ತಿಪಟೂರು:ಸರ್ಕಾರ ನಿವೇಷನ ರಹಿತಿಗೆ ನಿವೇಷನ ನೀಡಿ,ಮನೆ ನಿರ್ಮಾಣ ಮಾಡಬೇಕು, ಹಲವಾರು ದಶಕಗಳಿಂದ ನಿವೇಷನ ಹಂಚಿಕೆ ಮಾಡದೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿಯಲ್ಲಿವೆ, ಕೆಲವರಂತು ಬಾಡಿಗೆ ಮನೆ ಹಾಗೂ ಜೋಪಡಿಯಲ್ಲಿಯೇ ಜೀವನ ನಡೆಸುವಂತ್ತಾಗಿದೆ ಸರ್ಕಾರ ಕೂಡಲೇ ಅರ್ಹ ಫಲಾನುಭವಿಗಳಿಗೆ ನಿವೇಷನ ನೀಡಿ,ಮನೆ ನಿರ್ಮಿಸಿ ಕೊಡಬೇಕು,ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೋಕು ಸಂಚಾಲಕ ಜಕ್ಕನಹಳ್ಳಿ ಮೋಹನ್ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರಲ್ಲಿ ನಿವೇಷನ ಹಾಗೂ ವಸತಿ ರಹಿತರ ಸಭೆ ನಡೆಸಿ ಮಾತನಾಡಿದ ಅವರು ಸರ್ಕಾರ ಕೂಡಲೇ ನಿವೇಷನ ನೀಡಿ ವಸತಿ ಸೌಕಾರ್ಯ ಒದಗಿಸಬೇಕು ಪ್ರತಿಯೊಂದು ಜೀವರಾಶಿಯೂ ತನ್ನದೇ ಆದ ಗೂಡು ಹೊಂದಬೇಕು ಎನ್ನುವುದು ಪ್ರಕೃತಿ ನಿಯಮ ಆದರೆ ಹಕ್ಕಿಪಕ್ಷಿಗಳು ಸಹ ಗೂಡುಕಟ್ಟಿಕೊಂಡು ಜೀವನ ನಡೆಸುತ್ತಿವೇ ಆದರೆ ಮನುಷ್ಯ ವಾಸಮಾಡಲು ಯೋಗ್ಯವಾದ ಮನೆಇಲ್ಲದೆ ಪರದಾಡುತ್ತಿರುವುದು ವಿಪರ್ಯಾಸವಾಗಿದೆ, ಆಡಳಿತ ನಡೆಸುವ ಸರ್ಕಾರಗಳಿಗೆ ಮನುಷ್ಯಗಳ ಮೂಲಸೌಕರ್ಯ ನೀಡಬೇಕಾಗಿರುವುದು ಜನಪ್ರತಿನಿಧಿಗಳ,ಧರ್ಮ, ತಾಲ್ಲೋಕು ಆಡಳಿತ ನಿವೇಷನ ರಹಿತರಿಗೆ ನಿವೇಷನ ನೀಡಿ ವಸತಿ ನಿರ್ಮಿಸಿಕೊಡಬೇಕು,ಸರ್ಕಾರ ನಿವೇಷನ ರಹಿತರಿಗೆ ನೀವೇಷನ ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದು ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ದಲಿತ ಮುಖಂಡ ತಾಲ್ಲೋಕು ಕೊರಚ ಮಹಾಸಭೆ ಅಧ್ಯಕ್ಷ ಸತೀಶ್ ಮಾರನಗೆರೆ ಮಾತನಾಡಿ ಸರ್ಕಾರ ನಿವೇಷನ ರಹಿತರಿಗೆ ನಿವೇಷನ ನೀಡದೆ ಬಡವರು ನಿರ್ಗತಿಕರನ್ನ ತೀವ್ರತೊಂದರೆಗೆ ಸಿಲುಕಿಸಿದೆ, ಚುನಾವಣೆಯ ವೇಳೆಯಲ್ಲಿ ಸುಳ್ಳು ಭರವಸೆ ನೀಡುವ ಸರ್ಕಾರಗಳು,ಚುನಾವಣೆಯ ನಂತರ ಕೊಟ್ಟಮಾತು ಮರೆಯುತ್ತವೆ,ಕೇವಲ ಅಲೊಂದು ಇಲ್ಲೊಂದು ನಿವೇಷನ ನೀಡಿ ಬಡವರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿವೆ,ಜಿಲ್ಲಾಡಳಿತ ಕೂಡಲೇ ಎಲ್ಲಾನಿವೇಷನ ರಹಿತರಿಗೆ ನಿವೇಷನ ನೀಡಬೇಕು,ಹಾಲಿ ಸರ್ಕಾರ ವಿವಿಧ ವಸತಿ ಯೋಜನೆಗಳಲ್ಲಿ ಒಂದು ಲಕ್ಷದ ಎಪ್ಪತ್ತು ಸಾವಿರದಿಂದ 2 ಲಕ್ಷ ಸಹಾಯಧನ ನೀಡುತ್ತಿದೆ,ಸಿಮೆಂಟ್ ಮರಳು ಸೇರಿದಂತೆ ನಿರ್ಮಾಣ ವಸ್ತುಗಳ ಬೆಲೆ ಏರಿಕೆಯಿಂದ ಕನಿಷ್ಟ ಷೆಡ್ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ,ಸರ್ಕಾರ ಕೂಡಲೇ ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಸಹಾಯಧನ 5ಲಕ್ಷ ಹಾಗೂ ನಗರಪ್ರದೇಶಲ್ಲಿ 10ಲಕ್ಷ ಸಹಾಯಧನ ನೀಡಬೇಕು ಆಗಮಾತ್ರ ಕನಿಷ್ಟ ವಾಸಯೋಗ್ಯವಾದ ಮನೆ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ,ಜಿಲ್ಲಾ ಸಂಘಟನಾ ಸಂಚಾಲಕರಾದ ಮತ್ತಿಹಳ್ಳಿ ಹರೀಶ್ ಗೌಡ, ತಾಲ್ಲೂಕು ಸಂಚಾಲಕರಾದ ಮೋಹನ್ ಜಕ್ಕನಹಳ್ಳಿ,ಡಿಎಸ್ಎಸ್ ಮುಖಂಡರಾದ ಸತೀಶ್ ಮಾರನಗೆರೆ, ಮುಖಂಡರಾದ ಕೀರ್ತಿ ಹತ್ಯಾಳ್ . ಜಗದೀಶ್ ಗಿಣಿಕಿಕೆರೆ ,ಪ್ರಭುಸ್ವಾಮಿ ಗಿಣಿಕಿಕೆರೆ. ಕೃಷ್ಣಮೂರ್ತಿ ಗಿಣಿಕಿಕೆರೆ. ಕುಮಾರ್ ಬೈರಾಪುರ. ಸಂಜಯ್ ಗಿಣಿಕಿಕೆರೆ. ಸತೀಶ್ ಪೆದ್ದಿಹಳ್ಳಿ. ತಿಪಟೂರು ನೆಹರು ನಗರ ರಘು.ಮಹಿಳಾ ನಗರ ಸಂಚಾಲಕರಾದ
ಭವ್ಯ. ಮಹಿಳಾ ತಾಲೂಕು ಸಂಘಟನಾ ಸಂಚಾಲಕರಾದ ಅಶ್ವಿನಿ. ಹೇಮಾ ಮುಂತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ




