Spread the love

ತಿಪಟೂರು :ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಹಿಂದೂಗಳ ಹತ್ಯೆ ಖಂಡಿಸಿ.ತಿಪಟೂರಿನಲ್ಲಿ ಪಾಕಿಸ್ಥಾನದ ಬಾವುಟಕ್ಕೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ತಿಪಟೂರು ಬಂದ್ ವೇಳೆ ಗ್ರಾಮದೇವತೆ ಶ್ರೀಕೆಂಪಮ್ಮ ದೇವೆ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರಸಭೆ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಯೋತ್ಪಾದನೆಗೆ,ಕುಮ್ಮಕು ನೀಡುತ್ತಿರುವ ಪಾಕಿಸ್ಥಾನದ ಕ್ರಮಖಂಡಿಸಿದ ಪಾಪಿ ಪಾಕಿಸ್ಥಾನ ಧಿಕ್ಕಾರ ಎಂದು ಘೋಷಣೆ ಕೂಗಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು,ಪಾಕಿಸ್ಥಾನದ ಧ್ವಜಕ್ಕೆ ಬೆಂಕಿ ಹಚ್ಚಿ ಕಾಲಿನಿಂದ ತುಳಿದು ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್.ಬಿಜೆಪಿ ಮುಖಂಡ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್.ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್,ಮಾಜಿ ನಗರಸಭಾ ಅಧ್ಯಕ್ಷ ರಾಮ್ ಮೋಹನ್.ಸದಸ್ಯರಾದ ತರಕಾರಿ ಗಂಗಾಧರ್.ಪ್ರಸನ್ನ ಕುಮಾರ್ ಮುಂತ್ತಾದವರು ಉಪಸ್ಥಿತರಿದರು.

error: Content is protected !!