Spread the love

ತಿಪಟೂರು:ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ, ರೋಟರಿ ಗುಲ್ಮೋಹರ್ ಬೆಂಗಳೂರು ,ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ಸೆಪ್ಟಂಬರ್ 28 ರಂದು ಪ್ರಸೂತಿ ತಜ್ಞವೈಧ್ಯರು ಹಾಗೂ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರ ಆಯೋಜನೆ ಮಾಡಲಾಗಿದೆ
ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಖ್ಯಾತ ಪ್ರಸೂತಿ ತಜ್ಞ ವೈದ್ಯರಾದ ಡಾ//ರವಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಹೆರಿಗೆ ವೇಳೆಯಲ್ಲಿ ಅಧಿಕ ರಕ್ತ ಸ್ರಾವದಿಂದ ತಾಯಿ ಹಾಗೂ ಮಗುವಿನ ಮರಣ ಉಂಟಾಗುತ್ತಿದ್ದು,ವೈದ್ಯಕೀಯ ಕ್ಷೇತ್ರದಲ್ಲಿ ಲಭ್ಯವಿರುವ ಸೌಲಭ್ಯಗಳು ಹಾಗೂಕೌಶಲ್ಯ ಹಾಗೂ ಜ್ಞಾನವನ್ನ ಪ್ರಸೂತಿ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ತರಬೇತಿ ನೀಡಲು ಬೆಂಗಳೂರು ಮೂಲದ ಖ್ಯಾತ ವೈದ್ಯರಾದ ಡಾ//ಚಂದ್ರಶೇಖರ್ ಮೂರ್ತಿ ವೈ.ಎಂ ಕಾನ್ಸಲ್ಟಂಟ್ ಯುರೋಗೈನಕಾಲಜಿಸ್ಟ್ ರವರು ಆಗಮಿಸುತ್ತಿದ್ದು ತರಬೇತಿ ನೀಡಲಿದ್ದಾರೆ

ಎಂದು ತಿಳಿಸಿದರು. ರೋಟರಿ ಬೆಂಗಳೂರು ರೋಟರಿ ಗುಲ್ಮೋಹರ್ ಅಧ್ಯಕ್ಷ ರೋಟೆ ಡಾ. ಮುರುಳಿಕೃಷ್ಣ ಮಾತನಾಡಿ ರೋಟರಿ ಗುಲ್ಮೋಹರ್ ಶಿಕ್ಷಣ ಆರೋಗ್ಯ,ಹಾಗೂ ಪರಿಸರ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು ತಿಪಟೂರಿನಲ್ಲಿ ಹಲವಾರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ನೆರವೇರಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ ತಿಪಟೂರಿನಲ್ಲಿ ಸುಮಾರು 40ಜನ ಕ್ಷಯರೋಗಿಗಳನ್ನ ದತ್ತುಪಡೆದಿದ್ದು ಅವರ ವೈದ್ಯಕೀಯ ಹಾಗೂ ಶೃಶ್ರೃಷೆ ನೀಡಲು ಮುಂದಾಗಿದ್ದು ಪ್ರತಿತಿಂಗಳು ರೋಗಿಗಳಿಗೆ ಅಗತ್ಯವಿರುವ ಕಿಟ್ ನೀಡಲಾಗುತ್ತಿದೆ.ಗ್ರಾಮೀಣ ಭಾಗದ ಹೆರಿಗೆ ವೇಳೆ ಮಹಿಳೆಯರ ಮರಣ ಪ್ರಮಾಣ ಜಾಸ್ತಿಯಾಗುತ್ತಿದ್ದು .ಅಧಿಕ ರಕ್ತಸ್ರವ ಮರಣಕ್ಕೆ ಕಾರಣವಾಗುತ್ತಿದೆ ಆದರಿಂದ ತಜ್ಞವೈದ್ಯರು ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು
ಪತ್ರಿಕಾಘೋಷ್ಠಿಯಲ್ಲಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಚನ್ನಕೇಶವ,ರೋಟೆಮಂಜುನಾಥ್.ಐಎಂಎ ಅಧ್ಯಕ್ಷ ಡಾ//ರಾಮೇಗೌಡ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!