ತಿಪಟೂರು: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳಾದ ಡಾ//ವಿರೇಂದ್ರ ಹೆಗ್ಡೆ ಯವರ ವಿರುದ್ದ ನಡೆಯುತ್ತಿರುವ ಷಡ್ಯಂತ್ರ ಹಾಗೂ ಅಪಪ್ರಚಾರದ ವಿರುದ್ದ ತಿಪಟೂರಿನಲ್ಲಿ ಬಿಜೆಪಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಅಭಿಮಾನಿಗಳು ಪ್ರತಿಭಟನೆ ನಡೆದೆಸಿ ಧರ್ಮವಿರೋಧಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದಿಂದ ಹೊರಟ ಪ್ರತಿಭಟನಾಕಾರರು ಕೋಡಿಸರ್ಕಲ್ ,ದೊಡ್ಡಪೇಟೆ ,ಬಿ.ಹೆಚ್ ರಸ್ತೆ ಮೂಲಕ ಸಾಗಿ ನಗರಸಭಾ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ರಾಜ್ಯದಲ್ಲಿ ಜಾತ್ಯತೀತವಾಗಿ ಎಲ್ಲಾ ಧರ್ಮೀಯರಿಗೂ ಉಚಿತ ಅನ್ನದಾನ ಮಾಡುತ್ತಿದ್ದಾರೆ ,ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುವ ಜೊತೆಗೆ ಗ್ರಾಮೀಣ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ,ಗ್ರಾಮೀಣ ಭಾಗದಲ್ಲಿ ಗ್ರಾಮೋದ್ಯೋಗ ಸಂಸ್ಥೆಯಿಂದ ಎಲ್ಲಾ ಧರ್ಮದ ಮಹಿಳೆಯರ ಸಬಲೀಕರಣ, ದೇವಸ್ಥಾನಗಳ ಜೀರ್ಣೋದ್ಧಾರ ನಡೆಸುತ್ತಿರುವ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ಮಾಡುವುದನ್ನು ರಾಜ್ಯದ ಅಸಂಖ್ಯಾತ ಹಿಂದುಗಳು ಸಹಿಸುವುದಿಲ್ಲ, ನಿರಂತರವಾಗಿ ಷಡ್ಯಂತ್ರ ಮಾಡಿ ಅಪಪ್ರಚಾರ ಮಾಡುವ ಮೂಲಕ ಶ್ರೀಕ್ಷೇತ್ರದ ಬಗ್ಗೆ ಅಪನಂಬಿಕೆ ಬರುವಂತೆ ಮಾಡುಲು ಹಲವಾರು ಕಾಣದ ಕೈಗಳು ಕೆಲಸ ಮಾಡುತ್ತಿದ್ದು,ಈಗಾಗಲೇ ಸತ್ಯ ಬಯಲಾಗುತ್ತಿದೆ,ಜನರಿಗೆ ಸತ್ಯತಿಳಿಯುವ ಕಾಲಸನ್ನಿಹಿತವಾಗಿದ್ದು ಸರ್ಕಾರ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನ ಪತ್ತೆಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ದಿಶಾಸಮಿತಿ ಸದಸ್ಯ ಆಯರಹಳ್ಳಿ ಶಂಕರಪ್ಪ ರಾಜ್ಯ ಬಿಜೆಪಿ ಆದೇಶದಂತೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಬಿಜೆಪಿ ಮತ್ತು ಧರ್ಮಸ್ಥಳ ಅಭಿಮಾನಿಗಳ ಹೋರಾಟ ಧರ್ಮವಿರೋಧಿಗಳ ವಿರುದ್ದ ನಿರಂತರವಾಗಿರುತ್ತದೆ, ರಾಜ್ಯದ ಸಾವಿರಾರು ಕೆರೆಗಳು ದೇವಸ್ಥಾನ ಮತ್ತು ಗ್ರಾಮೋದ್ಯೋಗ ಸಂಸ್ಥೆಗಳಿಂದ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಕಾರ್ಯಕ್ರಮಗಳು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ನಡೆಯುತ್ತಿವೆ. ಹೋರಾಟದಲ್ಲಿ ನೂರಾರು ಮಹಿಳೆಯರು ಧರ್ಮದ ಉಳಿವಿಗೆ ಹೋರಾಟ ನಡೆಸುತ್ತಿರುವುದು ಧರ್ಮ ಆತ್ಮಭಿಮಾನದ ಸಂಕೇತವಾಗಿದೆ ಹಿಂದೂ ಧರ್ಮದ ವಿರುದ್ಧದ ಷಡ್ಯಂತ್ರಕ್ಕೆ ಹಿಂದುಗಳು ಸಹಿಸುವುದಿಲ್ಲ ಮುಂದೆಯೂ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಗಂಗರಾಜು ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಹುಲ್ ಗಾಂಧಿ ಹೇಳಿದಂತೆ ಕೇಳುವ ಸರ್ಕಾರವಾಗಿದೆ ಯಾವುದೋ ಬುರುಡೆ ವಿಚಾರಕ್ಕೆ ಅನಾಮಿಕ ವ್ಯಕ್ತಿಯ ಮಾತು ಕೇಳಿ ಎಸ್ಐಟಿ ರಚನೆ ಮಾಡಿದ ಸರ್ಕಾರ ಸಾಮಾನ್ಯ ಮನುಷ್ಯನ ನ್ಯಾಯಕ್ಕಾಗಿ ಎಸ್ಐಟಿ ರಚನೆ ಮಾಡುತ್ತೀರಾ ಎಂದು ಪ್ರಶ್ನೆಸಿದರು.ಬುರುಡೇ ಪುರಣ ಹಾಗೂ ಅನಾಮಿಕ ವ್ಯಕ್ತಿಯ ವಿರುದ್ದ ಕಠಿಣ ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

ಹರಿಸಮುದ್ರ ಗಂಗಾಧರ್ ಮಾತನಾಡಿ ಧರ್ಮಸ್ಥಳ ಸರ್ಕಾರದ ಸಮನಾಗಿ ಕೆಲಸ ಮಾಡಿ ಸರ್ಕಾರಕ್ಕೆ ಮಾರ್ಗದರ್ಶನವಾಗಿದೆ ಜನರ ಕಾಣಿಕೆ ಹಣದಿಂದ ದೇವಸ್ಥಾನ ಗಳು, ಹಲವಾರು ಸಮಾಜ ಮುಖಿಕಾರ್ಯಗಳನ್ನ ಮಾಡುತ್ತಾ ನಾಡಿನ ಅಭಿವೃದ್ದಿಗೆ ಸಹಕಾರ ನೀಡುತ್ತಿದ್ದಾರೆ ಶ್ರೀ ಕ್ಷೇತ್ರದ ಧರ್ಮಕಾರ್ಯ ಸಹಿಸದ ಧರ್ಮವಿರೋಧಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಧರ್ಮಸ್ಥಳ ಅಭಿಮಾನಿಗಳು ಸೇರಿದಂತೆ ಮಾಜಿ ನಗರ ಸಭಾ ಮಾಜಿಸದಸ್ಯ ಪ್ರಸನ್ನ ಕುಮಾರ್, ತರಕಾರಿ ಗಂಗಾಧರ್ ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಬಿಸಿಲೇಹಳ್ಳಿ ಜಗದೀಶ್, ನಗರ ಅಧ್ಯಕ್ಷ ಜಗದೀಶ್ ಗ್ರಾಮಾಂತರ ಅಧ್ಯಕ್ಷ,ಸತೀಶ್.ಶಶಿಕಿರಣ್.ಪದ್ಮತಿಮ್ಮೆಗೌಡ. ಜಯಲಕ್ಷ್ಮಿ,ಮುಂತಾದವರು ಪಾಲ್ಗೊಂಡಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ








