತ್ತಲ ತಾಲ್ಲೋಕಿನ ಅತಿಹೆಚ್ಚು ರೋಗಿಗಳು ಬರುವ ಪ್ರಮುಖ ಆಸ್ಪತ್ರೆ ಆದರೆ ಆಸ್ಪತ್ರೆಯಲ್ಲಿ ಸೂಕ್ತ ಔಷಧಿಗಳಿಲ್ಲದೆ ರೋಗಿಗಳು ಪರದಾಡುವಂತ್ತಾಗಿದೆ

, ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿಗಳಿಲ್ಲದೆ ಪರದಾಡುತ್ತಿರುವುದು ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತ್ತಿದೆ. ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ನಾಯಿ ಕಡಿತಕ್ಕೆ ಒಳಗಾಗಿ ರೋಗಿಗಳು ಬಂದರೆ ನಾಯಿ ಕಡಿತಕ್ಕೆ ಔಷಧವಿಲ್ಲವೆಂದು ಹಾಸನ ಜಿಲ್ಲಾಆಸ್ಪತ್ರೆಗೆ ಕಳುಸಿರುವರು ಘಟನೆ ಸಾರ್ವಜನಿಕರು ಆಸ್ಪತ್ರೆ ಅವ್ಯವಸ್ಥೆಗೆ ಹಿಡಿಶಾಪಹಾಕುವಂತ್ತಾಗಿದೆ,ತಾಲ್ಲೋಕಿನ ಸಾರ್ಥವಳ್ಳಿ ಗ್ರಾಮದಲ್ಲಿ ಸುಮಾರು ಐದು ಜನರಿಗೆ ನಾಯಿಕಡಿತವಾಗಿದೆ, ಅದರಲ್ಲಿಯೂ ಲೋಕೇಶ್ ಎಂಬುವವರಿಗೆ ಹುಚ್ಚುನಾಯಿಕಡಿದಿದ್ದು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಲೋಕೇಶ್ ಹುಚ್ಚುನಾಯಿಕಡಿತದ ಇಂಜೆಕ್ಷನ್ ಇಲ್ಲದೆ, ಪರದಾಡುವಂತ್ತಾಯಿತು,ಆಸ್ಪತ್ರೆಯಲ್ಲಿ ರ್ಯಾಭಿಸ್ ಇಂಜೆಕ್ಷನ್ ಇಲ್ಲ,ಹಾಗೂ ಹಿಮಿನೋ ಬ್ಲಾಬಿಲಿನ್ ಇಂಜೆಕ್ಷನ್ ಸ್ಟಾಕ್ ಇಲ್ಲ,ನಿಮಗೆ ಇಂಜೆಕ್ಷನ್ ಬೇಕಂದ್ರೆ ಹಾಸನ ಜಿಲ್ಲಾಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದಾರೆ, ವೈದ್ಯರು ಇಂಜೆಕ್ಷನ್ ಸ್ಟಾಕ್ ಇಲ್ಲ ಎಂದು ಹೇಳಿದರಿಂದ ಆಕ್ರೋಶಗೊಂಡ ಸಾರ್ವಜನಿಕರು,ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ನಾಯಿಕಡಿತಕ್ಕೆ ಔಷಧಿ ಇಲ್ಲ ಅಂದ್ರೆ, ಬಡವರು ನಿರ್ಗತಿಕರ ಪಾಡೇನು,ಎಂದು ಆಕ್ರೋಶ ವ್ಯಕ್ತಪಡಿಸಿದರು,ಒಂದೆಡೆ ಆಂಬುಲೇನ್ಸ್ ಸಮಸ್ಯೆಯಾದರೆ,ಸ್ವಂತವಾಹನವಿಲ್ಲದಿದ್ದರೆ, ರೋಗಿಗಳು ಅಪಾಯಕ್ಕೆ ತುತ್ತಾಗ ಬೇಕಾಗುತ್ತಿದೆ, ಆರ್ಥಿಕವಾಗಿ ಸಧೃಡರಾಗಿರುವವರು ಖಾಸಗೀ ಆಸ್ಪತ್ರೆಯಲ್ಲಿ ಮೊರೆಹೋದರೆ ಸಾರ್ವಜನಿಕ ಆಸ್ಪತ್ರೆಯನ್ನೇ ನಂಬಿರುವ ಬಡವರು ಗೋಳನ್ನ ಕೇಳೋರೆಇಲ್ಲ ಎನ್ನುವಂತ್ತಾಗಿದೆ, ಸರ್ಕಾರ ಹಾಗೂ ತಾಲ್ಲೋಕು ಆಡಳಿತ ತುರ್ತಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ನಾಯಿಕಡಿತದ ಔಷಧಿ ಸೇರಿದಂತೆ ಅಗತ್ಯವಿರುವ ಔಷಧಿಗಳನ್ನ ಸರಬರಾಜು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!