Spread the love

ತಿಪಟೂರು:ನಗರದ ಶ್ರೀ ಗುರುಕುಲಾನಂದಾಶ್ರಮದ ಕಲ್ಯಾಣ ಮಂಟಪದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ.ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಂಗವಾಗಿ ತಾಲ್ಲೋಕು ಮಟ್ಟದ ವಿಚಾರ ಘೋಷ್ಠಿ ನಡೆಸಲಾಯಿತು.ತಿಪಟೂರು
ಶ್ರೀ ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವ ದೇಶೀ ಕೇಂದ್ರ ಮಹಾಸ್ವಾಮಿಜಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಮಹಿಳೆಯರೂ ತಮ್ಮನ್ನು ತಾವು ತೊಡಗಿಸಿಕೊಂಡಿರುಹುದು ತುಂಬಾ ಸಂತೋಷ .ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹೇಮಾವತಿ ವಿ ಹೆಗ್ಗಡೆಯವರ ಸಮಾಜಮುಖಿ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಎಂ ಮಾತನಾಡಿ ಸಂಸ್ಥೆಯ ಕಾರ್ಯಕ್ರಮಗಳು ಮಾತೃಶ್ರೀಯವರ ಚಿಂತನೆಯಲ್ಲಿ ಮೂಡಿಬಂದಿರುವ ಜ್ಞಾನ ವಿಕಾಸ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳ ಬೇಕು, ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಸದಸ್ಯರಿಗೆ ಪ್ರೇರಣೆಯನ್ನು ನೀಡಿ ಕಾರ್ಯಕ್ರಮದಲ್ಲಿ ಸದಸ್ಯರ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಡಾಕ್ಟರ್ ಯಮುನಾ ಬಿ .ಎನ್. ಸಮುದಾಯ ವೈದ್ಯಕೀಯ ತಜ್ಞರು ಅನಿಕೇತನ ಟ್ರಸ್ಟ್ ತುಮಕೂರು ,ಇವರು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಕ್ಯಾನ್ಸರ್ ರೋಗ ಲಕ್ಷಣಗಳು ಹಾಗೂ ಈ ಬಗ್ಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡಿದರು.ತುಮಕೂರು 1 ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಜ್ಞಾನ ವಿಕಾಸ ಕಾರ್ಯಕ್ರಮ ಪ್ರಾರಂಭದ ಕುರಿತು ಕೌಟುಂಬಿಕ ಸಾಮರಸ್ಯ ಶಿಕ್ಷಣ, ಆರೋಗ್ಯ, ಸ್ವ ಉದ್ಯೋಗ ,ಸರ್ಕಾರದ ಯೋಜನೆ ಕಾನೂನು ಬಗ್ಗೆ ಪ್ರತೀ ತಿಂಗಳು ವಿಶೇಷ ಮಾಹಿತಿ ಕೇಂದ್ರದಲ್ಲಿ ನೀಡುತ್ತಿದ್ದು ತಾವೆಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು

.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಮೇಘಶ್ರೀ ಸುಜಿತ್ ಭೂಷಣ್ ಈ ದಿನ ಕಾರ್ಯಕ್ರಮದ ಶಿಸ್ತಿನ ಬಗ್ಗೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆ ಇಂದ ಆಗುತ್ತಿರುವ ಅನೇಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂಸ್ಥೆ ಇಂದ ಎಷ್ಟೋ ಕುಟುಂಬಗಳು ಅಬಿವೃದ್ಧಿ ಆಗಿದೆ ತಾವೆಲ್ಲರೂ ಸದುಪಯೋಗ ಪಡೆದು ಸಧೃಡ ಗೃಹಿಣಿಯರು ಆಗಬೇಕೆಂದು ತಿಳಿಸಿದರು. ಸ್ವಾಗತವನ್ನು ತಿಪಟೂರು ಗ್ರಾಮಾಂತರ ತಾಲೂಕಿನಲ್ಲಿ ಯೋಜನಾಧಿಕಾರಿಗಳಾದ ಸುರೇಶ್. ಕೆ ಅವರು ನೆರವೇರಿಸಿ ಕೊಟ್ಟರು.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀ ಮತಿ ರೇಖಾ. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳು ಮತ್ತು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಮತ್ತು ಜಿಲ್ಲಾ ಸಮನ್ವಯ ಅಧಿಕಾರಿ.ಮೇಲ್ವಿಚಾರಕ ಶ್ರೇಣಿಯ ಎಲ್ಲಾ ಸಿಬ್ಬಂದಿಗಳು .ಕಚೇರಿಯ ಸಿಬ್ಬಂದಿಗಳು ಸೇವಾ ಪ್ರತಿನಿಧಿಗಳು ಜ್ಞಾನ ವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!