Spread the love

ತಿಪಟೂರು: ತಾಲ್ಲೂಕಿನ ರಂಗಾಪುರ ಹಾಗೂ ಅನುಗೊಂಡನಹಳ್ಳಿ ಗ್ರಾಮಗಳ ದೊಡ್ಡಕಟ್ಟೆ ಹಾಗೂ ಕಾಳನಕಟ್ಟೆ ಕೆರೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2024ರಲ್ಲಿ ರೂ 16.85 ಲಕ್ಷ ಮೊತ್ತವನ್ನು ವಿನಿಯೋಗಿಸಿ ಪುನಶ್ಚೇತನಗೊಳಿಸಲಾಗಿತ್ತು.

ತಾಲ್ಲೋಕಿನ ರಂಗಾಪುರ ದೊಡ್ಡಕಟ್ಟೆ ಹಾಗೂ ಆನುಗೊಂಡನಹಳ್ಳಿ ಕಾಳನಕಟ್ಟೆ ಕೆರೆಗಳ ಹಸ್ತಾಂತರ ಪ್ರಮಾಣ ಪತ್ರವನ್ನು ರಂಗಾಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶಂಕರ್ ಬೀಳೂರು ರವರಿಗೆ ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್.ಕೆ ರವರ ನೇತೃತ್ವದಲ್ಲಿ ವಿತರಿಸಲಾಯಿತು.ಈ ಸಂದರ್ಭ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಪ್ರಮೋದ್,ವಲಯ ಮೇಲ್ವಿಚಾರಕ ದಿನೇಶ್,ಸಿ.ಎಸ್.ಸಿ ಸೇವಾದರರಾದ ಶ್ರೀಮತಿ ಆಶಾರವರು ಉಪಸ್ಥಿತರಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!