12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ರಾಷ್ಟ್ರ ವ್ಯಾಪಿ ಪ್ರಚಾರ ಮಾಡಬೇಕಾಗಿದೆ ಎಂದು ರಂಗಾಪುರ ಮಠದ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಗುರುಪರದೇಶಿ ಕೇಂದ್ರ ಸ್ವಾಮೀಜಿ ಅವರು ಕರೆ ನೀಡಿದರು. ತಾಲ್ಲೋಕಿನ ರಂಗಾಪುರ ಮಠದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಜಾಗೃತಿ ಜಾಥ ರಥಕ್ಕೆ ಚಾಲನೆ ನೀಡಿ ಮಾತನಾಡಿದ.ಶ್ರೀಗಳು ಬಸವಣ್ಣನವರು ಎಲ್ಲ ಜಾತಿಯ ಜನರಿಗೂ ಲಿಂಗದೀಕ್ಷೆ ನೀಡಿ ಲಿಂಗಾಯತ ಧರ್ಮ ಸ್ಥಾಪಿಸಿದರು. ನಾವೀಗ ಹಿಂದೂ ಧರ್ಮ ಎಂದು ಹೇಳದೆ, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಎಂದು ಹೇಳಬೇಕು ಹಾಗೂ ಯುವಕರು ಈ ಕುರಿತು ಪ್ರಚಾರ ಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು.

ಕರ್ನಾಟಕದ ಸಾಂಸ್ಕೃತಿಕ ಹಾಗೂ ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ ಆಶಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೈಗೊಂಡಿರುವ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಲು ನಾವೆಲ್ಲ ಪಾಲ್ಗೊಳ್ಳಬೇಕು ಎಂದು ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷರಾದ ಸಿ.ಬಿ.ಶಶಿಧರ್ ಟೂಡಾ ಕರೆ ನೀಡಿದರು.
ನೊಳಂಬ ಲಿಂಗಾಯತ ಸಂಘದ ನಿರ್ದೇಶಕರಾದ ಎಂ. ದಯಾನಂದಸ್ವಾಮಿ ಮಾತನಾಡಿ ಸಾಂಸ್ಕೃತಿಕ ನಾಯಕ ಬಸವಣ್ಣನ ಆದರ್ಶಗಳನ್ನು ಸಮಾಜ ಮುಖಂಡರು ಹಾಗೂ ಯುವಕರು ಅಧ್ಯಯನ ಮಾಡಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ನೊಳಂಬ ಲಿಂಗಾಯತ ಸಂಘದ ನಿರ್ದೇಶಕರಾದ ಎಂ.ಆರ್. ಸಂಗಮೇಶ್, ಶ್ರೀಕಾಂತ್ ಕೆಳಹಟ್ಟಿ, ಹೊಗವನಘಟ್ಟ ಯೋಗಾನಂದ್, ಮಡೇನೂರು ಕಾಂತರಾಜು, ಮಾದೀಹಳ್ಳಿ ರೇಣು, ಲಿಂಗದಹಳ್ಳಿ ವೇದಮೂರ್ತಿ ದಿಬ್ಬದಹಳ್ಳಿ ಶಾಮಸುಂದರ್, ಕುಮಾರಸ್ವಾಮಿ, ಶರತ್ ಹಾಗೂ ಬಸವ ಭಕ್ತರು ಉಪಸ್ಥಿತರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ







