Spread the love

:ನವಜಾತ ಶಿಶುವನ್ನ ಆಸ್ಪತ್ರೆಗೆ ತಂದು ಬಿಟ್ಟು ಹೋಗಿರುವ ಘಟನೆ ತಿಪಟೂರು ನಗರದ ಪ್ರಸಿದ್ದ ಆಸ್ಪತ್ರೆ ಕುಮಾರ್ ಆಸ್ಪತ್ರೆಯಲ್ಲಿ ನಡೆದಿದೆ.
ನವಜಾತ ಹೆಣ್ಣು ಶಿಶು ಜನನವಾಗಿ ಸುಮಾರು 6ರಿಂದ 7ದಿನವಾಗಿರ ಬಹುದು ಎನ್ನಲಾಗಿದ್ದು, ಆಸ್ಪತ್ರೆಗೆ ಕರೆತಂದು ಆಸ್ಪತ್ರೆ ಸ್ವಾಗತ ಟೇಬಲ್ ಪಕ್ಕದಲ್ಲಿ ಬಿಟ್ಟು ಹೋಗಿದ್ದಾರೆ.


ತಾಯಿಗೆ ಪ್ರಪಂಚದಲ್ಲಿ ಅತ್ಯಂತ ಪ್ರೀತಿ ಪಾತ್ರವಾದ ವಸ್ತುವೆಂದರೆ ತನ್ನ ಮಗು ಮಾತ್ರ,ತಾನು ಜನ್ಮ ನೀಡಿದ ಮಗುವಿಗೆ ಹಾಲುಣಿಸಿ ಪಾಲನೆ ಪೋಷಣೆ ಮಾಡುವುದು ತಾಯಿಯ ಜವಾಬ್ದಾರಿ,ತನ್ನ ಮಗು ಹೇಗೆ ಇರಲಿ,ಆ ಮಗುವನ್ನ ಪ್ರೀತಿಯಿಂದ ಹಾಕುತ್ತಾಳೆ.ಹಾರೈಕೆ ಮಾಡುತ್ತಾಳೆ,ತಾಯಿಯ ಪ್ರೀತಿ ವಾತ್ಸಲ್ಯಕ್ಕೆ ವ್ಯತಿರಿಕ್ತವಾದ ಮನಕಲಕುವ ಘಟನೆ ತಿಪಟೂರು ನಗರದಲ್ಲಿ ನಡೆದಿದೆ.ರೋಗಿಗಳ ಸೋಗಿನಲ್ಲಿ ನವಜಾತ ಶಿಶುವನ್ನ ಆಸ್ಪತ್ರೆಗೆ ಕರೆತಂದವಳು.ಮಗುವನ್ನ ಆಸ್ಪತ್ರೆ ಸ್ವಾಗತ ಟೇಬಲ್ ಪಕ್ಕದಲ್ಲಿಯೇ ಮಲಗಿಸಿ ಅಲ್ಲೇ ಬಿಟ್ಟು ಹೋಗಿದ್ದಾರೆ,

ಟೇಬಲ್ ಮೇಲೆ ಮಗುಇರುವುದನ್ನ ಗಮನಿಸಿದ ಆಸ್ಪತ್ರೆ,ಸಿಬ್ಬಂದಿ ತಕ್ಷಣ ಕುಮಾರ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ//ಶ್ರೀಧರ್ ಗಮನಕ್ಕೆ ತಂದಿದ್ದು.ತಕ್ಷಣ ಮಗುವನ್ನ ಪರೀಕ್ಷೆ ಮಾಡಿದ,ವೈದ್ಯರು,ವಿಷಯವನ್ನ ತಿಪಟೂರು ನಗರಪೊಲೀಸ್ ಠಾಣೆ ಹಾಗೂ ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ತಿಪಟೂರು ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್.ಸಬ್ ಇನ್ಪೆಕ್ಟರ್ ಕೃಷ್ಣಪ್ಪ.ಹಾಗೂ ಮಹಿಳಾ ಮತ್ತು ಶಿಶು ಅಭಿವೃದ್ದಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮಗುವಿನ ಶೃಶ್ರೃಷೆ ನೀಡಿದ ಡಾ//ಶ್ರೀಧರ್ ಅಧಿಕಾರಿಗಳ ಸಮಕ್ಷಮದಲ್ಲಿ ಮಕ್ಕಳ ರಕ್ಷಣ ಘಟಕಕ್ಕೆ. ಒಪ್ಪಿಸಿದ್ದಾರೆ.
ಈ ಘಟನೆ ನಗರದಲ್ಲಿ ತಲ್ಲಣ ಉಂಟುಮಾಡಿದ್ದು,ತಾಯಿಯ ಕಿರಾತಕ ಕೃತ್ಯಕಂಡ ಜನ ಮುಮ್ಮಲ ಮರುಗಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!