ತಿಪಟೂರು:ತಾಲ್ಲೋಕಿನ ಕಲ್ಲಳ್ಳಿ ಗ್ರಾಮದಲ್ಲಿ ಮನುಷ್ಯರ ಮೇಲೆರಗಿ ಕಚ್ಚಿ ನಾಗರೀಕರಲ್ಲಿ ಆತಂಕ ಮೂಡಿಸಿದ ಬೀದಿ ನಾಯಿಗಳನ್ನ ಕೊಂದ ಕುರಿಗಾಯಿ ರೈತನ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. ತಿಪಟೂರು ತಾಲ್ಲೋಕಿನ ಕಲ್ಲಳ್ಳಿ ಗ್ರಾಮದಲ್ಲಿ ಕಳೆದ ಕೆಲದಿನಗಳಿಂದ ಬೀದಿನಾಯಿಗಳ ಹಿಂಡು ಗ್ರಾಮದಲ್ಲಿ ಜನರ ಮೇಲೆರಗಿ ಕಚ್ಚಿಗಾಯಗೊಳಿಸಿದ್ದವು, ಬೀದಿಯಲ್ಲಿ ಆಟವಾಡುತ್ತಿದ್ದ ದೊರೆಸ್ವಾಮಿ ಮಗುವನ್ನ ಕಚ್ಚಿದವು.ಮೊನ್ನೆ ನಾಗರಾಜು ಎಂಬುವವರ ಕುರಿ ಗೂಡಿಗೆ ನುಗ್ಗಿದ ನಾಯಿಗಳ ಹಿಂಡು ಸುಮಾರು 10ಕುರಿಗಳನ್ನ ಕಚ್ಚಿಗಾಯಗೊಳಿಸಿದವು,ನಾಯಿ ದಾಳಿಯಿಂದ ರೋಸಿಹೊಂದ ಗ್ರಾಮಸ್ಥರು ತಡಸೂರು ಗ್ರಾಮಪಂಚಾಯ್ತಿ ಹಾಗೂ ತಾಲ್ಲೋಕು ಆಡಳಿತದ ಗಮನಕ್ಕೆ ತಂದಿದರೂ, ಮೊನ್ನೆ ಹಾಡುಹಗಲೇ ತಾಲ್ಲೋಕಿನ ಅಯ್ಯನಬಾವಿ ಗ್ರಾಮದಲ್ಲಿ ಬೀದಿಯಲ್ಲಿ ಆಟವಾಡುತ್ತಿದ್ದ ಮಗುವನ್ನ ಕಚ್ಚಿಕೊಂದುಹಾಕಿರುವ ಭಿಂಬತ್ಸ ಘಟನೆ. ಕಲ್ಲಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಭೀತಿ ಹೆಚ್ಚಿಸಿತು.ಗ್ರಾಮದ ಜನರು ಆತಂಕದಲ್ಲಿ ಇರುವಾಗಲೇ ಮೂರುದಿನಗಳ ಹಿಂದೆ ಮೇಯಿಸಲು ಬಿಟ್ಟಿದ ಕುರಿಹಿಂಡಿಗೆ ದಾಳಿನಡೆಸಿದ ಬೀದಿ ನಾಯಿಗಳು ನಾಲ್ಕು ಕುರಿಗಳನ್ನ ಸಾಯಿಸಿವೆ.ಕುರಿಸಾವಿನಿಂದ ಕುಪಿತರಾದ ಕಲ್ಲಳ್ಳಿ ಗ್ರಾಮದ ನಾಗರಾಜು.ಉಮೇಶಯ್ಯ ಎಂಬುವವರು ನಾಯಿಯನ್ನ ಸಾಯಿಸಲು ಹೋಗಿದ್ದಾರೆ ಆದರೇ ಬೀದಿನಾಯಿಗಳು ಇವರ ಮೇಲೆಯೇ ಎರಗಲು ಬಂದಾಗ ತಮ್ಮ ಸಂಬಂದಿ ಚನ್ನರಾಯಪಟ್ಟಣ ತಾಲ್ಲೋಕು ಆದಿಹಳ್ಳಿ ಗ್ರಾಮದ ಹೊನ್ನಪ್ಪ ಎಂಬುವವರನ್ನ ಕರೆಸಿ ಏರ್ ಗನ್ ನಿಂದ ನಾಯಿಯನ್ನ ಸಾಯಿಸಿದ್ದಾರೆ ಎಂದು ಆರೋಪಿಸಲಾಗಿದ್ದು.ಈ ಬಗ್ಗೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಆದರೆ ಕಲ್ಲಳ್ಳಿ ಗ್ರಾಮದಲ್ಲಿ ಹರಿಲಕ್ಕಯ್ಯ ಎಂಬುವವರ ಗರ್ಭದರಿಸಿದ ಹಸುವೊಂದು ಕರುಹಾಕುವ ವೇಳೆ ಬೀದಿನಾಯಿಯ ಹಿಂಡು ದಾಳಿ ನಡೆಸಿ, ಹಸುವಿನ ಕೆಚ್ಚಲು,ಹಾಗೂ ಗರ್ಭವನ್ನೇ ತಿಂದು ಹಾಕಿದ್ದವು,ಹಲ್ಲಳ್ಳಿ ಗ್ರಾಮದ ಚೌಡಯ್ಯ ಎಂಬುವವರು ತಮ್ಮ ಸಾಕುಹಸುವನ್ನ ಕೊಟ್ಟಿಗೆ ಆಚೆ ಕಟ್ಟೊಹಾಕಿದ್ದಾಗ ದಾಳಿಮಾಡಿದ ನಾಯಿಹಿಂಡು ಹಸುವನ್ನ ಕಚ್ಚಿ ಗಾಯಗೊಳಿಸಿವೆ.ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಅರ್ಚಕ ಸುರೇಶ್ ಪೂಜೆಗೆ ತೆರಳುವಾಗ,ನಾಯಿಗಳು ಕಚ್ಚಿವೆ,ಗ್ರಾಮದಲ್ಲಿ ಮನುಷ್ಯರು ಮಕ್ಕಳ ಮೇಲೆ ಅನೇಕಭಾರಿ ನಾಯಿಗಳು ಹಿಂಡುದಾಳಿ ನಡೆಸಿವೆ ರಾತ್ರಿವೇಳೆ ಮನುಷ್ಯರು ಓಡಾಡುವುದು ಕಷ್ಟ ಎನ್ನುವಂತಹ ಆತಂಕದ ವಾತವರ ಸೃಷ್ಠಿಯಾಗಿತು.ಹಸು ಕುರಿಗಳ ರಕ್ತದ ರುಚಿಕಂಡ ನಾಯಿಗಳು ಮನುಷ್ಯರು ಮಕ್ಕಳ ಮೇಲೆಯೂ ಸಹ ದಾಳಿ ಮಾಡುತ್ತಿದ್ದವು .ನಾಯಿಗಳ ಉಪಟಳದಿಂದ ಬೇಸತ್ತ ಗ್ರಾಮಸ್ಥರು ನಾಯಿಸಾಯಿಸಿದ್ದಾರೆ ಎನ್ನಲಾಗಿದ್ದು.ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ, ನರಭಕ್ಷಕ ನಾಯಿಗಳು ಮನುಷ್ಯರು ಹಾಗೂ ಸಾಕುಪ್ರಾಣಿಗಳ ಮೇಲೆ ಹಿಂಡೂ ಹಿಂಡಾಗಿ ದಾಳಿನಡೆಸಿ ಸಾಯುಸುತ್ತಿದರೂ ಏನ್ ಮಾಡುವಂತ್ತಿಲ್ಲವೇ. ನಮ್ಮ ಜೀವಕ್ಕೆ ರಕ್ಷಣೆ ಇಲ್ಲವೇ ಎಂದೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಮ್ಮ ಮೇಲೆ ದಾಳಿಮಾಡಲು ಬಂದ ನಾಯಿಯನ್ನ ಸಾಯಿಸಿದರೆ ನಮ್ಮ ಮೇಲೆ ಕೇಸ್ ದಾಖಲಿಸಿದ್ದಾರೆ. ಆದರೇ ಮನುಷ್ಯ ಮಕ್ಕಳಿಗೆ ರಕ್ಷಣೆ ಕೊಡೋರು ಯಾರು ? ಎಂದು ಗ್ರಾಮಸ್ಥರು ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ




