ತಿಪಟೂರು:ವೀರಶೈವ ಲಿಂಗಾಯಿತ ಸಂಘ ಹಾಗೂ ವೀರಶೈವಲಿಂಗಾಯಿತ ಯುವವೇದಿಕೆಯಿಂದ ಆಯೋಜಿಸಿದರುವ ವಿಶ್ವಗುರು ಬಸವಣ್ಣ ನವರ ಜಯಂತಿ ಅಂಗವಾಗಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು..

ತಿಪಟೂರು ಶ್ರೀಕಲ್ಲೇಶ್ವರಸ್ವಾಮಿ ದೇವಾಲಯದಿಂದ ಹೊರಟ ಮೆರವಣಿಗೆ ಕೋಡಿ ಸರ್ಕಲ್ ಬಿ.ಹೆಚ್ ರಸ್ತೆ ಮೂಲಕ ಸಾಗಿ ನಗರಸಭಾ ವೃತ್ತದಲ್ಲಿ ಸುಮಾರು 30ಅಡಿ ಎತ್ತರದ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆಸಲ್ಲಿಸಲಾಯಿತು.ದಾರಿಯುದ್ದಕ್ಕು ಲಿಂಗದವೀರರ ಕುಣಿತ,ವೀರಗಾಸೆ,ನಂದಿಧ್ವಜ,ನಗಾರಿ,ನಾಸೀಕ್ ಡೋಲ್,ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆ ಮೆರುಗು ಹೆಚ್ಚಿಸಿದವು. ಸಾವಿರಾರು ಜನ ಬಸವ ಬಳಗದ ಕಾರ್ಯಕರ್ತರು ಬಸವೇಶ್ವರರ ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ




